ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?

R Ashwin interesting statement on Shikhar Dhawan and India’s Opener Slot

ಲಕ್ನೋದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಲಕ್ನೋದ ಸ್ಪಿನ್ ಪಿಚ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಹಾಗೂ ಶುಬ್ಮನ್ ಗಿಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ. ಏಕದಿನ ಮಾದರಿಯಲ್ಲಿ ಈ ಇಬ್ಬರು ಆಟಗಾರರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದರು ಕೂಡ ಟಿ20 ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.

ಭಾರತದ ಯುವ ಆರಂಭಿಕ ಆಟಗಾರರು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಲು ವಿಫಲವಾಗುತ್ತಿರುವ ಬಳಿಕ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯಲು ಆರಂಭವಾಗಿದೆ. ಅದರಲ್ಲೂ ಶಿಖರ್ ಧವನ್ ಉಲ್ಲೇಖಿಸಿ ಚರ್ಚೆಗಳು ನಡೆಯುತ್ತಿದ್ದು ಈ ವಿಚಾರವಾಗಿ ಆರ್ ಅಶ್ವಿನ್ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು ಶಿಖರ್ ಧವನ್ ಹಾಗೂ ಇಶಾನ್ ಕಿಶನ್ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧುಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧು

ಶಿಖರ್ ಧವನ್ ಬಗ್ಗೆ ಆರ್ ಅಶ್ವಿನ್ ಮಾತು: "ಈ ಹಿಂದೆ ಕೂಡ ಅಗ್ರ ಕ್ರಮಾಂಕದ ಮೂವರು ವೈಫಲ್ಯ ಅನುಭವಿಸಿದಾಗ ನಾವು ಸಸ್ಯೆಗೆ ಸಿಲುಕಿಕೊಳ್ಳುತ್ತಿದ್ದೆವು. ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್. ನಾವು ಈ ಹಿಂದೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಮಾತುಗಳನ್ನಾಡಿದ್ದೇವೆ. ಆದರೆ ಶಿಖರ್ ಧವನ್ ಕೂಡ ಅದ್ಬುತ ಆಟಗಾರ. ಆತ ಮೌನವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಈಗ ಆ ಸ್ಥಾನದಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಿದೆಯಾ?" ಎಂದು ಪ್ರಶ್ನಿಸಿಕೊಂಡಿದ್ದಾರೆ ಹಿರಿಯ ಆಟಗಾರ ಆರ್ ಅಶ್ವಿನ್.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಮುಂದುವರಿದು ಮಾತನಾಡಿರುವ ಆರ್ ಅಶ್ವಿನ್ "ಇಂಥಾ ಸಂದರ್ಭದಲ್ಲಿ ಮತ್ತೆ ಶಿಖರ್ ಧವನ್ ಅವರ ಬಳಿಗೇ ಹೋಗಬೇಕಾ ಅಥವಾ ಇತ್ತೀಚೆಗಷ್ಟೇ ದ್ವಿಶತಕ ಸಿಡಿಸಿದ ಇಶಾನ್ ಕಿಶನ್ ಅವರನ್ನು ಬೆಳೆಸಬೇಕಾ? ಒಂದು ಬೃಹತ್ ಇನ್ನಿಂಗ್ಸ್ ಆಡಿದ ಕಾರಣಕ್ಕೆ ಆಟಗಾರನಿಗೆ ಬೆಂಬಲ ನೀಡುವ ಬದಲು ತಂಡದ ಅಗತ್ಯ ಏನಿದೆ ಎಂಬುದನ್ನು ನಾವು ಕಂಡುಕೊಳ್ಳಬೇಕು. ಯಾರು ಒತ್ತಡದ ಸಂದರ್ಭದಲ್ಲಿ ತಂಡಕ್ಕೆ ನೆರವಾಗಬಲ್ಲ? ಯಾವ ಆಟಗಾರ ಸುದೀರ್ಘ ಕಾಲ ತಂಡಕ್ಕೆ ಸೇವೆ ನೀಡಬಲ್ಲ?" ಎಂದು ಪ್ರಶ್ನಿಸಿದ್ದಾರೆ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್.

ಇನ್ನು ಇದೇ ಸಂದರ್ಭದಲ್ಲಿ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ನಡುವಿನ ಹೋಲಿಕೆಯ ಬಗ್ಗೆಯೂ ಅಶ್ವಿನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. "ಇಶಾನ್ ಕಿಶನ್ ದ್ವಿಶತಕವನ್ನು ಸಿಡಿಸಿದ ಬಳಿಕ ತಂಡದಿಂದ ಹೊರಬಿದ್ದರು. ಆದರೆ ಟೀಮ್ ಇಂಡಿಯಾ ಶುಬ್ಮನ್ ಗಿಲ್ ಈ ಹಿಂದೆ ಯಾವ ರೀತಿಯಾಗಿ ರನ್ ಗಳಿಸಿದ್ದರು ಎಂಬುದನ್ನು ನೋಡಿತು. ಆತ ಸಾಕಷ್ಟು ರನ್‌ಗಳನ್ನು ಗಳಿಸಿದ್ದು ಕೆಲ ಸಮಯಗಳಿಂದ ಭಾರತದ ಪರವಾಗಿ ಅತ್ಯಂತ ಸ್ಥರವಾಗಿ ಪ್ರದರ್ಶನ ನೀಡುತ್ತಿರುವ ಆಟಗಾರನಾಗಿದ್ದಾರೆ" ಎಂದಿದ್ದಾರೆ ಆರ್ ಅಶ್ವಿನ್.

Story first published: Tuesday, January 31, 2023, 16:06 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X