ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2010ರಲ್ಲಿ ಸಿಎಸ್‌ಕೆ ತನ್ನನ್ನು ಡ್ರಾಪ್ ಮಾಡಿದ್ದಕ್ಕೆ ಕಾರಣ ಹೇಳಿದ ಅಶ್ವಿನ್

R Ashwin cited the reason why CSK dropped him in 2010

ಚೆನ್ನೈ, ಏಪ್ರಿಲ್ 27: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮಾಜಿ ಚಾಂಪಿಯನ್ ತಂಡ, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪ್ರತಿನಿಧಿಸುತ್ತಿದ್ದವರು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಆದರೆ 2010ರಲ್ಲಿ ಅಶ್ವಿನ್, ಸಿಎಸ್‌ಕೆಯಿಂದ ಡ್ರಾಪ್ ಮಾಡಲ್ಪಟ್ಟಿದ್ದರು. ಇದಕ್ಕೆ ಕಾರಣವೇನೆಂದು ಅಶ್ವಿನ್ ಹೇಳಿಕೊಂಡಿದ್ದಾರೆ.

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

'ನಾನವತ್ತು ಒಂದೂ ವಿಕೆಟ್ ಪಡೆದಿರಲಿಲ್ಲ. ಆದರೆ 40-45 ರನ್ ನೀಡಿದ್ದೆ. ನನ್ನಿಂದಾಗಿ ಪಂದ್ಯ ಸೂಪರ್ ಓವರ್‌ನತ್ತ ಹೋಗಿತ್ತು. ಅಲ್ಲದೆ ಆ ಪಂದ್ಯವನ್ನು ನಾವು ಸೋತೆವು. ಹೀಗಾಗಿ ನನ್ನನ್ನು ತಂಡದಿಂದ ಡ್ರಾಪ್ ಮಾಡಲಾಯ್ತು,' ಎಂದು ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಚಾಟ್‌ ಮಾಡುತ್ತ ಸ್ಪಿನ್ನರ್ ಅಶ್ವಿನ್ ಹೇಳಿಕೊಂಡರು.

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆ

'ತಂಡದಿಂದ ನನ್ನನ್ನು ಕೈಬಿಟ್ಟಿದ್ದರಿಂದ ನಾನು ತಂಗಿದ್ದ ಹೋಟೆಲ್ ಅನ್ನು ಖಾಲಿ ಮಾಡಿ ಮನೆಯಲ್ಲಿ ಕುಳಿತೆ. 2010ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ಗೆ 30 ಸಂಭಾವ್ಯ ಆಟಗಾರರಲ್ಲಾದರೂ ನಾನು ಕಾಣಿಸಿಕೊಳ್ಳುತ್ತೇನೆ ಎಂದು ಆಗ ಯೋಚಿಸಿದ್ದೆ (ಆದರೆ ಅಲ್ಲೂ ಅಶ್ವಿನ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ),' ಎಂದು ಅಶ್ವಿನ್ ಹೇಳಿದರು.

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

'ಕೆಲ ಪಂದ್ಯಗಳಲ್ಲಿ ನಮ್ಮ ಎಸೆತಗಳಿಗೆ ಯಾರೂ ದೊಡ್ಡ ಹೊಡೆತ ಹೊಡೆಯಬಲ್ಲರು. ಆದರೆ ವಿಷಯ ಅದಲ್ಲ, ನನ್ನ ಬಗ್ಗೆ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್‌ಗೆ ಮನಸ್ಥಾಪವಿತ್ತು. ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ಆದರೆ ಅವರು ನನ್ನನ್ನು ಒಮ್ಮೆಯೂ ಮಾತಿಗೆ ಕರೆಯಲಿಲ್ಲ,' ಎಂದು ಸಿಎಸ್‌ಕೆ ಆವತ್ತು ಡ್ರಾಪ್ ಮಾಡಿದ್ದಕ್ಕೆ ಕಾರಣ ಊಹಿಸಿ ಅಶ್ವಿನ್ ಮಾತನಾಡಿದರು.

Story first published: Monday, April 27, 2020, 22:47 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X