ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಸ್‌ ಓಪನ್ 2020: ಸ್ಪರ್ಧೆಯಿಂದ ಹಿಂದಕ್ಕೆ ಸರಿದ ರಾಫೆಲ್ ನಡಾಲ್

Rafael Nadal Withdraws, Novak Djokovic to Take Call in Coming Days

ಕೊರೊನಾ ವೈರಸ್‌ನ ಭೀತಿಯ ಮಧ್ಯೆಯೇ ಯುಎಸ್ ಓಪನ್ ನಡೆಸಿಯೇ ತೀರುವ ನಿರ್ಧಾರ ಮಾಡಿರುವ ಯುಎಸ್ ಓಪನ್ ಆಯೋಜಕರಿಗೆ ದೊಡ್ಡ ಹಿನ್ನೆಡೆಯಾಗಿದೆ. ಚಿಕಿತ್ಸೆಯ ಕಾರಣದಿಂದಾಗಿ ರೋಜರ್ ಫೆಡರರ್‌ ಈ ವರ್ಷದ ಎಲ್ಲಾ ಗ್ರ್ಯಾಂಡ್‌ಸ್ಲ್ಯಾಮ್‌ಗಳಿಂದ ಹಿಂದೆ ಸರಿದ ನಂತರ ರಾಫೆಲ್ ನಡಾಲ್ ಕೂಡ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿಯುವುದನ್ನು ಖಚಿತಪಡಿಸಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷದ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ. 'ಕೋವಿಡ್-19 ಪ್ರಕರಣಗಳ ಏರಿಕೆಯಿಂದಾಗಿ ಈಗ ವಿಶ್ವದೆಲ್ಲೆಡೆ ಸಂಕಷ್ಟದ ಸಮಯವಿದೆ. ವೈರಸ್ ಮೇಲೆ ನಾವು ಇನ್ನೂ ನಿಯಂತ್ರಣ ಸಾಧಿಸಿದಂತೆ ಕಾಣಿಸುತ್ತಿಲ್ಲ. ನಾನು ಈ ನಿರ್ಧಾರ ತೆಗೆದುಕೊಳ್ಳಲು ಬಯಸಿರಲಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡದಿರಲು ನಿರ್ಧರಿಸಿರುವೆ' ಎಂದಿದ್ದಾರೆ ರಾಫೆಲ್ ನಡಾಲ್.

ಧೋನಿಯ ಹೆಲಿಕಾಪ್ಟರ್ ಶಾಟ್‌ಗಳನ್ನು ಯುಎಇನಲ್ಲಿ ನೀವು ನೋಡಲಿದ್ದೀರಿ: ಸುರೇಶ್ ರೈನಾಧೋನಿಯ ಹೆಲಿಕಾಪ್ಟರ್ ಶಾಟ್‌ಗಳನ್ನು ಯುಎಇನಲ್ಲಿ ನೀವು ನೋಡಲಿದ್ದೀರಿ: ಸುರೇಶ್ ರೈನಾ

ಪ್ರದರ್ಶನ ಟೂರ್ನಿಯ ವೇಳೆ ಕರೊನಾ ವೈರಸ್ ಸೋಂಕಿತರಾಗಿ ಈಗ ಗುಣಮುಖರಾಗಿರುವ ವಿಶ್ವ ನಂ. 1 ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಯುಎಸ್ ಓಪನ್ ಆಡುವ ಬಗ್ಗೆ ಇನ್ನೂ ಸ್ಪಷ್ಟತೆಗಳು ದೊರೆತಿಲ್ಲ. ಪರಿಸ್ಥಿತಿ ಅವಲೀಕಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಸರ್ಬಿಯಾ ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಂದೆಡೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಕೂಡ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದರು. ಉಳಿದಂತೆ ಬಹುತೇಕ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. ಆದರೆ ಅವರು ಕೊನೆಯ ಕ್ಷಣದಲ್ಲೂ ಹಿಂದೆ ಸರಿಯುವ ಅಪಾಯ ಇದ್ದೇ ಇದೆ ಎನ್ನಲಾಗಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ಆಟಗಾರರ ಸಂಪೂರ್ಣ ಪಟ್ಟಿಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ಆಟಗಾರರ ಸಂಪೂರ್ಣ ಪಟ್ಟಿ

ಕಳೆದ ಮಾರ್ಚ್‌ನಲ್ಲಿ ಕರೊನಾ ವೈರಸ್ ಹಾವಳಿ ಹಬ್ಬಿದ ಬೆನ್ನಲ್ಲೇ ವೃತ್ತಿಪರ ಟೆನಿಸ್ ಚಟುವಟಿಕೆ ಸ್ತಬ್ಧಗೊಂಡಿತ್ತು. ಈ ವಾರ ಇಟಲಿಯ ಪಲೆರ್ಮೋ ಓಪನ್ ಮಹಿಳಾ ಟೆನಿಸ್ ಟೂರ್ನಿಯ ಮೂಲಕ ವೃತ್ತಿಪರ ಟೆನಿಸ್ ಪುನರಾರಂಭ ಕಂಡಿದೆ. ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಮ್ಯಾಡ್ರಿಡ್ ಓಪನ್ ಟೂರ್ನಿಯನ್ನು ಸ್ಪೇನ್‌ನಲ್ಲಿ ಮತ್ತೆ ಕರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

Story first published: Thursday, August 6, 2020, 15:52 [IST]
Other articles published on Aug 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X