ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆರೆ ದಾಟಬೇಡಿ: ಜಸ್‌ಪ್ರೀತ್‌ ಬೂಮ್ರಾ ಮುಂದಿಟ್ಟು ಪಾಕಿಸ್ತಾನ ಎಚ್ಚರಿಕೆ!

PSL franchise Islamabad United use Jasprit Bumrah’s no-ball to spread Covid-19 advisory

ಇಸ್ಲಮಾಬಾದ್, ಏಪ್ರಿಲ್ 7: ಮಾರಕ ಕೊರೊನಾವೈರಸ್‌ನಿಂದಾಗಿ ಜಗತ್ತಿನ ಬಹುತೇಕ ದೇಶಗಳ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆತಂಕಕಾರಿಯಾಗಿ ಹಬ್ಬುತ್ತಿರುವ ಸೋಂಕಿನ ಭೀತಿಯಿಂದಾಗಿ ಹೆಚ್ಚಿನ ದೇಶಗಳಲ್ಲಿ ನಿಷೇಧ ಜಾರಿಯಲ್ಲಿದೆ. ನಿಷೇಧದಿಂದ ಒಂದೆಡೆ ಪರಿಣಾಮಕಾರಿಯಾಗಿ ಕೊರೊನಾ ಹರಡದಂತೆ ತಡೆಯಲು ಸಾಧ್ಯವಾದರೆ, ಇನ್ನೊಂದೆಡೆ ದಿನಗೂಲಿ ನೌಕರರ, ಬಡವರ, ದುರ್ಬಲರ ಸ್ಥಿತಿ ಸಂಕಷ್ಟದಲ್ಲಿದೆ. ಭಾರತದಲ್ಲೂ ಇದೇ ಪರಿಸ್ಥಿತಿಯಿದೆ.

ಕೊಹ್ಲಿ ಬ್ಯಾಟ್‌ನಿಂದ ಬಂದಿಲ್ಲ , ಸಚಿನ್‌ಗೆ 24 ವರ್ಷದಲ್ಲಿ ಸಾಧ್ಯವಾಗಿಲ್ಲ!ಕೊಹ್ಲಿ ಬ್ಯಾಟ್‌ನಿಂದ ಬಂದಿಲ್ಲ , ಸಚಿನ್‌ಗೆ 24 ವರ್ಷದಲ್ಲಿ ಸಾಧ್ಯವಾಗಿಲ್ಲ!

ಕೊರೊನಾವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ, ಇತರರಿಗೆ ಸೋಂಕು ಹರಡದಂತೆ ಮುಂಜಾಗೃತೆ ವಹಿಸುವಂತೆ ಅನೇಕ ಕ್ರೀಡಾಪಟುಗಳು ಕೋರಿಕೊಳ್ಳುತ್ತಲೇ ಇದ್ದಾರೆ. ಭಾರತದ ನೆರೆಯ ದೇಶ ಪಾಕಿಸ್ತಾನದಲ್ಲೂ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ.

ಕೊರೊನಾ ವೈರಸ್ ಹಾವಳಿಕೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!ಕೊರೊನಾ ವೈರಸ್ ಹಾವಳಿಕೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!

ತಮ್ಮ ದೇಶದಲ್ಲಿ ಜನಜಾಗೃತಿ ಮೂಡಿಸುವುದಕ್ಕಾಗಿ ಪಾಕಿಸ್ತಾನ, ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಬಳಸಿಕೊಂಡಿರುವುದು ವಿಶೇಷವೆನಿಸಿದೆ.

ಬೂಮ್ರಾ ಬಳಸಿಕೊಂಡಿದ್ದೇಕೆ?

ಬೂಮ್ರಾ ಬಳಸಿಕೊಂಡಿದ್ದೇಕೆ?

ಪಾಕಿಸ್ತಾನದಲ್ಲಿ ಕೊರನಾವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಪಾಕಿಸ್ತಾನ ಕ್ರಿಕೆಟ್‌ ಆಟಗಾರರನ್ನು ಬಳಸಿಕೊಳ್ಳಬಹುದಿತ್ತು. ಆದರೆ ಜಸ್‌ಪ್ರೀತ್‌ ಬೂಮ್ರಾ ಅವರ ಮುಖಾಂತರ ಜನರಿಗೆ ಸಂದೇಶ ತಲುಪಿಸಲು ಮುಂದಾಗುವ ಮೂಲಕ ಪಾಕ್ ಅಚ್ಚರಿ ಮೂಡಿಸಿದೆ. ಬಹುಶಃ ಹೆಚ್ಚು ಜನರಿಗೆ ಸಂದೇಶ ತಲುಪಲು ಪಾಕ್ ಇಂಥ ವಿಭಿನ್ನ ಮಾರ್ಗ ಕಂಡುಕೊಂಡಿರಬಹುದು.

ಪಾಕ್‌ನಲ್ಲಿ ಸೋಂಕಿತರು

ಪಾಕ್‌ನಲ್ಲಿ ಸೋಂಕಿತರು

ಸೋಮವಾರ (ಏಪ್ರಿಲ್ 6) ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ದೃಢಪಟ್ಟವರ ಸಂಖ್ಯೆ 3,277 ಇತ್ತು. ಇದರಲ್ಲಿ 50 ಮಂದಿ ಸಾವನ್ನಪ್ಪಿದ್ದರೆ, 257 ಮಂದಿ ಗುಣಮುಖರಾಗಿದ್ದರು. ಭಾರತದಲ್ಲಿ 4,281 ಸೋಂಕು ದೃಢಪಟ್ಟಿದ್ದರೆ, 111 ಮಂದಿ ಮೃತರಾಗಿ, 319 ಮಂದಿ ಚೇತರಿಸಿಕೊಂಡಿದ್ದರು.

ಬೂಮ್ರಾ ಚಿತ್ರ ಹಾಕಿ ಸಂದೇಶ

ಬೂಮ್ರಾ ಚಿತ್ರ ಹಾಕಿ ಸಂದೇಶ

ಪಾಕಿಸ್ತಾನ್ ಸೂಪರ್‌ಲೀಗ್‌ (ಪಿಎಸ್‌ಎಲ್‌)ನ ಫ್ರಾಂಚೈಸಿ, ಇಸ್ಲಮಾಬಾದ್ ಯುನೈಟೆಡ್ (ಐಯು) ಜನಜಾಗೃತಿಗಾಗಿ ವಿಭಿನ್ನ ಮಾರ್ಗ ಕಂಡುಕೊಂಡಿದೆ. ಟ್ವೀಟ್‌ ಮಾಡಿರುವ ಐಯು ಜಸ್‌ಪ್ರೀತ್ ಬೂಮ್ರಾ ಅವರು ನೋ ಬಾಲ್ ಎಸೆಯುತ್ತಿರುವ ಚಿತ್ರ ಹಾಕಿ ಸಂದೇಶ ಬರೆದುಕೊಂಡಿದೆ.

ಗೆರೆ ದಾಟಬೇಡಿ ಎಂದು ಎಚ್ಚರಿಕೆ

ಇಸ್ಲಮಾಬಾದ್ ಯುನೈಟೆಡ್ ಮಾಡಿರುವ ಟ್ವೀಟ್‌ನಲ್ಲಿ, 'ಗೆರೆ ದಾಟಬೇಡಿ. ಗೆರೆ ದಾಟಿದರೆ ಬೆಲೆ ತೆರಬೇಕಾದೀತು. ಅನಗತ್ಯವಾಗಿ ನಿಮ್ಮ ಮನೆ ಬಿಟ್ಟು ಹೊರಗೆ ಬರಬೇಡಿ. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಿ. ವ್ಯಕ್ತಿ ವ್ಯಕ್ತಿಗಳ ಮಧ್ಯೆ ಅಂತವಿದ್ದರೂ ಹೃದಯ, ಮನಸ್ಸುಗಳು ಹತ್ತಿರಲಿರಲಿ' ಎಂದು ಅರ್ಥಪೂರ್ಣ ಸಂದೇಶ ಬರೆದುಕೊಳ್ಳಲಾಗಿದೆ.

Story first published: Tuesday, April 7, 2020, 10:02 [IST]
Other articles published on Apr 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X