ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಬರ್ ಅಜಂ ಅಲ್ಲ: ಈ ಪಾಕ್ ಆಟಗಾರ ಐಪಿಎಲ್‌ನಲ್ಲಿ ಇದ್ದರೆ 14-15 ಕೋಟಿಗೆ ಹರಾಜಾಗುತ್ತಿದ್ದ ಎಂದ ಆರ್ ಅಶ್ವಿನ್

R Ashwinsaid if Shaheen Afridi there at IPL Auction might have gone for 14-15 crore

ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿಯ ಮೇಲೆ ಎಲ್ಲರ ಗಮನವಿರುವ ಸಂದರ್ಭದಲ್ಲಿ ಭಾರತದ ಹಿರಿಯ ಆಟಗಾರ ಆರ್ ಅಶ್ವಿನ್ ಕುತೂಹಲಕಾರಿ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರೇನಾದರೂ ಇದ್ದಿದ್ದರೆ ಈ ಒಬ್ಬ ಆಟಗಾರ 14-1 ಕೋಟಿಗೆ ಹರಾಜಾಗಿರುತ್ತಿದ್ದ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯ ಪರಿಸ್ಥಿತಿ ಹಳಸಿರುವ ಕಾರಣ ಕ್ರಿಕೆಟ್ ಸಂಬಂಧವಿಲ್ಲದೆ ದಶಕಗಳೇ ಕಳೆದಿದೆ.ಹೀಗಾಗಿ ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿಯೂ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಕೇವಲ ಐಸಿಸಿ ಹಾಗೂ ಏಷ್ಯಾ ಕಪ್‌ನಲ್ಲಿ ಮಾತ್ರವೇ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ ಅಶ್ವಿನ್ ವ್ಯಕ್ತಪಡಿಸಿರುವ ಈ ಹೇಲಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಹಾಗಾದರೆ ಐಪಿಎಲ್‌ನಲ್ಲಿ ಬೃಹತ್ 14-15 ಕೊಟಿ ಮೊತ್ತಕ್ಕೆ ಹರಾಜಾಗಬಹುದಾದು ಎಂದು ಆರ್ ಅಶ್ವಿನ್ ಹೆಸರಿಸಿದ ಆ ಆ ಆಟಗಾರ ಯಾರು? ಮುಂದೆ ಓದಿ..

ಬಾಬರ್ ಅಜಂ ಅಲ್ಲ.. ಶಾಹೀನ್ ಅಫ್ರಿದಿ

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿರುವ ಪಾಕಿಸ್ತಾನದ ಆಟಗಾರ ಆ ತಂಡದ ನಾಯಕ ಬಾಬರ್ ಅಜಂ. ಆದರೆ ಆರ್ ಅಶ್ವಿನ್ ಯುವ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನ ಈ ಯುವ ವೇಗದ ಬೌಲರ್ ಐಪಿಎಲ್‌ನಲ್ಲಿ ಹೆಚ್ಚು ಬೇಡಿಕೆಯನ್ನು ಪಡೆಯಬಹುದಾದ ಆಟಗಾರನಾಗಿದ್ದು 14-15 ಕೋಟಿಯಷ್ಟು ಮೊತ್ತಕ್ಕೆ ಹರಾಜಾಗಬಹುದು ಎಂದಿದ್ದಾರೆ.

ಬಾಬರ್ ನೇತೃತ್ವದ ತಂಡಕ್ಕೆ ಹಿನ್ನಡೆಯಾಗಲಿದೆ ಎಂದ ಅಶ್ವಿನ್
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆರ್ ಅಶ್ವಿನ್ ಈ ಬಾರಿಯ ಏಷ್ಯಾ ಕಪ್‌ನಿಂದ ಶಾಹೀನ್ ಅಫ್ರಿದಿ ಹೊರಗುಳಿಯುತ್ತಿರುವುದು ತಂಡಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿನ ಮುಖಾಮುಖಿಯನ್ನು ಉಲ್ಲೇಖಿಸಿರುವ ಅಶ್ವಿನ್ ಆ ಸೆಣೆಸಾಟದಲ್ಲಿ ಪಾಕ್‌ನ ವೇಗಿ ಯಾವ ರೀತಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. "ನಾವು ಕೊನೆಯ ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿದ್ದಾಗ ಶದಬ್ ಖಾನ್ ಹಾಗೂ ಹ್ಯಾರೀಸ್ ರವೂಫ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದರು. ಆದರೆ ಶಾಹೀನ್ ಶಾ ಅಫ್ರಿದಿ ಆರಂಭದಲ್ಲಿಯೇ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದರು. ಹೀಗಾಗಿ ಅವರಿಗೆ ಈ ಬಾರಿಯ ಪಂದ್ಯಕ್ಕೂ ಮುನ್ನ ಅಫ್ರಿದಿ ಗಾಯಗೊಂಡಿರುವುದು ದೊಡ್ಡ ಹಿನ್ನಡೆ" ಎಂದಿದ್ದಾರೆ ಆರ್ ಅಶ್ವಿನ್.

ಅಫ್ರಿದಿ ಹರಾಜಿನಲ್ಲಿದ್ದರೆ..

ಮುಂದುವರಿದು ಮಾತನಾಡಿದ ಆರ್ ಅಶ್ವಿನ್ "ಶಾಹೀನ್ ಅಫ್ರಿದಿ ಏನಾದರೂ ಐಪಿಎಲ್ ಹರಾಜಿನಲ್ಲಿದ್ದರೆ ಎಷ್ಟು ಕ್ರೇಜಿಯಾಗಿರಬಹುದು ಎಂದು ನಾನು ಯೋಚಿಸುತ್ತಿದ್ದೆ. ಹೊಸ ಚೆಂಡಿನೊಂದಿಗೆ ಇನ್ನಿಂಗ್ಸ್ ಆರಂಭಿಸಬಲ್ಲ ಎತ್ತರದ ಎಡಗೈ ವೇಗದ ಬೌಲರ್, ಡೆತ್ ಓವರ್‌ನಲ್ಲಿಯೂ ಪರಿಣಾಮಕಾರಿಯಾಗಿ ಯಾರ್ಕರ್ ಎಸೆಯಬಲ್ಲಂತಾ ಸಾಮರ್ಥ್ಯ ಹೊಂದಿದ್ದಾರೆ. ನನ್ನ ಪ್ರಕಾರ ಅವರು 14-15 ಕೋಟಿಗೆ ಹರಾಜಾಗಿರುತ್ತಿದ್ದರು" ಎಂದಿದ್ದಾರೆ ಆರ್ ಅಶ್ವಿನ್.

ಪಾಕಿಸ್ತಾನದ ಬೌಲಿಂಗ್ ವಿಭಾಗದ ಬಗ್ಗೆ ಅಶ್ವಿನ್ ಮೆಚ್ಚುಗೆ

ಇನ್ನು ಶಾಹೀನ್ ಅಫ್ರಿದಿ ಇಲ್ಲದಿದ್ದರೂ ಪಾಕಿಸ್ತಾನದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ ಎಂಬ ಅಂಶವನ್ನು ಅಶ್ವಿನ್ ಉಲ್ಲೇಖಿಸಿದ್ದಾರೆ. ಪಾಕಿಸ್ತಾನ ತಂಡದಲ್ಲಿರುವ ಎಲ್ಲಾ ಬೌಲರ್‌ಗಳು ಕೂಡ ಸ್ಥಿರವಾಗಿ 140-145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಷ್ಟು ಅದ್ಭುತವಾದ ಬೌಲಿಂಗ್ ಬ್ಯಾಕ್‌ಅಪ್ ಹೊಂದಿರುವ ಉಳಿದ ತಂಡಗಳು ಇದೆ ಎಂದು ನನಗೆ ಅನಿಸುತ್ತಿಲ್ಲ. ಪಾಕಿಸ್ತಾನ ತಂಡ ಯಾವಾಗಲೂ ಯುವ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ" ಎಂದಿದ್ದಾರೆ ಭಾರತದ ಅನುಭವಿ ಆಟಗಾರ ಆರ್ ಅಶ್ವಿನ್. ಭಾರತ ಹಾಗೂ ಪಾಕಿಸ್ತಾನ ತಮಡಗಳ ನಡುವಿನ ಮುಖಾಮುಖಿಗೂ ಮುನ್ನ ಈ ಅಭಿಪ್ರಾಯವನ್ನು ಭಾರತದ ಅನುಭವಿ ಆಟಗಾರ ಹಂಚಿಕೊಂಡಿದ್ದಾರೆ.

Story first published: Sunday, August 28, 2022, 18:55 [IST]
Other articles published on Aug 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X