ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೀಮಿತ ಓವರ್‌ಗಳ ತಂಡಕ್ಕೆ ಮರಳುವ ಪ್ರಶ್ನೆಗಳು ನಿಜಕ್ಕೂ ನಗು ತರಿಸುತ್ತದೆ ಎಂದ ಆರ್ ಅಶ್ವಿನ್

Questions regarding white-ball dreams are really laughable: R Ashwin

ಭಾರತದ ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಮರಳುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಆರ್ ಅಶ್ವಿನ್ ಇಂತಾ ಪ್ರಶ್ಬೆಗಳು ಈಗ ನನ್ನಲ್ಲಿ ನಗು ಮೂಡಿಸುತ್ತಿದೆ ಎಂದಿದ್ದಾರೆ. ಈಗ ತಮ್ಮ ಅವಕಾಶದೊಂದಿಗೆ ಸಮಾದಾನವನ್ನು ಹೊಂದಿರುವುದಾಗಿ ಆರ್ ಅಶ್ವಿನ್ ಹೇಳಿದ್ದಾರೆ.

ಆರ್ ಅಶ್ವಿನ್ ಟೀಮ್ ಇಂಡಿಯಾ ಪರವಾಗಿ ಕೊನೆಯದಾಗಿ 2017ರ ಜುಲೈನಲ್ಲಿ ಟೀಮ್ ಇಂಡಿಯಾ ಸೀಮಿತ ಈವರ್‌ಗಳ ತಂಡದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ರವೀಂದ್ರ ಜಡೇಜಾ ಅವರೊಂದಿಗೆ ಆರ್ ಅಶ್ವಿನ್ ಸೀಮಿತ ಓವರ್‌ಗಳ ತಂಡದಿಂದ ಹೊರಬಿದ್ದರು. ಇವರ ಸ್ಥಾನವನ್ನು ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಆಕ್ರಮಿಸಿಕೊಂಡರು. ಆದರೆ ನಂತರದ ದಿನಗಳಲ್ಲಿ ರವೀಂದ್ರ ಜಡೇಜಾ ಮರಳಿ ತಮ್ಮ ಸ್ಥಾನವನ್ನು ಗಳಿಸಿಕೊಳ್ಳಲು ಸಫಲರಾದರೆ ಆರ್ ಅಶ್ವಿನ್ ಮಾತ್ರ ಟೆಸ್ಟ್ ಕ್ರಿಕೆಟ್‌ಗಷ್ಟೇ ಸೀಮಿತರಾದರು.

ಭಾರತ vs ಇಂಗ್ಲೆಂಡ್: ಇನ್ನುಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ!ಭಾರತ vs ಇಂಗ್ಲೆಂಡ್: ಇನ್ನುಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ!

"ನಾನು ನನ್ನೊಂದಿಗೆ ಹೇಗೆ ಇರಬೇಕೆಂಬುದನ್ನು ನಾನು ಕಲಿತಿದ್ದೇನೆ. ಯಾಕೆಂದರೆ ಏಕದಿನ ತಂಡಕ್ಕೆ ಮರಳುವ ಬಗ್ಗೆ, ಟಿ20 ಕ್ರಿಕೆಟ್‌ಗೆ ಮರಳುವ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಆ ಪ್ರಶ್ನೆಗಳು ನನಗೆ ನಿಜವಾಗಿಯೂ ನಗು ತರಿಸುತ್ತದೆ. ಯಾಕೆಂದರೆ ನಾನು ಈಗ ಸಂಒಊರ್ಣವಾಗಿ ಪ್ರಶಾಂತವಾಗಿದ್ದೇನೆ. ಈಗ ನಾನು ಮುನ್ನಡೆಸುತ್ತಿರುವ ಜೀವನ ತುಂಬಾ ಸಂತೋಷಕರವಾಗಿದೆ" ಎಂದು ಆರ್ ಅಶ್ವಿನ್ ಇಂಡಿಯಾ ಟುಡೇ ಜೊತೆಗಿನ ಮಾತುಕತೆಯ ವೇಳೆ ಹಂಚಿಕೊಂಡಿದ್ದಾರೆ.

"ಎಲ್ಲಿಯಾದರೂ ಆಡುವ ಅವಕಾಶಗಳು ನಾನು ಅದನ್ನು ಮುಂದುವರಿಸುವ ಕಾರ್ಯಕ್ಷಮತೆಯನ್ನು ತೋರಿಸುತ್ತೇನೆ. ಯಾಕೆಂದರೆ ನನ್ನನ್ನು ಕಂಡುಕೊಳ್ಳುವ ಅವಕಾಶದ ಬಗ್ಗೆ ನಾನು ಸ್ಪಷ್ಟವಾಗಿ ಹೇಳಬಲ್ಲೆ. ಜನರು ಯಾವ ಪ್ರಶ್ನೆಗಳನ್ನು ಕೇಳುತ್ತಾರೆ, ಯಾವ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬ ವಿಚಾರಗಳ ಬಗ್ಗೆ ನಾನು ಚಿಂತಿಸುವುದಿಲ್ಲ" ಎಂದಿದ್ದಾರೆ ಆರ್ ಅಶ್ವಿನ್.

ಕದ್ದು ತಿಂಡಿ ತಿಂದ ಹಿಟ್‌ಮ್ಯಾನ್ ರೋಹಿತ್ ಶರ್ಮಾ: ವೈರಲ್ ವಿಡಿಯೋಕದ್ದು ತಿಂಡಿ ತಿಂದ ಹಿಟ್‌ಮ್ಯಾನ್ ರೋಹಿತ್ ಶರ್ಮಾ: ವೈರಲ್ ವಿಡಿಯೋ

ಆರ್ ಅಶ್ವಿನ್ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದು ಕಳೆದ ಬಾರಿಯ ಟೂರ್ನಿಯಲ್ಲಿ ಆಡಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಹಾಗೂ ಇಂಗ್ಲೆಂಡ್ ವಿರುದ್ಧ ಬಾರತದಲ್ಲಿ ನಡೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

Story first published: Tuesday, March 16, 2021, 10:49 [IST]
Other articles published on Mar 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X