ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಚಿನ್ನ ಸೋತಿಲ್ಲ, ಬೆಳ್ಳಿ ಗೆದ್ದಿದ್ದೇನೆ: ಟೀಕಾಕಾರರಿಗೆ ಸಿಂಧು ತಿರುಗೇಟು!

ನಾನು ಚಿನ್ನ ಸೋತಿಲ್ಲ, ಬೆಳ್ಳಿ ಗೆದ್ದಿದ್ದೇನೆ ಎಂದ ಸಿಂಧು | Oneindia Kannada
PV Sindhu hits back at critics with bold Instagram post

ನವದೆಹಲಿ, ಆಗಸ್ಟ್ 8: ಇತ್ತೀಚೆಗೆ (ಆಗಸ್ಟ್ 5) ನಡೆದ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಪಿವಿ ಸಿಂಧು ಅವರು ಸ್ಪೇನ್ ಆಟಗಾರ್ತಿ ಕೆರೊಲಿನಾ ಮರಿನ್ ಎದುರು ಸೋತಿದ್ದರು. ಫೈನಲ್ ನಲ್ಲಿ ಸೋಲುತ್ತಿರುವುದಕ್ಕೆ ಸಿಂಧುವನ್ನು ಕೆಲವರು ಟೀಕಿಸಿದ್ದರು. ಟೀಕಾಕಾರರ ಈ ಚುಚ್ಚು ಮಾತಿಗೆ ಸಿಂಧು ಕೊಂಚ ಖಾರವಾಗೇ ತಿರುಗೇಟು ನೀಡಿದ್ದಾರೆ.

ಗೋವಾ ಮೂಲದ ಕ್ರಿಕೆಟರ್ ಗೆ ನಮನ ಸಲ್ಲಿಸಿದ ಗೂಗಲ್ ಡೂಡ್ಲ್ಗೋವಾ ಮೂಲದ ಕ್ರಿಕೆಟರ್ ಗೆ ನಮನ ಸಲ್ಲಿಸಿದ ಗೂಗಲ್ ಡೂಡ್ಲ್

ಭಾನುವಾರ ಮುಕ್ತಾಯಗೊಂಡ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದ ಸಿಂಗಲ್ಸ್ ಫೈನಲ್ ನಲ್ಲಿ ಸಿಂಧು ಅವರು ಕೆರೊಲಿನಾ ಎದುರು 19-21, 10-21ರ ನೇರ ಸೆಟ್ ಸೋಲನುಭವಿಸಿದ್ದರು. ಕಾಕತಾಳೀಯವಾಗಿ ಸಿಂಧು ಪ್ರತೀಸಾರಿ ಫೈನಲ್ ನಲ್ಲಿ ಸೋಲುತ್ತಿರುವುದರಿಂದ ಕೆಲ ಅಭಿಮಾನಿಗಳು ಸಿಂಧುವಿಗೆ 'ಫೈನಲ್ ಫೋಬಿಯಾ' (ಅಂತಿಮ ಸ್ಪರ್ಧೆಯಲ್ಲಿ ಆಡುವ ಭಯ) ಇದೆ ಎಂದು ಟೀಕಿಸಿದ್ದರು.

ಟೀಕಿಗರಿಗೆ ಸ್ವಲ್ಪ ಖಾರವಾಗೇ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಉತ್ತರಿಸಿರುವ ಸಿಂಧು, 'ನನಗೆ ಫೈನಲ್ ಫೋಬಿಯಾ ಇಲ್ಲ. ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇದು ಎರಡನೇ ಬಾರಿಗೆ ಬೆಳ್ಳಿ ಜಯಿಸಿರುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗಿದೆ' ಎಂದಿದ್ದಾರೆ.

'ನಾನು ಚಿನ್ನದ ಪದಕವನ್ನು ಸೋತಿಲ್ಲ, ಬೆಳ್ಳಿಯ ಪದಕ ಗೆದ್ದಿದ್ದೇನೆ. ನಾನು ಗೆದ್ದಿರುವ ಈ ಬೆಳ್ಳಿ ಹೊಳೆಯುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲ' ಎಂದು ಸಿಂಧು ತನ್ನೆಡೆಗಿನ ಟೀಕೆಗೆ ಖಡಕ್ ತಿರುಗೇಟು ನೀಡಿದ್ದಾರೆ.

ಸಿಂಧು 2016ರ ರಿಯೋ ಒಲಿಂಪಿಕ್ಸ ನಲ್ಲಿ ಬೆಳ್ಳಿ ಜಯಿಸದ್ದರು. ಏಪ್ರಿಲ್ ನಲ್ಲಿ ನಡೆದಿದ್ದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಫೈನಲ್ ನಲ್ಲೂ ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಎದುರು ಸಿಂಧು ಸೋತಿದ್ದರು. ಬಹುತೇಕ ಪ್ರತಿಷ್ಠಿತ ಪಂದ್ಯದ ಫೈನಲ್ ನಲ್ಲಿ ಸಿಂಧು ಸೋತಿದ್ದು, ಟೀಕೆಗೆ ಕಾರಣವಾಗಿತ್ತು.

Story first published: Wednesday, August 8, 2018, 19:34 [IST]
Other articles published on Aug 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X