ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಉನ್ನತ ಪ್ರಶಸ್ತಿಗೆ ಪಾತ್ರರಾದ ಕ್ವಿಂಟನ್ ಡಿಕಾಕ್, ಲೌರಾ ವೋಲ್ವಾರ್ಟ್

Quinton De Kock, Laura Wolfaardt Scoop Top Honours At Cricket Sa Awards

ದಕ್ಷಿಣ ಆಫ್ರಿಕಾ ಕ್ರಿಕೆಟ್ ನೀಡುವ ಅತ್ಯುನ್ನತ ಪ್ರಶಸ್ತಿಗೆ ಕ್ವಿಂಟನ್ ಡಿಕಾಕ್ ಪಾತ್ರರಾಗಿದ್ದಾರೆ. ಪುರುಷರ ವಿಭಾಗದಲ್ಲಿ 'ವರ್ಷದ ಕ್ರಿಕೆಟಿಗ' ಪ್ರಶಸ್ತಿಗೆ ಕ್ವಿಂಟನ್ ಡಿಕಾಕ್ ಪಾತ್ರರಾಗಿದ್ದು ಶನಿವಾರ ಈ ಪ್ರಶಸ್ತಿಯನ್ನು ಡಿಕಾಕ್ ಸ್ವೀಕರಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಲೌರಾ ವೋಲ್ವಾರ್ಟ್ ತನ್ನದಾಗಿಸಿಕೊಂಡಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಲಾಕ್‌ಡೌನ್ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವರ್ಚುವಲ್ ಮಾದರಿಯಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಕ್ರಿಕೆಟ್ ಸೌತ್ ಆಫ್ರಿಕಾ ಹಮ್ಮಿಕೊಂಡಿತ್ತು.

ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಕಾಕ್ ಹಾಗೂ ಲೌರಾ ಇಬ್ಬರೂ ಮಿಂಚಿದ್ದರು. ಮೂರು ಭಿನ್ನ ವಿಭಾಗದಲ್ಲಿ ಪ್ರಶಸ್ತಿಯನ್ನು ಇಬ್ಬರೂ ಕ್ರಿಕೆಟಿಗರು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಿಂಟನ್ ಡಿಕಾಕ್ 'ವಾರ್ಷಿಕ ಟೆಸ್ಟ್ ಆಟಗಾರ' ಹಾಗೂ ತನ್ನ ಸಹ ಆಟಗಾರರಿಂದ ಆಯ್ಕೆಯಾಗುವ ವರ್ಷದ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನ ಮಹಿಳಾ ಕ್ರಿಕೆಟರ್ ಲೌರಾ ವೋಲ್ವಾರ್ಟ್ ಕೂಡ ವಾರ್ಷಿಕ ಏಕದಿನ ಕ್ರಿಕೆಟರ್ ಹಾಗೂ ಸಹ ಆಟಗಾರರಿಂದ ಆಯ್ಕೆಯಾಗುವ "ವಾರ್ಷಿಕ ಆಟಗಾರ್ತಿ" ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 21 ವರ್ಷದ ವೋಲ್ವಾರ್ಟ್ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಅತಿ ಕಿರಿಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್

ಈ ಮೂಲಕ ಕ್ವಿಂಟನ್ ಡಿ ಕಾಕ್ ಎರಡು ಬಾರಿ ಈ ಪ್ರಶಸ್ತಿಗೆ ಪಾತ್ರರಾದ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಡಿಕಾಕ್ 2017ರಲ್ಲೂ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಬಾಜನರಾಗಿದ್ದರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಜಾಕ್ ಕ್ಯಾಲೀಸ್, ಮಖಾಯ ಎನ್‌ಟಿನಿ, ಹಾಶಿಮ್ ಆಮ್ಲಾ, ಎಬಿ ಡಿವಿಲಿಯರ್ಸ್ ಎರಡೆರಡು ಬಾರಿ ಪಡೆದು ಮಿಂಚಿದ್ದರು

Story first published: Monday, July 6, 2020, 9:56 [IST]
Other articles published on Jul 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X