ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

Rahul Dravid appointed as Team Indias head coach till 2023
ರವಿ ಶಾಸ್ತ್ರಿ ಅವರ ಜಾಗದಲ್ಲಿ ಇನ್ಮುಂದೆ ರಾಹುಲ್ ದ್ರಾವಿಡ್ | Oneindia Kannada

ದುಬೈ: ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಯಾಗಿದೆ. ಟೀಮ್ ಇಂಡಿಯಾಕ್ಕೆ ಮುಖ್ಯ ಕೋಚ್ ಆಗಲು ಕನ್ನಡಿಗ, ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಒಪ್ಪಿದ್ದಾರೆ. ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ ಫೈನಲ್‌ ಪಂದ್ಯದ ವೇಳೆ ಈ ಬೆಳವಣಿಗೆಯಾಗಿದೆ. ನಡೆದ ಸಭೆಯ ವೇಳೆ ಭಾರತ ರಾಷ್ಟ್ರೀಯ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಲು ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ.

ಐಪಿಎಲ್ 2021: ಅತಿಹೆಚ್ಚು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಟಾಪ್ 5 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ಪಟ್ಟಿಐಪಿಎಲ್ 2021: ಅತಿಹೆಚ್ಚು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಟಾಪ್ 5 ಡೇಂಜರಸ್ ಬ್ಯಾಟ್ಸ್‌ಮನ್‌ಗಳ ಪಟ್ಟಿ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ನಾಲ್ಕನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ನಡೆದ ಸಭೆಯಲ್ಲಿ ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಕೋಚ್ ಆಗಲು ಒಪ್ಪಿಕೊಂಡಿದ್ದಾರೆ.

ರವಿ ಶಾಸ್ತ್ರಿ ಜಾಗಕ್ಕೆ ರಾಹುಲ್ ದ್ರಾವಿಡ್ ಆಯ್ಕೆ

ರವಿ ಶಾಸ್ತ್ರಿ ಜಾಗಕ್ಕೆ ರಾಹುಲ್ ದ್ರಾವಿಡ್ ಆಯ್ಕೆ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ ಶಾ ದುಬೈನಲ್ಲಿ ಐಪಿಎಲ್ ಫೈನಲ್‌ ಪಂದ್ಯದ ವೇಳೆ ಸಭೆ ನಡೆಸಿ, ಟೀಮ್ ಇಂಡಿಯಾಕ್ಕೆ ನೂತನ ಕೋಚ್ ಆಗುವಂತೆ ರಾಹುಲ್ ದ್ರಾವಿಡ್ ಅವರಲ್ಲಿ ಕೋರಿಕೊಂಡಿದ್ದಾರೆ. ಬಿಸಿಸಿಐ ಕೋರಿಕೆಗೆ ದ್ರಾವಿಡ್ ಸಮ್ಮತಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ ಮುಕ್ತಾಯದ ಬಳಿಕ ದ್ರಾವಿಡ್ ಭಾರತ ಮುಖ್ಯ ಕೋಚ್ ಜವಾಬ್ದಾರಿ ಹೊರಲಿದ್ದಾರೆ. ಈಗ ಮುಖ್ಯ ಕೋಚ್ ಆಗಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್‌ ರವಿ ಶಾಸ್ತ್ರಿ ಅವರ ಒಪ್ಪಂದ ಟಿ20 ವಿಶ್ವಕಪ್‌ ಬಳಿಕ ಮುಕ್ತಾಯವಾಗಲಿದೆ. ಅವರ ಜಾಗಕ್ಕೆ ದ್ರಾವಿಡ್ ಬರಲಿದ್ದಾರೆ.

ದ್ರಾವಿಡ್‌ಗೆ ಬರೋಬ್ಬರಿ 10 ಕೋಟಿ ರೂ. ಸಂಬಳ

ದ್ರಾವಿಡ್‌ಗೆ ಬರೋಬ್ಬರಿ 10 ಕೋಟಿ ರೂ. ಸಂಬಳ

"ಭಾರತೀಯ ಕ್ರಿಕೆಟ್ ತಂಡಕ್ಕೆ ಮುಂದಿನ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಒಪ್ಪಿದ್ದಾರೆ. ದ್ರಾವಿಡ್ ಆದಷ್ಟು ಶೀಘ್ರವಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲಿದ್ದಾರೆ," ಎಂದು ಬಿಸಿಸಿಐ ಅಧಿಕಾರಿಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಐಪಿಎಲ್ ಫೈನಲ್‌ ಪಂದ್ಯ ನಡೆದ ಬಳಿಕ ಬಿಸಿಸಿಐ ಮೂಲ ಮಾಧ್ಯಮಕ್ಕೆ ಈ ಸಂಗತಿ ತಿಳಿಸಿದೆ. ತಿಳಿದು ಬಂದಿರುವ ಸಂಗತಿಯ ಪ್ರಕಾರ, ಪುರುಷರ ತಂಡಕ್ಕೆ ದ್ರಾವಿಡ್ ಆಪ್ತ ಪರಸ್ ಮಹಾಂಬ್ರೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಜಾಗಕ್ಕೆ ಬೇರೆ ಹೆಸರು ಸೂಚಿಸಲಾಗಿಲ್ಲ. ನೂತನ ಕೋಚ್ ಆಗಿ ಆಯ್ಕೆಯಾಗಲಿರುವ ರಾಹುಲ್ ದ್ರಾವಿಡ್ 2023ರ ವರೆಗೆ ತಂಡ ಮುನ್ನಡೆಸಲಿದ್ದಾರೆ. ಬಿಸಿಸಿಐ ದ್ರಾವಿಡ್ ಜೊತೆಗೆ 2 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ದ್ರಾವಿಡ್ 10 ಕೋಟಿ ರೂ. ವೇತನ ಪಡೆಯಲಿದ್ದಾರೆ. ಭಾರತ ಬ್ಯಾಟಿಂಗ್‌ ಕೋಚ್ ಆಗಿ ವಿಕ್ರಮ್ ರಾತೋಡ್ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.

ದ್ರಾವಿಡ್ ಸಾಧನೆಯ ಅಂಕಿ-ಅಂಶಗಳು

ದ್ರಾವಿಡ್ ಸಾಧನೆಯ ಅಂಕಿ-ಅಂಶಗಳು

ಭಾರತ ತಂಡಕ್ಕೆ ನಾಯಕರಾಗಿದ್ದ 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್‌ಗೆ ಕೋಚ್ ಆಗಿ ಟೀಮ್ ಇಂಡಿಯಾ ಮುನ್ನಡೆಸಿದ ಅನುಭವವಿದೆ. ಕಳೆದ ಜುಲೈನಲ್ಲಿ ಭಾರತೀಯ ಒಂದು ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದ ದ್ರಾವಿಡ್ ಕೋಚ್ ಆಗಿ ತಂಡದ ಜೊತೆ ತೆರಳಿದ್ದರು. ಆ ವೇಳೆ ಭಾರತದ ಎಂದಿನ ಕೋಚ್ ರವಿ ಶಾಸ್ತ್ರಿ ಭಾರತ ಇನ್ನೊಂದು ತಂಡದ ಜೊತೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳನ್ನಾಡಿತ್ತು. ಇದರಲ್ಲಿ ಏಕದಿನ ಸರಣಿ 2-1ರಿಂದ ಭಾರತದ ವಶವಾಗಿದ್ದರೆ, ಟಿ20 ಸರಣಿ 2-1ರಿಂದ ಲಂಕಾ ವಶವಾಗಿತ್ತು. 48ರ ಹರೆಯದ ದ್ರಾವಿಡ್, 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್, 344 ಏಕದಿನ ಪಂದ್ಯಗಳಲ್ಲಿ 10889 ರನ್, 1 ಟಿ20ಐ ಪಂದ್ಯದಲ್ಲಿ 31 ರನ್ ಮತ್ತು 89 ಐಪಿಎಲ್ ಪಂದ್ಯಗಳಲ್ಲಿ 2174 ರನ್ ಬಾರಿಸಿದ್ದಾರೆ.

Story first published: Saturday, October 16, 2021, 11:24 [IST]
Other articles published on Oct 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X