ಸಿಕ್ಸ್ ಹೊಡೆದಿದ್ದನ್ನು ನೋಡಿದ್ದೇವಾ?
ಬ್ಯಾಟಿಂಗ್ ಕೋಚ್ ರಾಥೋಡ್ ಅವರಲ್ಲಿ ಅಶ್ವಿನ್, 'ಪೂಜಾರ ಅವರು ಆಫ್ ಸ್ಪಿನ್ನರ್ಗೆ ಸಿಕ್ಸ್ ಹೊಡೆದಿದ್ದನ್ನು ನಾವು ಯಾವತ್ತಾದರೂ ನೋಡಿದ್ದೇವಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಥೋಡ್, 'ಕೆಲಸ ಪ್ರಗತಿಯಲ್ಲಿದೆ. ಕನಿಷ್ಟ ಒಂದುಸಾರಿಯಾದ್ರೂ ನೀವು ಸಿಕ್ಸ್ ಹೊಡೆಯಬೇಕೆಂದು ನಾನು ಅವರಿಗೆ ಮನವರಿಕೆ ಮಾಡಿಸುತ್ತಿದ್ದೇನೆ. ಅವರಿನ್ನೂ ಅತ್ತ ಹೋಗಿಲ್ಲ,' ಎಂದರು.
ಅರ್ಧ ಮೀಸೆ ಬೋಳಿಸುತ್ತೇನೆ
ರಾಥೋಡ್ ಪ್ರತಿಕ್ರಿಯೆಗೆ ಉತ್ತರಿಸಿದ ಅಶ್ವಿನ್, 'ಮುಂಬರಲಿರುವ ಇಂಗ್ಲೆಂಡ್ ಸರಣಿಯಲ್ಲಿ ಪೂಜಾರ ಒಂದು ವೇಳೆ ಮೊಯೀನ್ ಅಲಿ ಅಥವಾ ಬೇರೆ ಯಾರಾದರೂ ಸ್ಪಿನ್ನರ್ಗೆ ಸಿಕ್ಸ್ ಬಾರಿಸಿದರೆ, ನಾನು ಅದೇ ಸರಣಿಯಲ್ಲಿ ನನ್ನ ಅರ್ಧ ಮೀಸೆ ಬೋಳಿಸಿ ಆಡುತ್ತೇನೆ. ಇದು ಓಪನ್ ಚಾಲೆಂಜ್,' ಎಂದು ತಮಾಷೆಯಾಗಿ ಸವಾಲೆಸೆದಿದ್ದಾರೆ.
ಸವಾಲನ್ನು ಪೂಜಾರ ಸ್ವೀಕರಿಸಿದ್ದಾರೆ
ಅಶ್ವಿನ್ ಮಾತಿಗೆ ಪ್ರತಿಕ್ರಿಯಿಸಿದ ರಾಥೋಡ್, 'ಇದು ದೊಡ್ಡ ಸವಾಲು. ಇದನ್ನು ಪೂಜಾರ ಸ್ವೀಕರಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಆದರೆ ಆತ (ಅಶ್ವಿನ್) ಮೀಸೆ ತೆಗೆಯುತ್ತಾನೆ ಎಂದು ನನಗನ್ನಿಸುತ್ತಿಲ್ಲ,' ಎಂದು ತರಲೆ ಮಾಡಿದ್ದಾರೆ. ಭಾರತ vs ಇಂಗ್ಲೆಂಡ್ ಸರಣಿ ಟೆಸ್ಟ್ ಸರಣಿಯೊಂದಿಗೆ ಫೆಬ್ರವರಿಯಿಂದ ಆರಂಭಗೊಳ್ಳಲಿದೆ.
ಪೂಜಾರ ಟೆಸ್ಟ್ನಲ್ಲಿ ಸಿಕ್ಸ್ ಬಾರಿಸಿಲ್ವಾ?
ಈವರೆಗೆ ಪೂಜಾರ 81 ಟೆಸ್ಟ್ ಪಂದ್ಯಗಳು, 136 ಇನ್ನಿಂಗ್ಸ್ಗಳನ್ನು ಆಡಿದ್ದಾರೆ. 47.74ರ ಸರಾಸರಿಯಲ್ಲಿ 6111 ರನ್ ಬಾರಿಸಿದ್ದಾರೆ. ಇದರಲ್ಲಿ 18 ಶತಕ, 3 ದ್ವಿಶತಕ, 28 ಅರ್ಧ ಶತಕಗಳು ಸೇರಿವೆ. ಅಷ್ಟೇ ಅಲ್ಲ ಪೂಜಾರ ಟೆಸ್ಟ್ನಲ್ಲಿ 720 ಫೋರ್ಸ್, 14 ಸಿಕ್ಸರ್ಗಳ ದಾಖಲೆ ಹೊಂದಿದ್ದಾರೆ.