ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಕೋಲ್ಕತಾ ವಿರುದ್ಧ ಪಂಜಾಬ್ ಗೆ 9 ವಿಕೆಟ್ ಗಳ ಜಯ

Punjab won the toss and chose bowling

ಕೋಲ್ಕತ್ತ, ಏಪ್ರಿಲ್ 21: ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದ ಕಿಂಗ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಬೌಲಿಂಗ್ ಆಯ್ದುಕೊಂಡರು. ಕೆಕೆಆರ್ ತಂಡ ಕ್ರಿಸ್ ಲಿನ್ 74, ಉತ್ತಪ್ಪ 34 ಹಾಗೂ ದಿನೇಶ್ ಕಾರ್ತಿಕ್ 43 ರನ್ ನೆರವಿನಿಂದ 191/7 ಸ್ಕೋರ್ ಮಾಡಿತ್ತು. ಆದರೆ, ಮಳೆ ಅಡ್ಡಿ ಪಡಿಸಿದ್ದರಿಂದ 125ರನ್ ಗಳ ಗುರಿ ನೀಡಲಾಯಿತು.

ಕೆಎಲ್ ರಾಹುಲ್ 60ರನ್ (27ಎಸೆತ, 9 ಬೌಂಡರಿ, 2 ಸಿಕ್ಸರ್), ಕ್ರಿಸ್ ಗೇಲ್ ಅಜೇಯ 62ರನ್ (38 ಎಸೆತ, 5 ಬೌಂಡರಿ, 6ಸಿಕ್ಸರ್) ಸಿಡಿಸಿ 11.1 ಓವರ್ ಗಳಲ್ಲಿ 126/1 ಸ್ಕೋರ್ ಮಾಡಿ ಗೆಲುವು ತಂದರು.

ಕೆಕೆಆರ್ ತಂಡ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಹಿಮದಿನ ಪಂದ್ಯದಲ್ಲಿ ಆಡಿತ ತಂಡವೇ ಕಣಕ್ಕಿಳಿಯಲಿದೆ. ಹಿಂದಿನ ಪಂದ್ಯಗಳಲ್ಲಿ ದುಬಾರಿ ಎನಿಸಿದ್ದ ವೇಗದ ಬೌಲರ್ ಮೋಹಿತ್ ಶರ್ಮಾ ಬದಲು ಅಂಕಿತ್ ರಜಪೂತ್ ಆಡುತ್ತಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್,

ಐಪಿಎಲ್ 2018ರ ಆವೃತ್ತಿಯ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ನಾಲ್ಕನೆ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಮೊದಲ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಗೆದ್ದ ತಂಡ ಅಂಕಗಳ ಆಧಾರದಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ.

ಇಲ್ಲಿ ಗೇಲ್, ಅಲ್ಲಿ ರಸೆಲ್
ಜಮೈಕಾದ ಇಬ್ಬರು ದೈತ್ಯರ ಮೇಲೆ ಎಲ್ಲರ ಕಣ್ಣಿ ನೆಟ್ಟಿದೆ. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ಕ್ರಿಸ್ ಗೇಲ್, ಕೆಕೆಆರ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆಂಡ್ರೆ ರಸೆಲ್ ನಡುವಿನ ಪೈಪೋಟಿ ಎಂದು ಪರಿಗಣಿಸಲಾಗಿದೆ.

ಪಂಜಾಬ್ ಬ್ಯಾಟಿಂಗ್ ಶಕ್ತಿ
ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್, ಕರುಣ್ ನಾಯರ್ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ಕರ್ನಾಟಕದ ಮೊತ್ತೊಬ್ಬ ಆಟಗಾರ ಮಯಂಕ್ ಅಗರ್‌ವಾಲ್‌ ದೊಡ್ಡ ಮೊತ್ತ ಕಲೆಹಾಕಿಲ್ಲ. ಯುವರಾಜ್ ಸಿಂಗ್ ಮತ್ತು ಆರೋನ್ ಫಿಂಚ್ ಇದುವರೆಗೂ ತಮ್ಮ ಸಾಮರ್ಥ್ಯ ತೆರೆದಿಟ್ಟಿಲ್ಲ. ಬೌಲಿಂಗ್ ವಿಭಾಗದಲ್ಲಿ ನಾಯಕ ಅಶ್ವಿನ್ ಸ್ಪಿನ್ ವಿಭಾಗದ ಸಾರಥ್ಯ ಹೊಂದಿದ್ದಾರೆ. ಅವರಿಗೆ ಮುಜೀಬ್ ಉರ್ ರೆಹಮಾನ್, ಅಕ್ಷರ್ ಪಟೇಲ್ ಇದ್ದಾರೆ, ವೇಗದ ಬೌಲರ್‌ಗಳಾದ ಅಂಕಿತ್ ರಜಪೂತ್, ಬರೀಂದರ್ ಸ್ರಾನ್, ಆಂಡ್ರೂ ಟೈ ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಲ್ಲರು.

ಸಮತೂಕದ ತಂಡ ಕೆಕೆಆರ್
ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಬಲ ಹೊಂದಿದೆ. ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ಬ್ಯಾಟಿಂಗ್ ಹೊಣೆ ನಿಭಾಯಿಸುತ್ತಾರೆ. ಆಂಡ್ರೆ ರಸೆಲ್, ಸುನೀಲ್ ನರೇನ್ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಶಕ್ತಿ ಕೆಕೆಆರ್‌ಗಿದೆ. ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ, ಟಾಮ್ ಕುರ್ರಮ್, ಶಿವಂ ಮವಿ ಬೌಲಿಂಗ್ ಪಡೆ ಸಶಕ್ತವಾಗಿದೆ.

ತಂಡಗಳು ಹೀಗಿವೆ
ಕೋಲ್ಕತ್ತ ನೈಟರ್ ರೈಡರ್ಸ್: ಸುನೀಲ್ ನರೇನ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಶುಬ್ಮನ್ ಗಿಲ್, ಟಾಮ್ ಕುರ್ರನ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್,

ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಯಂಕ್ ಅಗರ್‌ವಾಲ್, ಕರುಣ್ ನಾಯರ್, ಆರೋನ್ ಫಿಂಚ್, ಯುವರಾಜ್ ಸಿಂಗ್, ರವಿಚಂದ್ರನ್ ಅಶ್ವಿನ್, ಆಂಡ್ರೂ ಟೈ, ಬರೀಂದರ್ ಸ್ರಾನ್, ಅಂಕಿತ್ ರಜಪೂತ್, ಮುಜೀಬ್ ಉರ್ ರೆಹಮಾನ್

Story first published: Saturday, April 21, 2018, 23:54 [IST]
Other articles published on Apr 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X