ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಬಯೋಬಬಲ್ ವಾತಾವರಣ ಬಗ್ಗೆ ಆರ್ ಅಶ್ವಿನ್ ಪ್ರಶಂಸೆ

R Ashwin Praises Indias bio-bubble bond after series win over England

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಪ್ರತಿಕ್ರಿಯಿಸಿದ್ದು ಭಾರತದ ಬಯೋಬಬಲ್ ವಾತಾವರಣದಲ್ಲಿ ಆಟಗಾರರ ಬಂಧದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ನಾವು ಆಸ್ಟ್ರೇಲಿಯಾದಲ್ಲಿ ಬಯೋಬಬಲ್ ವಾತಾವರಣವನ್ನು ಎದುರಿಸಿದೆವು. ಕೆಲವು ಬಾರಿ ಹೋಟೆಲ್‌ಗಳು ಅತಿಯಾದ ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳುತ್ತಿದ್ದರು. ಅದರ ಪರಿಣಾಮವಾಗಿ ನಾವು ಶುದ್ಧ ಗಾಳಿಯನ್ನು ಕೂಡ ಪಡೆಯುತ್ತಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆಯದಂತಾ ಪರಿಸ್ಥಿತಿಗಳೂ ಇತ್ತು. 14 ದಿನಗಳಾಗಿರಬಹುದು 20 ದಿನ ಅಥವಾ 25 ದಿನಗಳ ಕಾಲ ಕನಿಷ್ಠ ಕಿಟಕಿ ಬಾಗಿಲುಗಳನ್ನು ತೆರೆಯದಂತಿರುವುದು ನಿಜಕ್ಕೂ ಕಠಿಣ" ಎಂದು ಆರ್ ಆಶ್ವಿನ್ ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷಸುನಿಲ್ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ

"ತಂಡದ ಸದಸ್ಯಗೆ ಉಂಟಾದ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಆಡಳಿತ ಮಂಡಳಿ ಮಧ್ಯಪ್ರವೇಶ ಮಾಡಿ ಪರಿಹರಿಸಲು ಪ್ರಯತ್ನಿಸಿದೆ. ಆಟಗಾರರಿಗೆ ಅನುಕೂಲವಾಗುವಂತೆ ಯಾವುದು ಉತ್ತಮ ನಿರ್ಧಾರ ಎಂಬುದನ್ನು ನಿರ್ಧರಿಸಿ ತಂಡದ ಬೆಂಬಲಕ್ಕೆ ನಿಂತು ಆಹಾರವೂ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸಿದೆ. ಇವೆಲ್ಲಾ ತುಂಬಾ ಸಣ್ಣ ಸಣ್ಣ ವಿಚಾರಗಳು" ಎಂದಿದ್ದಾರೆ ಆರ್ ಅಶ್ವಿನ್.

ಇನ್ನು ಇಷ್ಟೇಲ್ಲಾ ಸವಾಲುಗಳ ಮಧ್ಯೆಯೂ ಬಯೋಬಬಲ್‌ ವಾತಾವರಣವನ್ನು ಅನುಭವಿಸಿದ್ದೇವೆ ಎಂದಿದ್ದಾರೆ. ಅದಕ್ಕೆ ತಂಡದ ಆಟಗಾರರ ಮಧ್ಯೆ ಇರುವ ಬಂಧ ಅತ್ಯಂತ ಸಹಕಾರಿಯಾಯಿತು ಎಂದು ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಸಂಪೂರ್ಣ ಮಾಹಿತಿಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ, ಸಂಪೂರ್ಣ ಮಾಹಿತಿ

"ಯಾರೂ ಕೂಡ ಭಾರತೀಯ ತಂಡದ ಬಯೋಬಬಲ್‌ನಿಂದ ಆಚೆ ಹೋಗುವ ಪ್ರಯತ್ನವನ್ನು ಮಾಡಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಆಟವನ್ನಾಡಲು ಪ್ರಯತ್ನಿಸಿದ್ದಾರೆ. ಕಳೆದ 8 ತಿಂಗಳು ಬಹಳ ಕಠಿಣವಾಗಿತ್ತು. ತಂಡದಲ್ಲಿ ನಾವು ಸೃಷ್ಟಿಸಿಕೊಂಡಿದ್ದ ಬಾಂಧವ್ಯವನ್ನು ಈ ಹಿಂದೆ ಇಷ್ಟು ಚೆನ್ನಾಗಿ ಅನುಭವಿಸಲಿರಲಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಳ್ಳಳು ಬಹಳ ಸಹಕಾರಿಯಾಯಿತು. ಬಯೋಬಬಲ್ ವಾತಾವರಣವನ್ನು ನಾವು ತುಂಬಾ ಚೆನ್ನಾಗಿ ಅನುಭವಿಸಿದ್ದೇವೆ. ನನ್ನ ಎಲ್ಲಾ ತಂಡದ ಸದಸ್ಯರೊಂದಿಗೆ ಇಷ್ಟು ಸಾಕಷ್ಟು ಸಮಯವನ್ನು ಹಾಗೂ ಇಷ್ಟು ಉತ್ತಮವಾದ ಬಾಂಧವ್ಯವನ್ನು ಹೊಂದುತ್ತೇನೆ ಎಂದು ಭಾವಿಸಿರಲಿಲ್ಲ" ಎಂದಿದ್ದಾರೆ ಆರ್ ಅಶ್ವಿನ್.

Story first published: Sunday, March 7, 2021, 9:51 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X