ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುತ್ತಯ್ಯ ಸಮಕ್ಕೆ ನಿಂತು 350 ವಿಕೆಟ್ ಕ್ಲಬ್ ಸೇರಿದ ರವಿಚಂದ್ರನ್ ಅಶ್ವಿನ್

R Ashwin becomes joint-fastest to 350 Test wickets, equals Muttiah Muralitharans record

ಬೆಂಗಳೂರು, ಅಕ್ಟೋಬರ್ 07: ಬಹುಕಾಲದ ನಂತರ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಕಮ್ ಬ್ಯಾಕ್ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೊಸ ಮೈಲಿಗಲ್ಲು ದಾಟಿದ್ದಾರೆ.

ವಿಶಾಖಪಟ್ಟಣಂ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ತ್ವರಿತವಾಗಿ 350 ವಿಕೆಟ್​ ಪಡೆದವರ ಕ್ಲಬ್ಬಿಗೆ ಅಶ್ವಿನ್ ಸೇರ್ಪಡೆಯಾದರು. ಶ್ರೀಲಂಕಾದ ಸ್ಪಿನ್​ ದಿಗ್ಗಜ ಮುತ್ತಯ್ಯ ಮುರಳೀಧರನ್​ ಅವರ ಸಾಧನೆಯ ಸಮಕ್ಕೆ ನಿಂತರು. ಅಶ್ವಿನ್​ ಹಾಗೂ ಮುರಳಿಧರನ್​ 66 ಪಂದ್ಯಗಳಲ್ಲಿ 350 ವಿಕೆಟ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಪ್ಲಸ್ ವಿಕೆಟ್ ಗಳಿಸುವ ಮೂಲಕ 27 ಬಾರಿ ಈ ಸಾಧನೆ ಮಾಡಿದ್ದಾರೆ.

1
46113

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್​ಗೆ 502 ರನ್​ ಗಳಿಸಿದರೆ, ದಕ್ಷಿಣ ಆಫ್ರಿಕಾ 431 ರನ್ ಮಾತ್ರ ಗಳಿಸಿತು. ಎರಡನೇ ಇನ್ನಿಂಗ್ಸನಲ್ಲಿ 4 ವಿಕೆಟ್​ ಕಳೆದುಕೊಂಡು 323 ರನ್​ ಗಳಿಸಿದ ಭಾರತ, ಹರಿಣಗಳಿಗೆ 395 ರನ್​ ಗುರಿ ನೀಡಿತ್ತು. ಎರಡನೇ ಇನ್ನಿಂಗ್ಸ್ ಪ್ರಾರಂಭದಲ್ಲೇ ಥ್ರಿನಿಯಸ್​ ಡಿ ಬ್ರೂಯ್ನ್ ಅವರ ವಿಕೆಟ್​ ಅನ್ನು ಕಬಳಿಸಿದ ಅಶ್ವಿನ್​ ಹೊಸ ದಾಖಲೆ ಬರೆದರು.

ಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಶಮಿಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಶಮಿ

33 ವರ್ಷ ವಯಸ್ಸಿನ ತಮಿಳುನಾಡಿನ ಅಶ್ವಿನ್ ಅವರು 54 ಟೆಸ್ಟ್ ಪಂದ್ಯಗಳಲ್ಲಿ 300 ಟೆಸ್ಟ್ ವಿಕೆಟ್ ಗಳಿಸಿ ಡೆನ್ನಿಸ್ ಲಿಲ್ಲಿ(56 ಟೆಸ್ಟ್) ಅವರ ದಾಖಲೆ ಮುರಿದಿದ್ದರು. 300 ಪ್ಲಸ್ ವಿಕೆಟ್ ಗಳಿಕೆ ಪಟ್ಟಿಯಲ್ಲಿ ಅಶ್ವಿನ್ ಸದ್ಯ 4ನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಅನಿಲ್ ಕುಂಬ್ಳೆ 619, ಕಪಿಲ್ ದೇವ್ 434, ಹರ್ಭಜನ್ ಸಿಂಗ್ 417 ಹಾಗೂ ಜಹೀರ್ ಖಾನ್ 311 ವಿಕೆಟ್ ಗಳಿಸಿದ್ದಾರೆ.

ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ 40 ಯಾಕೆ?!ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ 40 ಯಾಕೆ?!

ತ್ವರಿತಗತಿಯಲ್ಲಿ 350 ಟೆಸ್ಟ್ ವಿಕೆಟ್ ಗಳಿಸಿದವರು:
66 ಟೆಸ್ಟ್ : ಮುತ್ತಯ್ಯ ಮುರಳೀಧರನ್(ಶ್ರೀಲಂಕಾ)/ ಆರ್ ಅಶ್ವಿನ್ (ಭಾರತ)
69: ರಿಚರ್ಡ್ ಹ್ಯಾಡ್ಲಿ(ನ್ಯೂಜಿಲೆಂಡ್)/ ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ)
70: ಡೆನ್ನಿಸ್ ಲಿಲ್ಲಿ(ಆಸ್ಟ್ರೇಲಿಯಾ)
74: ಗ್ಲೆನ್ ಮೆಗ್ರಾ(ಆಸ್ಟ್ರೇಲಿಯಾ)
75: ಮಾಲ್ಕಂ ಮಾರ್ಷಲ್(ವೆಸ್ಟ್ ಇಂಡೀಸ್)/ ರಂಗಣಾ ಹೆರಾತ್(ಶ್ರೀಲಂಕಾ)

Story first published: Monday, October 7, 2019, 20:26 [IST]
Other articles published on Oct 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X