ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆರ್‌. ಅಶ್ವಿನ್ ಆಯ್ಕೆಯಿಲ್ಲ: ಏಕದಿನ, ಟಿ20 ಕ್ರಿಕೆಟ್ ಬಾಗಿಲು ಮುಚ್ಚಿತೇ?

ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಪ್ರಾರಂಭಗೊಳ್ಳಲಿರುವ ಕದಿನ ಹಾಗೂ ಟಿ20 ಸರಣಿಗೆ ಬಿಸಿಸಿಐ ತಂಡವನ್ನು ಬುಧವಾರ ಪ್ರಕಟಿಸಿದೆ. 18 ಜನರ ಎರಡು ವಿಭಿನ್ನ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ಹೊಸ ಆಟಗಾರರಿಗೆ ಅವಕಾಶ ನೀಡಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ಉಪನಾಯಕ ಕೆಎಲ್ ರಾಹುಲ್ ವೈಯಕ್ತಿಕ ಕಾರಣಗಳಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಈ ಸರಣಿಯಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ರವೀಂದ್ರ ಜಡೇಜಾ ಇನ್ನೂ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಎರಡು ಸರಣಿಗೂ ಆಯ್ಕೆಯಾಗಿಲ್ಲ. ಆದ್ರೆ ಇದೇ ವೇಳೆಯಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಏಕದಿನ ಅಷ್ಟೇ ಅಲ್ಲದೆ ಟಿ20 ತಂಡದಿಂದ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ.

ಆರ್‌. ಅಶ್ವಿನ್‌ ಆಯ್ಕೆಯಾಗದೇ ಇರುವುದಕ್ಕೆ ಕಾರಣ ನೀಡಿಲ್ಲ!

ಆರ್‌. ಅಶ್ವಿನ್‌ ಆಯ್ಕೆಯಾಗದೇ ಇರುವುದಕ್ಕೆ ಕಾರಣ ನೀಡಿಲ್ಲ!

ವೆಸ್ಟ್ ಇಂಡೀಸ್ ವಿರುದ್ಧದ ನಿಗದಿತ ಓವರ್‌ಗಳ ಫಾರ್ಮೆಟ್‌ಗೆ ಹಿರಿಯ ಸ್ಪಿನ್ನರ್ ಮೂಲ ಅಶ್ವಿನ್ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬುದನ್ನು ಆಯ್ಕೆಗಾರರು ವಿವರಿಸಲಿಲ್ಲ. ಅದೇ ವೇಳೆ ಶಮಿಗೆ , ಬುಮ್ರಾ ವಿಶ್ರಾಂತಿ ನೀಡಿರುವುದಾಗಿ ಹೇಳಿದ್ದಾರೆ. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಲಭ್ಯವಾಗುವುದಿಲ್ಲ ಎಂದು ಆಯ್ಕೆಗಾರರು ಹೇಳಿದ್ದಾರೆ. ಅಶ್ವಿನ್ ಅವರ ಬಗ್ಗೆ ಯಾವುದೇ ವಿವರ ನೀಡದ ಕಾರಣ ಅವರ ಲಿಮಿಟೆಡ್ ಓವರ್ ಕ್ರಿಕೆಟ್ ಕಥೆ ಮುಗಿಯಿತು ಎಂಬಂತೆ ಕ್ರಿಕೆಟ್ ಪಂಡಿತರು ಮಾತನಾಡುತ್ತಿದ್ದಾರೆ.

ದಕ್ಷಿಣ ಆಪ್ರಿಕಾ ವಿರುದ್ಧ ಏಕದಿನ ಸರಣಿಗೆ ಕಂಬ್ಯಾಕ್ ಮಾಡಿದ್ದ ಅಶ್ವಿನ್

ದಕ್ಷಿಣ ಆಪ್ರಿಕಾ ವಿರುದ್ಧ ಏಕದಿನ ಸರಣಿಗೆ ಕಂಬ್ಯಾಕ್ ಮಾಡಿದ್ದ ಅಶ್ವಿನ್

ಅಶ್ವಿನ್ ಎಲ್ಲಾ ಮೂರು ಮಾದರಿಗಳಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಾದರು. ಬಹಳ ವರ್ಷಗಳ ಬಳಿಕ ರವಿಚಂದ್ರನ್ ಅಶ್ವಿನ್ ಏಕದಿನ ಫಾರ್ಮೆಟ್‌ಗೆ ಮರಳಿದ್ರು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಅಶ್ವಿನ್ 53 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್‌ನಲ್ಲಿ ಕೇವಲ 7 ರನ್‌ ಕಲೆಹಾಕಿದ್ರು. ಇನ್ನು ಪಾರ್ಲ್‌ನಲ್ಲೇ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಶ್ವಿನ್ ವಿಕೆಟ್‌ ಕೂಡ ಪಡೆಯಲು ಸಾಧ್ಯವಾಗದೇ 68 ರನ್‌ಗಳನ್ನ ಎದುರಾಳಿಗೆ ಬಿಟ್ಟುಕೊಟ್ಟರು. ಹೀಗಾಗಿ ಸರಣಿ ಸೋತ ಭಾರತ ಅಂತಿಮ ಪಂದ್ಯದಲ್ಲಿ ನಾಲ್ಕು ಬದಲಾವಣೆ ಮಾಡಿತು. ಇದ್ರಲ್ಲಿ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಯಿತು.ಆದ್ರೆ ಈ ಪಂದ್ಯದಲ್ಲೂ ಭಾರತ ಗೆಲ್ಲಲು ಸಾಧ್ಯವಾಗದೇ ನಾಲ್ಕು ರನ್‌ಗಳಿಂದ ಪಂದ್ಯ ಬಿಟ್ಟುಕೊಟ್ಟಿತು.

ಕೊಹ್ಲಿ ಬದಲಿಗೆ ಟೆಸ್ಟ್ ಮಾದರಿಯಲ್ಲಿ ಭಾರತವನ್ನು ಮುನ್ನಡೆಸುವವರು ಯಾರು?: ಬ್ರೇಟ್ ಲೀ ಹೇಳಿದ್ದಿಷ್ಟು!

ಆಫ್ರಿಕಾ ವಿರುದ್ಧ ಏಕದಿನ ಸರಣಿಯೇ ಕೊನೆಯಾಯಿತೇ?

ಆಫ್ರಿಕಾ ವಿರುದ್ಧ ಏಕದಿನ ಸರಣಿಯೇ ಕೊನೆಯಾಯಿತೇ?

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅಶ್ವಿನ್ ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಾಗಿಯೇ ವೆಸ್ಟ್ ಇಂಡೀಸ್ ಜೊತೆಗಿನ ಸರಣಿಗೆ ಅವರನ್ನು ಆಯ್ಕೆ ಮಾಡಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ, ವಾಸ್ತವವಾಗಿ ಅಶ್ವಿನ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹಿರಿಯ ಸ್ಪಿನ್ನರ್ ದಕ್ಷಿಣ ಆಫ್ರಿಕಾ ಪ್ರವಾಸದ ಎರಡನೇ ಏಕದಿನ ಪಂದ್ಯದಿಂದ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದಾರೆ. ಅಶ್ವಿನ್ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ವಿಂಡೀಸ್ ಜೊತೆಗಿನ ಸರಣಿ ಕೈ ತಪ್ಪಿದಂತಿದೆ. ಆದರೆ, ಅಶ್ವಿನ್ ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಅಥವಾ ತಂಡದ ಆಡಳಿತ ಮಂಡಳಿಯಿಂದ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅಶ್ವಿನ್ ಆಯ್ಕೆಯಾಗದಿರುವ ಹಿಂದಿನ ನಿಜವಾದ ಕಾರಣದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ.

ಮೊಹಮ್ಮದ್ ಶಮಿಗೆ ಟೆಸ್ಟ್ ತಂಡದ ನಾಯಕನಾಗುವ ಆಸೆ | Oneindia Kannada
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

ಟೀಂ ಇಂಡಿಯಾ ಟಿ20 ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಸರ್ ಪಟೇಲ್, ಯುಜವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್

For Quick Alerts
ALLOW NOTIFICATIONS
For Daily Alerts
Story first published: Thursday, January 27, 2022, 20:20 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X