ಆ ಕನ್ನಡಿಗ ಆಟಗಾರ ಕೆಲವು ಬಾರಿ ಸಚಿನ್‌ಗಿಂತಲೂ ಶ್ರೇಷ್ಠರೆನಿಸಿದ್ದಾರೆ ಎಂದ ಪಾಕ್ ಮಾಜಿ ಕ್ರಿಕೆಟಿಗ

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿದ್ದಾರೆ. ಆದರೆ ಅದೆಷ್ಟೋ ಬಾರಿ ಸಚಿನ್ ತೆಂಡೂಲ್ಕರ್ ಅವರನ್ನೂ ಮೀರಿಸಿದ ಆಟಗಾರ ಎಂದು ರಾಹುಲ್ ಡ್ರಾವಿಡ್ ಆಟವನ್ನು ನೋಡಿದಾಗ ಅನಿಸಿದ್ದುಂಟು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ರಮೀಜ್ ರಾಜಾ ಹೇಳಿದ್ದಾರೆ.

ಟೀಮ್ ಇಂಡಿಯಾದ ಗೋಡೆ ಎಂದು ಕರೆಸಿಕೊಂಡಿದ್ದ ರಾಹುಲ್ ದ್ರಾವಿಡ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರೆಂದರೆ ಬೌಲರ್‌ಗಳಿಗೆ ಆತನನ್ನು ಔಟ್ ಮಾಡುವವರೆಗೆ ಕಠಿಣ ಸಮಯವೆಂದೇ ಅರ್ಥ. ಅದರಲ್ಲೂ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಈಡನ್ ಗಾರ್ಡನ್‌ನಲ್ಲಿನ ಪ್ರದರ್ಶನ ಸದಾ ಸ್ಮರಣೀಯ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ಆಟಗಾರರ ಸಂಪೂರ್ಣ ಪಟ್ಟಿ

ದ್ರಾವಿಡ್ ವೃತ್ತಿ ಜೀವನ ಸ್ಮರಿಸಿದ ರಾಜಾ

ದ್ರಾವಿಡ್ ವೃತ್ತಿ ಜೀವನ ಸ್ಮರಿಸಿದ ರಾಜಾ

ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ರಮೀಜ್ ರಾಜಾ ಅವರು ರಾಹುಲ್ ದ್ರಾವಿಡ್ ಅವರ ವೃತ್ತಿಜೀವನವನ್ನು ನೆನಪಿಸಿಕೊಂಡರು. ತಮ್ಮ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ಶ್ರೇಷ್ಠ ಆಟಗಾರ ಇದ್ದಾಗಲೂ ತಮ್ಮ ಹೆಸರು ಶಾಶ್ವತವಾಗುಳಿಯುವಂತಾ ಪ್ರದರ್ಶನವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಸಚಿನ್‌ಗೆ ಸರಿಸಮನಾಗಿ ಪ್ರದರ್ಶನ ನೀಡಿದ್ದರು

ಸಚಿನ್‌ಗೆ ಸರಿಸಮನಾಗಿ ಪ್ರದರ್ಶನ ನೀಡಿದ್ದರು

ಬಹುಶಃ ಸಚಿನ್ ತೆಂಡೂಲ್ಕರ್ ರೀತಿ ಕ್ರಿಕೆಟ್ ರಾಹುಲ್ ದ್ರಾವಿಡ್‌ಗೆ ಉಡುಗೊತೆಯಾಗಿ ಬಂದಿರಲಿಲ್ಲ. ಆದರೆ ಶ್ರೇಷ್ಠ ಆಟಗಾರನ ಸರಿ ಸಮನಾಗಿ ಪ್ರದರ್ಶನ ನೀಡುತ್ತಾ ಉಳಿದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ಪೋರ್ಟ್ಸ್‌ಕೀಡಾ ಜೊತೆಗೆ ಮಾತನಾಡಿದ ರಮೀಜ್ ರಾಜಾ ಹೇಳಿಕೆಯನ್ನು ನೀಡಿದ್ದಾರೆ.

ದ್ರಾವಿಡ್ ಯಾಕೆ ಸಚಿನ್‌ಗಿಂತ ಶ್ರೇಷ್ಠ?

ದ್ರಾವಿಡ್ ಯಾಕೆ ಸಚಿನ್‌ಗಿಂತ ಶ್ರೇಷ್ಠ?

ರಾಹುಲ್ ಕಠಿಣ ಪಿಚ್‌ಗಳಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದರು. ಯಾಕೆಂದರೆ ಅವರ ರಕ್ಷಣಾತ್ಮಕ ಆಟ ಅಷ್ಟು ಬಲಿಷ್ಠವಾಗಿತ್ತು. ಹೀಗಾಗಿ ಕೆಲವೊಂದು ಬಾರಿ ಆವರು ಸಚಿನ್‌ ತೆಂಡೂಲ್ಕರ್ ಅವರನ್ನೂ ಮೀರಿಸಿದ ಆಟಗಾರ ಎನಿಸಿದ್ದಾರೆ ಎಂದು ರಮೀಜ್ ರಾಜಾ ದ್ರಾವಿಡ್ ಕುರಿತಾಗಿ ಪ್ರಶಂಸೆಯ ಮಾತುಗಳನ್ನಾಡಿದರು.

ಕಠಿಣ ಸಂದರ್ಭದಲ್ಲಿ ನೀಡುವ ಕೊಡುಗೆಯೇ ಶ್ರೇಷ್ಠ

ಕಠಿಣ ಸಂದರ್ಭದಲ್ಲಿ ನೀಡುವ ಕೊಡುಗೆಯೇ ಶ್ರೇಷ್ಠ

ರಾಹುಲ್ ದ್ರಾವಿಡ್ ಅವರನ್ನು ಯಾವಾಗಲೂ ಗೌರವಿಸಬೇಕು. ಆಟಗಾರನ ಶ್ರೇಷ್ಠತೆ ಡ್ರೆಸ್ಸಿಂಗ್ ರೂಮ್‌ನಲ್ಲಿ ನಿರ್ಣಯಿಸಲಾಗುತ್ತದೆ. ಕಠಿಣ ಪರಿಸ್ಥಿತಿಯಲ್ಲಿ ಅವರ 30 ಅಥವಾ 50 ರನ್‌ಗಳ ಕೊಡುಗೆ ಬಹಳ ಶ್ರೇಷ್ಠವೆನಿಸುತ್ತದೆ ಎಂದು ರಮೀಜ್ ರಾಜಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, August 6, 2020, 15:37 [IST]
Other articles published on Aug 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X