ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್‌ ಹಜಾರೆ ಟೂರ್ನಿ: ರೋಚಕ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲು

By Manjunatha
Punjab cricket team beats Karnataka in a thriller match

ಬೆಂಗಳೂರು, ಫೆಬ್ರವರಿ 12: ವಿಜಯ್ ಹಜಾರೆ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಕೊನೆ ಓವರ್‌ವರೆಗೆ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ಸೋತಿತು. ಯುವರಾಜ್ ಸಿಂಗ್ ನಾಯಕರಾಗಿದ್ದ ಪಂಜಾಬ್‌ ತಂಡ ಕೇವಲ 4 ರನ್‌ಗಳ ಗೆಲುವು ಕಂಡಿತು.

ಆಲೂರಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೊರಾಟ ನಡೆಸಿದವಾದರೂ ವಿಜಯ ಲಕ್ಷ್ಮಿ ಪಂಜಾಬ್‌ ಪಾಲಾಯಿತು. ರಾಜ್ಯದ ಪರ ಕೆ.ಎಲ್.ರಾಹುಲ್ ಗಳಿಸಿದ ಶತಕ ವ್ಯವರ್ಥವಾಯಿತು. ಆದರೆ ಇತ್ತಂಡಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೀಯರಿಗೆ ಭರ್ಜರಿ ಮನರಂಜನೆ ನೀಡಿದವು.

ತಡವಾಗಿ ಪ್ರಾರಂಭವಾದ ಕಾರಣ 42 ಓವರ್‌ಗಳಿಗೆ ಸೀಮಿತಗೊಳಿಸಿದ್ದ ಪಂದ್ಯದಲ್ಲಿ ಪಂಜಾಬ್‌ ನೀಡಿದ 269 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಕೊನೆಯ ಓವರ್‌ಗಳ ವರೆಗೆ ಹೋರಾಟ ನಡೆಸಿತು. ಆದರೆ 4 ರನ್‌ಗಳಿಂದ ಸೋಲನ್ನು ಒಪ್ಪಿಕೊಂಡಿತು. ಕೊನೆಯ ಓವರ್‌ನಲ್ಲಿ ರಾಜ್ಯ ಗೆಲ್ಲಲು 13 ರನ್‌ಗಳ ಅವಶ್ಯಕತೆ ಇತ್ತು. ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ವಿನಯ್‌ಕುಮಾರ್ ಬೌಂಡರಿ ಸಿಡಿಸಿದರು ಆದರೆ ಆ ನಂತರ ಪಂಜಾಬ್‌ನ ಬೌಲರ್‌ ಬರೀಂದರ್‌ ಸಾನ್‌ ಉಳಿದ ರನ್‌ಗಳನ್ನು ಗಳಿಸಲು ಅವಕಾಶ ನೀಡಲಿಲ್ಲ.

ಅನುಭವಿಗಳಿಗೆ ಬೆವರಿಳಿಸಿದ 18ರ ಪೋರ

ಅನುಭವಿಗಳಿಗೆ ಬೆವರಿಳಿಸಿದ 18ರ ಪೋರ

ವರ್ಲ್ಡ್‌ ಕಪ್ ವಿಜೇತ 19ವರ್ಷದ ತಂಡದಲ್ಲಿ ಆಡಿ ಬಂದಿರುವ ಶುಬ್‌ಮನ್‌ ಗಿಲ್‌ ಭರ್ಜರಿ ಶತಕಗಳಿಸುವ ಮೂಲಕ ತಾವು ಕಿರಿಯರ ತಂಡದಕಷ್ಟೆ ಅಲ್ಲ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಲೂ ಶಕ್ತರಿರುವುದಾಗಿ ಸಾಬೀತು ಮಾಡಿಬಿಟ್ಟರು. ವಿನಯ್‌ಕುಮಾರ್, ಪ್ರಸಿದ್ಧ೦ ಕೃಷ್ಣ, ಪ್ರವೀಣ್ ದುಬೆ ಅವರಂತಹಾ ಅನುಭವಿ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಅವರು ಆತ್ಮವಿಶ್ವಾಸದ ಇನ್ನಿಂಗ್ಸ್‌ ಕಟ್ಟಿದರು.

ಹಿರಿಯರಿಗೆ ಕಿರಿಯನ ಸವಾಲ್

ಹಿರಿಯರಿಗೆ ಕಿರಿಯನ ಸವಾಲ್

ಕೇವಲ 18 ವರ್ಷ ವಯಸ್ಸಿನ ಶುಬ್‌ಮನ್ ಗಿಲ್‌ ಪಂಜಾಬ್‌ ಪರ ನಿನ್ನೆಯ ಪಂದ್ಯದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದರು. 122 ಎಸೆತ ಎದುರಿಸಿ 123 ರನ್ ಗಳಿಸಿ ಔಟಾಗದೆ ಉಳಿದರು ಶುಬ್‌ಮನ್‌ ಗಿಲ್‌. ಘಟಾನುಗಟಿ ಬೌಲರ್‌ಗಳಿಗೂ ಬೆವರಿಳಿಸಿದ ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳಿವೆ. ಅವರಿಗೆ ಅತ್ಯುತ್ತಮ ಜೊತೆಯಾಟ ನೀಡಿದ ಮನದೀಪ್ ಸಿಂಗ್ 64 ರನ್ ಗಳಿಸಿದರು ಅವರ ನಂತರ ಯುವರಾಜ್ ಸಿಂಗ್ 36 ಮತ್ತು ಗುರುಕೀರತ್ ಸಿಂಗ್ 35 ರನ್ ಗಳಿಸಿದರು. ಪಂಜಾಬ್‌ ಕರ್ನಾಟಕದ ಮುಂದೆ 269 ರನ್‌ಗಳ ಗುರಿ ನೀಡಿತು.

88 ಬಾಲ್‌ಗಳಲ್ಲಿ ಶತಕ

88 ಬಾಲ್‌ಗಳಲ್ಲಿ ಶತಕ

ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ರಾಹುಲ್ ಈ ಪಂದ್ಯದಲ್ಲಿ ಪರಾರಂಭದಲ್ಲಿ ಎಚ್ಚರಿಕೆ ಆಟವಾಡಿದರು. ಅವರು ಖಾತೆ ತೆರೆಯಲು 18 ಬಾಲ್ ತೆಗೆದುಕೊಂಡರು ಆದರೆ ಅರ್ಧ ಶತಕ ಗಳಿಸಿದ ನಂತರ ವೇಗವಾಗಿ ಬ್ಯಾಟ್ ಬೀಸಿ ಕೇವಲ 88 ಬಾಲ್‌ಗಳಲ್ಲೇ ಶತಕ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಪವನ್ ದೇಶಪಾಂಡೆ 53 ರನ್ ಗಳಿಸಿದರು. ಪಂದ್ಯ ಗೆದ್ದಿರುವ ಪಂಜಾಬ್‌ಗೆ 4 ಪಾಯಿಂಟ್ಸ್‌ ಲಭ್ಯವಾಗಿದೆ. ಕರ್ನಾಟಕ ಮುಂದಿನ ಪಂದ್ಯ ನಾಳೆ ಒಡಿಶಾ ವಿರುದ್ಧ ನಡೆಯಲಿದೆ.

ರಾಹುಲ್ ಬಿರುಸಿನ ಆಟ

ರಾಹುಲ್ ಬಿರುಸಿನ ಆಟ

ರಾಹುಲ್ ಮತ್ತು ಪವನ್ ಅವರು ಅತ್ಯುತ್ತಮ ಜೊತೆಯಾಟ ಆಡಿದರು. ಬಿರುಸಿನ ಆಟ ಆಡಿದ ಪವನ್‌ ರಾಹುಲ್‌ಗಿಂತ ಮೊದಲೇ ಪವನ್ ಅರ್ಧಶತಕದ ಗಡಿ ದಾಟಿದರು. ಗುರುಕೀರತ್ ಮಾನ್ ಎಸೆತದಲ್ಲಿ ಪವನ್ ಎತ್ತಿದ ಸಿಕ್ಸರ್‌ಗೆ ಚೆಂಡು ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿಗೆ ಅಪ್ಪಳಿಸಿತು. ಸ್ಪಿನ್ನರ್ ಅಭಿಷೇಕ್ ಶರ್ಮಾ ಎಸೆತದಲ್ಲಿ ಪವನ್ ಔಟಾದ ನಂತರ ರಾಹುಲ್ ಬಿರುಸಿನ ಆಟವಾಡಿದರು. ಕೆ. ಗೌತಮ್ (16 ರನ್) ಕೂಡ ಬೀಸಾಟವಾಡಿದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಹೆಚ್ಚಿತು. ಆದರೆ ಅನಿರುದ್ಧ ಜೋಶಿ, ಆರ್. ಸಮರ್ಥ್ ಹೆಚ್ಚು ರನ್‌ ಗಳಿಸಲಿಲ್ಲ.

Story first published: Monday, February 12, 2018, 15:02 [IST]
Other articles published on Feb 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X