ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಸೌಥೀ, ಮಾರ್ಗನ್ ಜೊತೆಗೆ ಅಶ್ವಿನ್ ಮಾತಿನ ಚಕಮಕಿ; ಡಿಕೆ ಮಧ್ಯ ಪ್ರವೇಶ: ವಿಡಿಯೋ

R Ashwin involved in heated argument with Southee, Morgan
Photo Credit: twitter

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿನ ಕದನ ನಡೆಯುತ್ತಿದೆ. ಅದ್ಭುತ ಫಾರ್ಮ್‌ನಲ್ಲಿರುವ ಎರಡು ತಂಡಗಳು ಕೂಡ ಮೇಲುಗೈ ಸಾಧಿಸಲು ಕಠಿಣ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಸೆಣೆಸಾಟದಲ್ಲಿ ಮಾತಿನ ಚಕಮಕಿಯೂ ನಡೆದಿದೆ. ಡೆಲ್ಲಿ ಕ್ಯಾಟಪಿಲ್ಸ್ ತಂಡ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆಸಿದ್ದು ಡಿಸಿ ತಂಡದ ಪರ ಬ್ಯಾಟಿಮಗ್ ನಡೆಸುತ್ತಿದ್ದ ಅನುಭವಿ ಆಟಗಾರ ಆರ್ ಅಶ್ವಿನ್ ಹಾಗೂ ಕೆಕೆಆರ್ ಬೌಲರ್ ಟಿಮ್ ಸೌಥೀ ಹಾಗೂ ಇಯಾನ್ ಮಾರ್ಗನ್ ಮಧ್ಯೆ ಈ ಮಾತಿನ ಘರ್ಷಣೆ ನಡೆದಿದೆ.

ಈ ಘಟನೆ ಡೆಲ್ಲಿ ಕ್ಯಾಟಪಿಲ್ಸ್ ತಂಡದ ಅಂತಿಮ ಓವರ್‌ನಲ್ಲಿ ನಡೆದಿದೆ. ಈ ಓವರ್‌ನ ಮೊದಲ ಎಸೆತದಲ್ಲಿಯೇ ಆರ್ ಅಶ್ವಿನ್ ಸೌಥೀ ಎಸೆತಕ್ಕೆ ಔಟಾದರು. ಫೆವಿಲಿಯನ್‌ಗೆ ತೆರಳುವ ಸಂದರ್ಭದಲ್ಲಿ ಟಿಮ್ ಸೌಥಿ ಆಡಿದ ಮಾತು ಅನುಭವಿ ಆಟಗಾರನನ್ನು ಕೆರಳಿಸಿದಂತಿತ್ತು. ಇದಕ್ಕೆ ಪ್ರತಿಯಾಗಿ ಆರ್ ಅಶ್ವಿನ್ ತಕ್ಷಣವೇ ಕೆಕೆಆರ್ ವೇಗಿಯನ್ನು ಉದ್ದೇಶಿಸಿ ಉತ್ತರವನ್ನು ನೀಡಿ ಹೊರನಡೆಯುತ್ತಿದ್ದರು.

ಈ ಸಂದರ್ಭದಲ್ಲಿ ಕೆಕೆಆರ್ ತಮಡದ ನಾಯಕ ಇಯಾನ್ ಮಾರ್ಗನ್ ಮಧ್ಯ ಪ್ರವೇಶಿಸುತ್ತಾರೆ. ಆಗ ಆರ್ ಅಶ್ವಿನ್ ಹಾಗೂ ಮಾರ್ಗನ್ ಮಧ್ಯೆ ಕೂಡ ಮಾತಿನ ಚಕಮಕಿ ನಡೆಯುತ್ತದೆ. ಈ ವೇಲೆ ಕೆಕೆಆರ್ ತಂಡದ ಅನುಭವಿ ಆಟಗಾರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಗಮಿಸಿ ಪರಿಸ್ಥಿತಿ ತಿಳಿಸಿಳಿಸುವ ಪ್ರಯತ್ನ ನಡೆಸಿದ್ದಾರೆ. ನಂತರ ಅಶ್ವಿನ್ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆರ್‌ ಅಶ್ವಿನ್ ಹಾಗೂ ಟಿಮ್ ಸೌಥಿ ಮಧ್ಯೆ ಈ ಮಾತಿನ ಚಕಮಕಿ ನಡೆಯಲು ಕಾರಣವೇನೆಂದು ಸ್ಪಷ್ಟವಾಗಿಲ್ಲ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದು ಹೇಗೆ: ಮೊದಲ ಬಾರಿಗೆ ಬಹಿರಂಗವಾಗಿ ಶ್ರೀಶಾಂತ್ ಹೇಳಿಕೆಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದು ಹೇಗೆ: ಮೊದಲ ಬಾರಿಗೆ ಬಹಿರಂಗವಾಗಿ ಶ್ರೀಶಾಂತ್ ಹೇಳಿಕೆ

ಈ ಪಂದ್ಯದಲ್ಲಿ ಪಂತ್ ಪಡೆ ಸವಾಲಿನ ಮೊತ್ತವನ್ನು ಪೇರಿಸಲು ವಿಫಲವಾಗಿದೆ. ನೈಟ್ ರೈಡರ್ಸ್ ಬೌಲರ್‌ಗಳ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗರು ಕೇವಲ 127 ರನ್‌ಗಳನ್ನು ಮಾತ್ರವೇ ಗಳಿಸಿತು. ಈ ಮೂಲಕ ಈ ಕುತೂಹಲಕಾರಿ ಕದನದಲ್ಲಿ ಸಮಾನ್ಯ ಗುರಿಯನ್ನು ನೀಡಿದೆ ಡೆಲ್ಲಿ ಕ್ಯಾಪಿಟಲ್ಸ್.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI: ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್
ಬೆಂಚ್: ಹರ್ಭಜನ್ ಸಿಂಗ್, ಶಕೀಬ್ ಅಲ್ ಹಸನ್, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಟಿಮ್ ಸೀಫರ್ಟ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವೈಭವ್ ಅರೋರಾ, ಪ್ರಸಿದ್ ಕೃಷ್ಣ, ಆಂಡ್ರೆ ರಸೆಲ್

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ‍XI: ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್/ ನಾಯಕ ), ಶಿಮ್ರಾನ್ ಹೆಟ್ಮೀರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನಾರ್ಕಿಯಾ, ಆವೇಶ್ ಖಾನ್
ಬೆಂಚ್: ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೋಯಿನಿಸ್, ಲುಕ್ಮಾನ್ ಮೇರಿವಾಲಾ, ಟಾಮ್ ಕುರ್ರನ್, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ರಿಪಾಲ್ ಪಟೇಲ್, ಪೃಥ್ವಿ ಶಾ

Story first published: Wednesday, September 29, 2021, 10:32 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X