ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಪಂದ್ಯ: ಡಿ ಕಾಕ್ ಅಬ್ಬರ, ಶ್ರೀಲಂಕಾಕ್ಕೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

Quinton de Kock shines to help hosts thump visitors in 2nd ODI

ಸೆಂಚುರಿಯನ್, ಮಾರ್ಚ್ 7: ಸೆಂಚುರಿಯನ್‌ನಲ್ಲಿರುವ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 6) ನಡೆದ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಆಫ್ರಿಕಾ 113 ರನ್ ಭರ್ಜರಿ ಗೆಲುವನ್ನಾಚರಿಸಿದೆ. ಕ್ವಿಂಟನ್ ಡಿ ಕಾಕ್ ಸ್ಫೋಟಕ ಅರ್ಧಶತಕದ ನೆರವಿನಿಂದ ಗೆದ್ದಿರುವ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ.

ಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಆಟಗಾರ ಡಿ ಕಾಕ್ 70 ಎಸೆತಗಳಿಗೆ 94 ರನ್ ಸೇರಿಸಿದರು. ಇದರಲ್ಲಿ 1 ಸಿಕ್ಸ್ ಮತ್ತು 17 ಬೌಂಡರಿಗಳು ಸೇರಿದ್ದವು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ರೀಝ ಹೆಂಡ್ರಿಕ್ಸ್ 29 ರನ್ ನೀಡಿದರು.

ನಾಯಕ ಫಾ ಡು ಪ್ಲೆಸಿಸ್ 57, ಡೇವಿಡ್ ಮಿಲ್ಲರ್ 25 ರನ್ ಸೇರ್ಪಡೆಯೊಂದಿಗೆ ಆಫ್ರಿಕಾ 45.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 251 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾಕ್ಕೆ ಬ್ಯಾಟ್ಸ್ಮನ್ ಗಳ ಬೆಂಬಲ ಸಿಗಲಿಲ್ಲ. ಒಶದಾ ಫೆರ್ನಾಂಡೋ 31, ಕುಸಾಲ್ ಮೆಂಡಿಸ್ 24 ರನ್ ಗಳಿಸಿದ್ದೇ ಹೆಚ್ಚೆನಿಸಿತು.

ವಿಜಯ್ ಶಂಕರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋವಿಜಯ್ ಶಂಕರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋ

ಶ್ರೀಲಂಕಾ ತಂಡ 32.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 138 ರನ್ ಪೇರಿಸಿ ಶರಣಾಯಿತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ವೇಳೆ ಶ್ರೀಲಂಕಾದ ಲಸಿತ್ ಮಾಲಿಂಗ, ಧನಂಜಯ ಡಿ ಸಿಲ್ವಾ ತಲಾ 2 ವಿಕೆಟ್ ಪಡೆದರೆ, ಲಂಕಾ ಇನ್ನಿಂಗ್ಸ್‌ ವೇಳೆ ಆಫ್ರಿಕಾದ ಲುಂಗಿ ಎನ್‌ಗಿಡಿ, ಆರಿಚ್ ನಾರ್ಜ್, ಇಮ್ರಾನ್ ತಾಹಿರ್ ತಲಾ 2, ಕಾಗಿಸೋ ರಬಾಡ 3 ವಿಕೆಟ್ ಕೆಡವಿ ಮಿಂಚಿದರು. ಡಿ ಕಾಕ್ ಪಂದ್ಯಶ್ರೇಷ್ಠ ಎನಿಸಿದರು.

Story first published: Thursday, March 7, 2019, 11:09 [IST]
Other articles published on Mar 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X