ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಭೀತಿ : ಪಾಕಿಸ್ತಾನ ಸೂಪರ್ ಲೀಗ್ ಮುಂದೂಡಿಕೆ

PSL Playoffs Postponed Amid Coronavirus Fears
MS Dhoni leaves Chennai after IPL 2020 postponed till April 15 | IPL2020 | Dhoni Return to Home

ವಿಶ್ವದ ಬಹುತೇಕ ಎಲ್ಲಾ ಕ್ರೀಡಾಕೂಟಗಳೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಆದರೆ ಪಾಕಿಸ್ತಾನದ ಟಿ20 ಕ್ರಿಕೆಟ್ ಲೀಗ್ ಪಿಎಸ್‌ಎಲ್‌ ಮಾತ್ರ ವೀಕ್ಷಕರನ್ನು ಹೊರಗಿಟ್ಟು ನಡೆಸುತ್ತೇವೆ ಎಂದು ಭಂಡ ಧೈರ್ಯವನ್ನು ತೋರಿಸಿತ್ತು. ಆದರೆ ಈಗ ಪಿಸಿಬಿಗೂ ಬಿಸಿ ಮುಟ್ಟಿದ್ದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಪಾಕಿಸ್ತಾನ ಸೂಪರ್ ಲೀಗ್‌ನ ಲೀಗ್ ಹಂತ ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲೂ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಇನ್ನು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಮನಸು ಮಾಡಿಲ್ಲ.

'ಜೀವ ಕ್ರಿಕೆಟ್‌ಗಿಂತ ಹೆಚ್ಚು' ಎಂದು ಪಿಎಸ್‌ಎಲ್‌ಅನ್ನು ಅರ್ಧಕ್ಕೆ ತೊರೆದ ಆಸಿಸ್ ಕ್ರಿಕೆಟಿಗ'ಜೀವ ಕ್ರಿಕೆಟ್‌ಗಿಂತ ಹೆಚ್ಚು' ಎಂದು ಪಿಎಸ್‌ಎಲ್‌ಅನ್ನು ಅರ್ಧಕ್ಕೆ ತೊರೆದ ಆಸಿಸ್ ಕ್ರಿಕೆಟಿಗ

ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನ್ನು ಪಿಸಿಬಿ ಮುಂದೂಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪಿಎಸ್‌ಎಲ್ ಮುಂದೂಡಿಕೆ

ಪಿಎಸ್‌ಎಲ್ ಮುಂದೂಡಿಕೆ

ಪಾಕಿಸ್ತಾನ ಸೂಪರ್ ಲೀಗ್‌ನ್ನು ಮುಂದೂಡುವ ನಿರ್ಧಾರವನ್ನು ಇಂದು ತೆಗೆದುಕೊಂಡಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಯಾವುದೇ ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಪಿಸಿಬಿ ಮುಂದುವರಿಸಿಕೊಂಡು ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ.

ಲೀಗ್ ಹಂತ ಮುಕ್ತಾಯ

ಲೀಗ್ ಹಂತ ಮುಕ್ತಾಯ

ಪಾಕಿಸ್ತಾನ ಸೂಪರ್ ಲೀಗ್‌ನ ಲೀಗ್‌ ಹಂತದ ಎಲ್ಲಾ ಪಂದ್ಯಗಳೂ ಮುಕ್ತಾಯವಾಗಿದೆ. 30 ಲೀಗ್ ಹಂತದ ಪಂದ್ಯಗಳ ಮುಕ್ತಾಯದ ಬಳಿಕ ಈ ನಿರ್ಧಾರವನ್ನು ಪಿಸಿಬಿ ಪ್ರಕಟಗೊಳಿಸಿದೆ. ಸೆಮಿ ಫೈನಲ್‌ನ ಎರಡು ಪಂದ್ಯಗಳು ಮತ್ತು ಫೈನಲ್ ಪಂದ್ಯ ಮಾತ್ರವೇ ಈಗ ಉಳಿದುಕೊಂಡಿದೆ.

ಯಾವೆಲ್ಲಾ ತಂಡಗಳು ಸೆಮಿಸ್‌ಗೆ

ಯಾವೆಲ್ಲಾ ತಂಡಗಳು ಸೆಮಿಸ್‌ಗೆ

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ನಾಲ್ಕು ತಂಡಗಳು ಉಪಾಂತ್ಯಕ್ಕೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಲ್ತಾನ್ ಸುಲ್ತಾನ್ಸ್, ಕರಾಚಿ ಕಿಂಗ್ಸ್‌, ಪೇಷಾವರ್ ಝಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳು ಸೆಮಿ ಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿದೆ.

ಮಂಗಳವಾರ ನಡೆಯಬೇಕಿತ್ತು ಉಪಾಂತ್ಯ ಪಂದ್ಯಗಳು

ಮಂಗಳವಾರ ನಡೆಯಬೇಕಿತ್ತು ಉಪಾಂತ್ಯ ಪಂದ್ಯಗಳು

ಪಾಕಿಸ್ತಾನ ಸೂಪರ್ ಲೀಗ್‌ನ ಉಪಾಂದ್ಯದ ಪಂದ್ಯಗಳು ಮಂಗಳವಾರದಂದು ನಡೆಯಬೇಕಾಗಿತ್ತು. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡ ಪೇಷಾವರ್ ಮುಖಾಮುಖಿಯಾಗಬೇಕಿದ್ದರೆ ಎರಡನೇ ಸೆಮಿ ಫೈನಲ್‌ನಲ್ಲಿ ಕರಾಚಿ ಕಿಂಗ್ಸ್‌ ಮತ್ತು ಲಾಹೋರ್ ಖಲಂದರ್ಸ್ ಮುಖಾಮುಖಿಯಾಗಬೇಕಾಗಿತ್ತು. ಇದರಲ್ಲಿ ಗೆದ್ದ ತಂಡಗಳು ನಾಳೆ ನಡೆಯಬೇಕಿದ್ದ ಪೈನಲ್ ಪಂದ್ಯದಲ್ಲಿ ಕಣಕ್ಕಿಳಿಯ ಬೇಕಾಗಿತ್ತು. ಆದರೆ ಈ ಪಂದ್ಯಗಳು ಮುಂದೂಡಿಕೆಯಾಗಿದೆ.

ವಿದೇಶಿ ಆಟಗಾರರು ಮೊದಲೇ ವಾಪಾಸ್

ವಿದೇಶಿ ಆಟಗಾರರು ಮೊದಲೇ ವಾಪಾಸ್

ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ಈ ಬಾರಿ ಸಾಕಷ್ಟು ವಿದೇಶಿ ಆಟಗಾರರು ಪಾಲ್ಗೊಂಡಿದ್ದರು. ಅದರಲ್ಲಿ ಅಲೆಕ್ಸ್ ಹೇಲ್ಸ್, ಜೇಸನ್ ರಾಯ್, ಟೈಮಲ್ ಮಿಲ್ಸ್, ವೆಸ್ಟ್ ಇಂಡೀಸ್‌ನ ಕಾರ್ಲೋಸ್ ಬ್ರಾಥ್‌ವೆಟ್ ಈ ಹಿಂದೆಯೇ ತಮ್ಮ ದೇಶಕ್ಕೆ ಮರಳಿದ್ದರು. ಸೋಮವಾರ ಆಸ್ಟ್ರೇಲಿಯಾದ ಕ್ರಿಸ್ ಲಿನ್ ಕೂಡ ವಾಪಸ್ಸಾಗುವ ನಿರ್ಧಾರವನ್ನು ಪ್ರಕಟಿಸಿದ್ದರು.

Story first published: Tuesday, March 17, 2020, 16:21 [IST]
Other articles published on Mar 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X