ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದ ಆರ್. ಅಶ್ವಿನ್: ಭಾರತದ 3ನೇ ಗರಿಷ್ಠ ವಿಕೆಟ್ ಟೇಕರ್

ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ , ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದಾರೆ.

80 ಪಂದ್ಯಗಳನ್ನ ಆಡಿರುವ ರವಿಚಂದ್ರನ್ ಅಶ್ವಿನ್, ನ್ಯೂಜಿಲೆಂಡ್‌ನ ಟಾಮ್ ಲಥಾಮ್‌ರವ ವಿಕೆಟ್ ಎಗರಿಸುತ್ತಿದ್ದಂತೆ, ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು. ಹರ್ಭಜನ್ ಸೀಂಗ್ 103 ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ. ಆದ್ರೆ ಆರ್. ಅಶ್ವಿನ್ ಕೇವಲ 80 ಪಂದ್ಯಗಳಲ್ಲಿ 418 ವಿಕೆಟ್ ಕಬಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಟೆಸ್ಟ್‌ ರೆಕಾರ್ಡ್‌

ರವಿಚಂದ್ರನ್ ಅಶ್ವಿನ್ ಟೆಸ್ಟ್‌ ರೆಕಾರ್ಡ್‌

ಪಂದ್ಯ: 80*

ಇನ್ನಿಂಗ್ಸ್‌: 150

ವಿಕೆಟ್: 418

ಬೆಸ್ಟ್: 7/59

ಎಕಾನಮಿ: 2.79

5 ವಿಕೆಟ್: 30

10 ವಿಕೆಟ್: 7

ಹರ್ಭಜನ್ ಸಿಂಗ್ ರೆಸ್ಟ್ ರೆಕಾರ್ಡ್‌

ಹರ್ಭಜನ್ ಸಿಂಗ್ ರೆಸ್ಟ್ ರೆಕಾರ್ಡ್‌

ಪಂದ್ಯ: 103

ಇನ್ನಿಂಗ್ಸ್‌: 190

ವಿಕೆಟ್: 417

ಬೆಸ್ಟ್: 8/84

ಎಕಾನಮಿ: 2.84

5 ವಿಕೆಟ್: 25

10 ವಿಕೆಟ್: 5

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಭಾರತದ ಪರ ಅಗ್ರ ಪಟ್ಟಿಯಲ್ಲಿರುವ ಅನಿಲ್ ಕುಂಬ್ಳೆ, ಕಪಿಲ್ ದೇವ್

ಭಾರತದ ಪರ ಅಗ್ರ ಪಟ್ಟಿಯಲ್ಲಿರುವ ಅನಿಲ್ ಕುಂಬ್ಳೆ, ಕಪಿಲ್ ದೇವ್

ಟೀಂ ಇಂಡಿಯಾ ಪರ ಜಂಬೋ ಖ್ಯಾತಿಯ ಲೆಜೆಂಡರಿ ಅನಿಲ್‌ ಕುಂಬ್ಳೆ ಗರಿಷ್ಠ ಟೆಸ್ಟ್ ವಿಕೆಟ್ ಪಡೆದವರಾಗಿದ್ದು, ವಿಶ್ವದಲ್ಲಿ ನಾಲ್ಕನೇ ಗರಿಷ್ಠ ವಿಕೆಟ್ ಟೇಕರ್ ಎಂಬ ಸಾಧನೆ ಇವರಿಗಿದೆ. ವಿಶ್ವಕಪ್ ವಿಜೇತ ಕಪಿಲ್ ದೇವ್ ಭಾರತದ ಪರ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದು, ಕಪಿಲ್ ರೆಕಾರ್ಡ್‌ ಮುರಿಯಲು ಇನ್ನು 16 ವಿಕೆಟ್‌ಗಳಷ್ಟು ಬಾಕಿ ಇದೆ. ಕುಂಬ್ಳೆ ಮತ್ತು ಕಪಿಲ್ ದೇವ್ ಟೆಸ್ಟ್ ವಿಕೆಟ್ ರೆಕಾರ್ಡ್ಸ್‌ ಈ ಕೆಳಗಿದೆ.

ಅನಿಲ್ ಕುಂಬ್ಳೆ

ಪಂದ್ಯ: 132

ಇನ್ನಿಂಗ್ಸ್‌: 236

ವಿಕೆಟ್: 619

ಬೆಸ್ಟ್: 10/74

ಎಕಾನಮಿ: 2.69

5 ವಿಕೆಟ್: 35

10 ವಿಕೆಟ್: 8

ಕಪಿಲ್ ದೇವ್‌

ಪಂದ್ಯ: 131

ಇನ್ನಿಂಗ್ಸ್‌: 227

ವಿಕೆಟ್: 434

ಬೆಸ್ಟ್: 9/83

ಎಕಾನಮಿ: 2.78

5 ವಿಕೆಟ್: 23

10 ವಿಕೆಟ್: 2

ವಿಶ್ವದ ಗರಿಷ್ಠ ವಿಕೆಟ್ ಟೇಕರ್ ಮುರಳೀದರನ್, ಶೇನ್ ವಾರ್ನ್ ಎರಡನೇ ಸ್ಥಾನ

ವಿಶ್ವದ ಗರಿಷ್ಠ ವಿಕೆಟ್ ಟೇಕರ್ ಮುರಳೀದರನ್, ಶೇನ್ ವಾರ್ನ್ ಎರಡನೇ ಸ್ಥಾನ

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಮುರಳೀಧರನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 133 ಪಂದ್ಯಗಳಲ್ಲಿ ಬರೋಬ್ಬರಿ 800 ವಿಕೆಟ್ ಕಬಳಿಸಿದ್ದಾರೆ. 67 ಬಾರಿ ಐದು ವಿಕೆಟ್‌ಗಳ ಗೊಂಚಲು, 22 ಬಾರಿ 10 ವಿಕೆಟ್‌ ಕಬಳಿಸಿ ಅಗ್ರ ಪಟ್ಟ ಅಲಂಕರಿಸಿದ್ದಾರೆ.

ಬೈಕ್ ಅಪಘಾತದಲ್ಲಿ ಗಾಯಗೊಂಡ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್

ಮುರಳೀಧರನ್ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಸ್ಪಿನ್‌ ಮಾಂತ್ರಿಕ ಶೇನ್ ವಾರ್ನ್ ಇದ್ದು, 145 ಪಂದ್ಯಗಳಲ್ಲಿ ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಇವರು 37 ಬಾರಿ ಐದು ವಿಕೆಟ್ ಗಳಿಸಿದ್ದು, 10 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ.

ಕುಂಬ್ಳೆಯನ್ನ ಹಿಂದಿಕ್ಕಿರುವ ಆ್ಯಂಡರ್ಸನ್

ಕುಂಬ್ಳೆಯನ್ನ ಹಿಂದಿಕ್ಕಿರುವ ಆ್ಯಂಡರ್ಸನ್

ಕೆಲ ವರ್ಷಗಳ ಹಿಂದಷ್ಟೇ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಅನಿಲ್ ಕುಂಬ್ಳೆರನ್ನ ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದ್ದಾರೆ. ಟಾಪ್ 3ನಲ್ಲಿರುವ ಏಕೈಕ ಬೌಲರ್ ಇವರಾಗಿದ್ದು, ಮೊದಲೆರಡು ಸ್ಥಾನಗಳನ್ನ ಸ್ಪಿನ್ನರ್ಸ್ ಅಲಂಕರಿಸಿದ್ದಾರೆ.

ಜೇಮ್ಸ್‌ ಆ್ಯಂಡರ್ಸನ್ 166 ಪಂದ್ಯಗಳಲ್ಲಿ 632 ವಿಕೆಟ್ ಪಡೆದಿದ್ದು, 31 ಬಾರಿ ಐದು ವಿಕೆಟ್ ಮತ್ತು 3 ಬಾರಿ ಹತ್ತು ವಿಕೆಟ್ ಕಬಳಿಸಿದ್ದಾರೆ. ಇನ್ನೂ ಇಂಗ್ಲೆಂಡ್ ಟೆಸ್ಟ್ ತಂಡದ ಭಾಗವಾಗಿರುವ 39 ವರ್ಷದ ಆ್ಯಂಡರ್ಸನ್ ನಿವೃತ್ತಿ ವೇಳೆಗೆ ಮತ್ತಷ್ಟು ವಿಕೆಟ್‌ಗಳನ್ನ ತನ್ನದಾಗಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

KS Bharath ಪಂದ್ಯಕ್ಕೆ ಸಿದ್ದವಾಗಿದ್ದು ಕೇವಲ 12 ನಿಮಿಷದಲ್ಲಿ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Monday, November 29, 2021, 14:30 [IST]
Other articles published on Nov 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X