ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ದ.ಆಫ್ರಿಕಾ: ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡನ್ನು ಮಣಿಸಿದ ದ.ಆಫ್ರಿಕಾ

uinton de Kock Guides South Africa To Seven-wicket ODI Win Over England

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯನ್ನು ಆಘಾತಕಾರಿಯಾಗಿ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯಲ್ಲಿ ತಿರುಗಿ ಬಿದ್ದಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಪೂರ್ಣಕಾಲಿಕ ನಾಯಕನಾಗಿ ಬಡ್ತಿ ಪಡೆದ ಕ್ವಿಂಟನ್ ಡಿಕಾಕ್ ತಮ್ ನಾಯಕತ್ವದ ಮೊದಲ ಪಂದ್ಯದಲ್ಲೇ ಭರ್ಜರಿ ಶತಕವನ್ನು ಸಿಡಿಸುವ ಮೂಲಕ ದ.ಆಫ್ರಿಕಾ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗದ್ದಾರೆ. ಈ ಮೂಲಕ ದ. ಆಫ್ರಿಕಾ ತಂಡ ಏಕದಿನ ಸರಣಿಯಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ.

ಪದಾರ್ಪಣಾ ಪಂದ್ಯದಲ್ಲಿ ಕನ್ನಡಿಗ ಮಯಾಂಕ್, ಪೃಥ್ವಿ ಶಾ ವಿಶೇಷ ದಾಖಲೆಪದಾರ್ಪಣಾ ಪಂದ್ಯದಲ್ಲಿ ಕನ್ನಡಿಗ ಮಯಾಂಕ್, ಪೃಥ್ವಿ ಶಾ ವಿಶೇಷ ದಾಖಲೆ

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 258 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರವಾಗಿ ಪ್ರಮುಖ ಬ್ಯಾಟ್ಸಮನ್‌ಗಳು ವಿಫಲಾದರು. ಜೋ ಡೇನ್ಲಿ 87 ರನ್‌ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರು.

ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಕ ಆಟಗಾರ ರೀಜಾ ಹೆನ್ರಿಕ್ಸ್ 6 ರನ್‌ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರೂ ಬಳಿಕ ಬಂದ ತೆಂಬಾ ಬವುಮಾ ನಾಯಕ ಕ್ವಿಂಟನ್ ಡಿ ಕಾಕ್‌ಗೆ ಉತ್ತಮ ಸಾಥ್ ನೀಡಿದರು. ಶತಕದಂಚಿನಲ್ಲಿ ಎಡವಿದ ಬವುಮಾ 98 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ನಾಯಕ ಡಿ ಕಾಕ್ ಭರ್ಜರಿ 107 ರನ್‌ಗಳಿಸಿದರು.

ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಏಕದಿನ ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ.

Story first published: Wednesday, February 5, 2020, 9:10 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X