ಸ್ಪಾಟ್‌ ಫಿಕ್ಸಿಂಗ್: ಬ್ರೆಂಡನ್ ಟೇಲರ್‌ ಪರ ನಿಂತ ಆರ್‌. ಅಶ್ವಿನ್

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಲು ಭಾರತದ ಉದ್ಯಮಿಯೊಬ್ಬ ನನ್ನನ್ನು ಒತ್ತಾಯಿಸುತ್ತಿದ್ದನು. ನಾನು ಕೊಕೇನ್ ಸ್ವೀಕರಿಸುತ್ತಿರುವ ವೀಡಿಯೋವನ್ನು ಎಲ್ಲೆಡೆ ಹರಿದು ಬಿಡುತ್ತೇನೆ ಎಂದು ಬೆದರಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಬ್ರೆಂಡನ್ ಟೇಲರ್ ಸವಿಸ್ತಾರವಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಈ ವಿಚಾರವಾಗಿ ನಾನು ಐಸಿಸಿಗೆ ಸರಿಯಾದ ಸಮಯದಲ್ಲಿ ತಿಳಿಸದ ಕಾರಣ ನಿಷೇಧ ಎದುರಿಸಿದ್ದೇನೆ ಎಂದು ಜಿಂಬಾಬ್ವೆ ಮಾಜಿನ ನಾಯಕ ಟೇಲರ್ ಹೇಳಿದ್ದಾರೆ.

ಇರುವುದನ್ನು ಹೇಳಲು ನಾಚಿಕೆ ಇಲ್ಲ; ದ.ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ರಾಹುಲ್!ಇರುವುದನ್ನು ಹೇಳಲು ನಾಚಿಕೆ ಇಲ್ಲ; ದ.ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ರಾಹುಲ್!

ಸ್ಪಾಟ್‌ ಫಿಕ್ಸಿಂಗ್‌ಗಾಗಿ 15,000 ಡಾಲರ್ ಪಡೆದ ನಂತರ ನಾನು ಈ ರೀತಿಯಾದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದೇನೆ ಎಂದು ಬ್ರೆಂಡನ್ ಟೇಲರ್ ತಿಳಿಸಿದ್ದರು. ಆದ್ರೆ ಬ್ರೆಂಡನ್‌ ಟೇಲರ್‌ ಅವರ ಈ ಶಾಕಿಂಗ್‌ ಹೇಳಿಕೆಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾದ ಅನುಭವಿ ಆಫ್‌ ಸ್ಪಿನ್ನರ್‌ ಆರ್‌. ಅಶ್ವಿನ್ ಇಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.

"ಜಾಗೃತಿ ಮೂಡಿಸುತ್ತಿದ್ದೇನೆ. ಜೂಜು ಆಡುವ ಸಂದರ್ಭದಲ್ಲಿ ನಮ್ಮ ಕೈಗಳಿಗೆ ಎರಡು ಆಯ್ಕೆ ಇರುತ್ತದೆ. ಒಂದು ಬಾಜಿ ಕಟ್ಟಲು ಕೈ ಚಾಚುವುದು ಅಥವಾ ಅದೇ ಕೈಗಳನ್ನು ಮಡಚಿ ಹಿಂದೆ ಸರಿಯುವುದು. ಕೈಗಳನ್ನು ಮಡಚಿ ಅಲ್ಲಿಂದ ಹಿಂದೆ ಸರಿಯುವುದೇ ಮುಖ್ಯವಾಗಿರುತ್ತದೆ. ಬ್ರೆಂಡನ್‌ ಮತ್ತು ಕುಟುಂಬದವರಿಗೆ ಹೆಚ್ಚಿನ ಶಕ್ತಿ ಸಿಗಲಿ," ಎಂದು ಆರ್‌ ಅಶ್ವಿನ್‌ ಟ್ವೀಟ್‌ ಮಾಡಿದ್ದಾರೆ.

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಕೂಡ ಪ್ರತಿಕ್ರಿಯೆ ನೀಡಿದ್ದು, "ಇದು ಬಹಳಾ ಕೆಟ್ಟ ಸಂಗತಿ. ಬ್ರೆಂಡನ್‌ಗೆ ಇದರಿಂದ ಹೊರಬರುವ ದಾರಿ ಸಿಗುತ್ತದೆ ಎಂದು ಆಶಿಸುತ್ತೇನೆ," ಎಂದು ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

2019ರ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯ ಉದ್ಯಮಿಯೊರ್ವನಿಂದ ಹಣವನ್ನು ಸ್ವೀಕರಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸುರಕ್ಷತೆಯ ಕಾರಣಕ್ಕೆ ಹೆದರಿ ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಘಟನೆಯ ಬಗ್ಗೆ ವರದಿ ಮಾಡಲು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದ್ದೆ ಎಂದು ಟೇಲರ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿಂಬಾಬ್ವೆಯಲ್ಲಿ ಹೊಸ ಟಿ20 ಟೂರ್ನಿಯನ್ನು ಆಯೋಜಿಸುವ ದೃಷ್ಟಿಯಿಂದ ಮುಂಗಡವಾಗಿ 15,000 ಡಾಲರ್ ಮೊತ್ತವನ್ನು ನೀಡಿದ್ದ.

Kohli ನಾಯಕತ್ವ ಬಿಡುವ ಹಿಂದೆ ದೊಡ್ಡ ಮಾಸ್ಟರ್ ಪ್ಲಾನ್ ಇತ್ತಾ! | Oneindia Kannada

ನಾವು ಜೊತೆಯಾಗಿ ಡ್ರಿಂಕ್ಸ್ ಸ್ವೀಕರಿಸಿದ್ದೆವು. ಸಂಜೆಯ ವೇಳೆಗೆ ಆತ ನನಗೆ ಕೊಕೇನ್ ನೀಡಿದ್ದ. ಆತ ಕೂಡ ಕೊಕೇನ್ ಸೇವಿಸಿದ್ದ. ನಾನು ಮೂರ್ಖತನದಿಂದ ಆತನ ಆಮಿಷಕ್ಕೆ ಬಿದ್ದೆ. ಮರುದಿನ ನನ್ನ ರೂಮ್‌ಗೆ ಬಂದಿದ್ದ ಆತ, ಹಿಂದಿನ ದಿನ ಕೊಕೇನ್ ಸೇವಿಸಿದ್ದ ವಿಡಿಯೋಗಳನ್ನು ನನ್ನ ಮುಂದಿಟ್ಟು ಬೆದರಿಕೆಯನ್ನು ಹಾಕಿದ್ದ ಎಂದು ತನ್ನ ಅಸಹಾಯಕ ಸ್ಥಿತಿಯನ್ನ ವಿವರಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, January 24, 2022, 23:38 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X