ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಹಾನೆ, ಪೂಜಾರ ಇಬ್ಬರೂ ಬೇಡ: ಭಾರತ ತಂಡಕ್ಕೆ ಮತ್ತೋರ್ವ ಆಟಗಾರನ ಪದಾರ್ಪಣೆ ಬಯಸಿದ ಮಾಜಿ ಆಟಗಾರ

Pujara and Rahane Would leave them both out: Harmison wants new player for India

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡಿವ ಬಳಗ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಮತ್ತೆ ಸೇರಿಕೊಳ್ಳುವ ಕಾರಣ ಅವರಿಗಾಗಿ ಸ್ಥಾನ ಬಿಟ್ಟುಕೊಡುವ ಆಟಗಾರ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇನ್ನು ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಫರ್ಮ್ ಬಗ್ಗೆಯೂ ಟೀಕೆ ಜೋರಾಗಿ ಕೇಳಿ ಬರುತ್ತಿದ್ದು ಈ ಆಟಗಾರರನ್ನು ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಇದೇ ಚರ್ಚೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಟೀವ್ ಹಾರ್ಮಿಸನ್ ಪ್ರತಿಕ್ರಿಯಿಸಿದ್ದಾರೆ. ಮುಂಬೈನಲಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಇಬ್ಬರನ್ನು ಕೂಡ ಹೊರಗಿಡಬೇಕೆಂದು ಹಾರ್ಮಿಸನ್ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಮತ್ತೋರ್ವ ಆಟಗಾರ ಪದಾರ್ಪಣೆ ಮಾಡಬೇಕೆಂದು ಬಯಸಿದ್ದಾರೆ.

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶ್ರೇಯಸ್ ಐಯ್ಯರ್ ಪದಾರ್ಪಣೆಮಾಡಿ ಮಿಂಚಿದ್ದರು. ಈ ಪಂದ್ಯದಲ್ಲಿ ಐಯ್ಯರ್ ಭರ್ಜರಿ ಶತಕ ಹಾಗೂ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಇದೀಗ ಎರಡನೇ ಪಂದ್ಯದಲ್ಲಿ ತಂಡದ ಮತ್ತೋರ್ವ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್‌ಗೆ ಕೂಡ ಪದಾರ್ಪಣೆ ಮಾಡಲು ಅವಕಾಶ ನಿಡಬೇಕೆಂದು ಹಾರ್ಮಿಸನ್ ಹೇಳಿದ್ದಾರೆ.

"ನನ್ನ ಪ್ರಕಾರ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಇಬ್ಬರು ಕೂಡ ಸ್ಥಾನವನ್ನು ಬಿಟ್ಟುಕೊಡಬೇಕು. ಈ ಇಬ್ಬರ ಮೇಲೆಯೂ ಸಾಕಷ್ಟು ಪ್ರಶ್ನೆಗಳು ಇದೆ. ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ಪರವಾಗಿ ಆಡುವ ಸೂರ್ಯಕುಮಾರ್ ಯಾದವ್ ಮುಂಬೈ ಮೈದಾನದಲ್ಲಿ ಆಡಿ ಉತ್ತಮ ಅನುಭವ ಹೊಂದಿದ್ದಾರೆ. ಅವರು ಕೆಎಲ್ ರಾಹುಲ್ ಸ್ಥಾನವನ್ನು ತುಂಬಬಲ್ಲರು. ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರ ಆಟ ಮುಗಿದಂತೆ ಕಾಣಿಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಮೈದಾನದಿಂದ ಹೊರನಡೆದಾಗ ಭಾರತದ ಪರವಾಗಿ ಕೊನೆಯ ಬಾರಿ ಮೈದಾನ ತೊರೆಯುತ್ತಿರುವಂತೆ ಅವರಿಗೆ ತಿಳಿದಂತಿತ್ತು" ಎಂದಿದ್ದಾರೆ ಹಾರ್ಮಿಸನ್.

"ಅಗ್ರ ಕ್ರಮಾಂಕದಲ್ಲಿ ಆಡುವ ಚೇತೇಶ್ವರ್ ಪೂಜಾರ ಶತಕ ಸಿಡಿಸದೆ ಇಗಾಗಲೇ 39 ಇನ್ನಿಂಗ್ಸ್ ಕಳೆದಿದೆ. ಅಗ್ರ 6 ಕ್ರಮಾಂಕದಲ್ಲಿ ಆಡುವ ಆಟಗಾರನಿಗೆ ಇದು ಸಿಕ್ಕ ಸುದೀರ್ಘ ಅವಕಾಶವಾಗಿದೆ. ಹಾಗಿದ್ದರೂ ಈ ಆಟಗಾರ ಇನ್ನು ಕೂಡ ಟೀಮ್ ಇಂಡಿಯಾದಲ್ಲಿ ಸ್ಥಾನ ಗಳಿಸುತ್ತಿದ್ದಾರೆ. ಈ ಅವಕಾಶವನ್ನು ಸಾಕಷ್ಟು ಆಟಗಾರರು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೀವು ಮತ್ತೋರ್ವ ಹೊಸ ಆಟಗಾರನನ್ನು ನೋಡಲು ಬಯಸುತ್ತೀರಿ" ಎಂದು ಸ್ಟೀವ್ ಹಾರ್ಮಿಸನ್ ತಮ್ಮ ಯೂಟ್ಬೂಬ್ ಚಾನೆಲ್‌ನ್ಲಲಿ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತ vs ನ್ಯೂಜಿಲೆಂಡ್‌ 2ನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಅಡ್ಡಿಯಾದ ಮಳೆರಾಯ!ಭಾರತ vs ನ್ಯೂಜಿಲೆಂಡ್‌ 2ನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಅಡ್ಡಿಯಾದ ಮಳೆರಾಯ!

"ನಾನು ಇಬ್ಬರು ಆಟಗಾರರನ್ನು ಕೂಡ ಹೊರಗಿಡಲು ಬಯಸುತ್ತೇನೆ ಅವರಿಂದ ಬಹಳ ಕೆಟ್ಟ ಪ್ರದರ್ಶನ ಬಂದಿದೆ. ಯಾಕೆಂದರೆ ಖಂಡಿತವಾಗಿಯೂ ವಿರಾಟ್ ಕೊಹ್ಲಿಯನ್ನು ತಂಡದೊಳಗೆ ಸೇರಿಸಿಕೊಳ್ಳಬೇಕಿದೆ. ಹಾಗಾದರೆ ಮುರನೇ ಕ್ರಮಾಂಕದಲ್ಲಿ ಆಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ನನ್ನ ಪ್ರಕಾರ ಈ ಇಬ್ಬರಲ್ಲಿ ಒಬ್ಬರನ್ನು ತಂಡದಿಂದ ಹೊರಗಿಡುವುದು ಕಠಿಣ ನಿರ್ಧಾರವಾಗುತ್ತದೆ. ಟೀಮ್ ಇಂಡಿಯಾ ಇಬ್ಬರು ಆಟಗಾರರನ್ನು ಕೂಡ ಬದಲಾಯಿಸುವ ಸಂದರ್ಭ ಬಂದಿದೆ ಎಂದು ನನಗೆ ಅನಿಸುತ್ತಿದೆ" ಎಂದಿದ್ದಾರೆ ಸ್ಟೀವ್ ಹಾರ್ಮಿಸನ್.

ಟೀಮ್ ಇಂಡಿಯಾ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಶ್ರೀಕರ್ ಯಾದವ್, ಜಯಂತ್ ಸಿರಾಜ್ , ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್

ನ್ಯೂಜಿಲೆಂಡ್ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಟಾಮ್ ಲ್ಯಾಥಮ್, ವಿಲ್ ಯಂಗ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್‌ವಿಲ್ಲೆ, ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಮಿಚೆಲ್, ನೀಲ್ ವ್ಯಾಗ್ನರ್, ಗ್ಲೆನ್ ಮಿಚೆಲ್

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

Story first published: Thursday, December 2, 2021, 22:01 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X