ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿದ ಪೂಜಾರ

Ajinkya Rahane and I will hit century soon declares Cheteshwar Pujara ahead of first test against New Zealand

ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಸೋಲುವುದರ ಮೂಲಕ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ರನ್ನರ್ ಅಪ್ ಆಗಿ ಟೂರ್ನಿಯಿಂದ ಹೊರ ಹೊಮ್ಮಿತು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ನಂತರ ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಈಗಾಗಲೇ ಮುಗಿದಿದ್ದು ಎಲ್ಲಾ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಭಾರತ ವೈಟ್ ವಾಶ್ ಸಾಧನೆ ಮಾಡಿದೆ.

ಭಾರತ vs ಪಾಕ್ ಸರಣಿ ಆಯೋಜನೆಗೆ ಈ ದೇಶದಿಂದ ಸಿಕ್ತು ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಮಾತುಕತೆಭಾರತ vs ಪಾಕ್ ಸರಣಿ ಆಯೋಜನೆಗೆ ಈ ದೇಶದಿಂದ ಸಿಕ್ತು ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಮಾತುಕತೆ

ಮೊದಲಿಗೆ ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ ರಾಂಚಿಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ವಶಪಡಿಸಿಕೊಂಡಿತು. ಹಾಗೂ ನಂತರ ಅಂತಿಮವಾಗಿ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸರಣಿಯಲ್ಲಿ ವೈಟ್ ವಾಷ್ ಬಳಿದಿದೆ. ಹೀಗೆ ಟಿ ಟ್ವೆಂಟಿ ಸರಣಿ ಗೆದ್ದು ಬೀಗಿರುವ ಭಾರತ ನವೆಂಬರ್ 25ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ಗೆಲ್ಲುವ ಯೋಜನೆಯಲ್ಲಿದೆ.

ಹೀಗೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಭಾರತದ ಪ್ರಮುಖ ಆಟಗಾರರು ಹೊರಗುಳಿದಿದ್ದು, ತಂಡದಲ್ಲಿ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕಳಪೆ ಫಾರ್ಮ್‌ನಿಂದ ಹೊರಬಂದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ. ಅದರಲ್ಲಿಯೂ ಕಳೆದ 22 ಟೆಸ್ಟ್ ಪಂದ್ಯಗಳಿಂದ ಶತಕ ಬಾರಿಸಲಾಗದೇ ಮಂಕಾಗಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾಗೆ 50-60 ರನ್ ಕೊಡುಗೆ ನೀಡುತ್ತಾ ಬಂದಿದ್ದೇನೆ ಎಂದು ಮಾತು ಶುರು ಮಾಡಿದ ಚೇತೇಶ್ವರ ಪೂಜಾರ ಆದಷ್ಟು ಬೇಗ ಶತಕ ಬಾರಿಸಲಿದ್ದೇನೆ ಎಂದಿದ್ದಾರೆ. ಒಂದೊಳ್ಳೆ ಇನ್ನಿಂಗ್ಸ್‌ನ ಅಗತ್ಯತೆಯಿದ್ದು, ಶೀಘ್ರದಲ್ಲಿಯೇ ಶತಕ ಬರಲಿದೆ ಎಂದು ಚೇತೇಶ್ವರ್ ಪೂಜಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!

ಇನ್ನು ಚೇತೇಶ್ವರ್ ಪೂಜಾರ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಬಾರಿಸಿ 1055 ದಿನಗಳೇ ಕಳೆದಿವೆ. ಅಂತಿಮವಾಗಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದಾಗ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 193 ರನ್ ಕಲೆಹಾಕಿದ್ದ ಚೇತೇಶ್ವರ್ ಪೂಜಾರ ನಂತರ ನಡೆದ 22 ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಇದಾದ ಬಳಿಕ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕೆಲ ಅರ್ಧಶತಕಗಳನ್ನು ಬಾರಿಸಿದ್ದ ಚೇತೇಶ್ವರ ಪೂಜಾರ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಮೂಡಿಸಿದ್ದರು. ಸದ್ಯ ತವರಿನಲ್ಲಿಯೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯುವುದರಿಂದ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸುವ ಮೂಲಕ ಯಶಸ್ಸಿನ ಹಾದಿಗೆ ಮರಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ನಾಯಿಯ ಆಲ್ ರೌಂಡ್ ಆಟಕ್ಕೆ ಮನಸೋತ ಕ್ರಿಕೆಟ್ ದೇವರು ಹೇಳಿದ್ದೇನು? | Oneindia Kannada

Story first published: Wednesday, November 24, 2021, 10:00 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X