ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!

Rahul Dravid beats Sachin Tendulkar in Wisden poll on greatest Indian Test batsman

ಬೆಂಗಳೂರು: ಭಾರತೀಯ ಕ್ರಿಕೆಟ್‌ ಜಗತ್ತು ಕಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ಗಳು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್. ಸಚಿನ್ ಅವರನ್ನು ಕ್ರಿಕೆಟ್ ದೇವರೆಂದು ಕರೆದರೆ, ಸಂಕಷ್ಟದ ಸಮಯದಲ್ಲಿ ದೇವರೂ ಕೂಡ ಗೋಡೆ (ದ್ರಾವಿಡ್) ಹಿಂದೆ ಅಡಗಿ ಕುಳಿತುಕೊಳ್ಳುತ್ತಾನೆ ಅನ್ನೋ ಮಾತು ಕ್ರಿಕೆಟ್‌ ಜಗತ್ತಿನಲ್ಲಿದೆ. ಗ್ರೇಟ್ ವಾಲ್ ದ್ರಾವಿಡ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಅಂಥದ್ದು. ಮುಖ್ಯವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ರಾವಿಡ್ ಬಹಳಷ್ಟು ಸಾರಿ ಟೀಮ್ ಇಂಡಿಯಾಕ್ಕೆ ಆಧಾರವಾಗಿ ನಿಂತಿದ್ದಿದೆ, ಗೆಲ್ಲಿಸಿದ್ದಿದೆ.

ಇಂಟರ್‌ ನ್ಯಾಷನಲ್ ಕ್ರಿಕೆಟ್ ಕ್ಯಾಪ್ಟನ್‌ಗಳ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ?!ಇಂಟರ್‌ ನ್ಯಾಷನಲ್ ಕ್ರಿಕೆಟ್ ಕ್ಯಾಪ್ಟನ್‌ಗಳ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ?!

ವಿಸ್ಡನ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿ ಪೋಲ್ ನಡೆಸಿತ್ತು. ಈ ಪೋಲ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಭಾರತದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಆಗಿ 'ಗ್ರೇಟ್ ವಾಲ್' ದ್ರಾವಿಡ್, ಸಚಿನ್‌ಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ.

11,400 ಅಭಿಮಾನಿಗಳು ಭಾಗಿ

11,400 ಅಭಿಮಾನಿಗಳು ಭಾಗಿ

ಪೋಲ್‌ನ ಅಂತಿಮ ಸುತ್ತಿನ ಮತದಲ್ಲಿ ಸುಮಾರು 11,400 ಅಭಿಮಾನಿಗಳು ಪಾಲ್ಗೊಂಡಿದ್ದರು. ಇದರಲ್ಲಿ ದ್ರಾವಿಡ್ 52 ಶೇ. ಮತ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ 48 ಶೇ. ಮತ ಪಡೆದಿದ್ದಾರೆ. ಸಚಿನ್, ದ್ರಾವಿಡ್ ಬಿಟ್ಟರೆ ಮೂರನೇ ಅತ್ಯಧಿಕ ಮತ ಲಭಿಸಿದ್ದು ಮಾಜಿ ಆಟಗಾರ ಸುನಿಲ್ ಗವಾಸ್ಕರ್‌ಗೆ.

ದ್ರಾವಿಡ್ ಬ್ಯಾಟಿಂಗ್ ಇಷ್ಟವಾಗುತ್ತಿತ್ತು

ದ್ರಾವಿಡ್ ಬ್ಯಾಟಿಂಗ್ ಇಷ್ಟವಾಗುತ್ತಿತ್ತು

'ತನ್ನ ವೃತ್ತಿ ಜೀವನದಲ್ಲಿ ಆಡುತ್ತಿದ್ದಾಗ ದ್ರಾವಿಡ್ ಬ್ಯಾಟಿಂಗ್ ಹೆಚ್ಚು ಇಷ್ಟವಾಗುತ್ತಿತ್ತು. ಪೋಲ್‌ನಲ್ಲೂ ದ್ರಾವಿಡ್ ಭರ್ಜರಿ ಪೈಪೋಟಿ ನೀಡಿ ಕೊನೆಯಲ್ಲಿ ಉತ್ತಮ ಲೀಡ್‌ನಲ್ಲಿ ಗೆಲುವಿನ ಗೆರೆ ದಾಟಿದ್ದಾರೆ,' ಎಂದು ವಿಸ್ಡನ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.

16 ಬ್ಯಾಟ್ಸ್‌ಮನ್‌ಗಳ ಹೆಸರು

16 ಬ್ಯಾಟ್ಸ್‌ಮನ್‌ಗಳ ಹೆಸರು

ಭಾರತದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಯಾರು ಅನ್ನೋ ಪ್ರಶ್ನೆ ಮುಂದಿಟ್ಟು 16 ಬ್ಯಾಟಿಂಗ್ ದಂತಕತೆಗಳ ಹೆಸರುಗಳನ್ನು ಪೋಲ್‌ನಲ್ಲಿ ನೀಡಲಾಗಿತ್ತು. ಇದರಲ್ಲಿ ಸುನಿಲ್ ಗವಾಸ್ಕರ್ ಮತ್ತು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೆಮಿಫೈನಲ್ಸ್‌ ವರೆಗೂ ಬಂದಿದ್ದರು. ಆದರೆ ಸ್ವಲ್ಪದರಲ್ಲಿ ಕೊಹ್ಲೀನ ಸೋಲಿಸಿದ ಗವಾಸ್ಕರ್ ಪ್ಲೇ ಆಫ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಅವಿರತ ಶ್ರಮದಿಂದ ಸಾಧನೆ

ಅವಿರತ ಶ್ರಮದಿಂದ ಸಾಧನೆ

ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದರೆ, ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್ ಗಳಿಸಿದ್ದಾರೆ. ಇತ್ತೀಚೆಗೆ ದ್ರಾವಿಡ್ ಮತ್ತು ತೆಂಡೂಲ್ಕರ್ ಬಗ್ಗೆ ಮಾತನಾಡಿದ್ದ ಅವರ ಜೊತೆ ಆಟಗಾರ ವಿವಿಎಸ್ ಲಕ್ಷ್ಮಣ್, ದ್ರಾವಿಡ್ ತನ್ನ ಅವಿರತ ಶ್ರಮದಿಂದ ಸಚಿನ್ ತೆಂಡೂಲ್ಕರ್ ಸಮೀಪಕ್ಕೆ ಬಂದಿದ್ದರು ಎಂದು ಹೇಳಿದ್ದರು.

Story first published: Thursday, June 25, 2020, 10:21 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X