ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ನಲ್ಲಿ ಗಂಗೂಲಿಗಿಂತಲೂ ದ್ರಾವಿಡ್ ಬೀರಿದ ಪರಿಣಾಮ ದೊಡ್ಡದು: ಗಂಭೀರ್

Rahul Dravid Had Much Bigger Impact In Indian Cricket Than Sourav Ganguly: Gautam Gambhir

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ತಮ್ಮ ಹೇಳಿಕೆಗಳಿಂದ ಸುದ್ದಿಯಾಗಿತ್ತಲೇ ಇದ್ದಾರೆ. ಈಗ ಮತ್ತೊಂದು ಪ್ರಮೂಕ ಹೇಳಿಕೆಯನ್ನು ಗಂಭೀರ್ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಗಂಗೂಲಿ ನೀಡಿದ ಕೊಡುಗೆಗಿಂತಲೂ ರಾಹುಲ್ ದ್ರಾವಿಡ್ ಕೊಡಗೆ ಶ್ರೇಷ್ಠ ಎಂದು ಹೇಳಿದ್ದಾರೆ.

ನಾನು ಏಕದಿನ ಕ್ರಿಕೆಟ್‌ಗೆ ಸೌರವ್‌ ಗಂಗೂಲಿ ನಾಯಕತ್ವದ ಸಂದರ್ಭದಲ್ಲಿ ಪದಾರ್ಪಣೆ ಮಾಡಿದ್ದೆ. ದ್ರಾವಿಡ್‌ ನಾಯಕತ್ವದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟೆ. ದ್ರಾವಿಡ್ ಓರ್ವ ಶ್ರೇಷ್ಠ ನಾಯಕರಾಗಿದ್ದರು. ಆದರೆ ಅವರನ್ನು ನಾವು ಗಣನೆಗೆ ತೆಗೆದುಕೊಳ್ಳದೆ ಕೇವಲ ಸೌರವ್, ಧೋನಿ ಮತ್ತು ಈಗ ವಿರಾಟ್ ಕೊಹ್ಲಿ ಬಗ್ಗೆಯೇ ಮಾತನಾಡುತ್ತೇವೆ ಎಂದು ಗಂಭೀರ್ ಹೇಳಿದರು.

ಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತುಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತು

ರಾಹುಲ್ ದ್ರಾವಿಡ್ ಅವರ ದಾಖಲೆಗಳನ್ನು ನೋಡಿದರೆ ಬಹುಶಃ ಅವರೋರ್ವ ಅಂಡರ್‌ರೇಟೆಡ್ ಕ್ರಿಕೆಟರ್‌ ಮತ್ತು ಅಂಡರ್‌ರೇಟೆಟ್ ನಾಯಕನೂ ಆಗಿದ್ದಾರೆ. ನಾಯಕನಾಗಿ ರಾಹುಲ್ ದ್ರಾವಿಡ್ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

ಅವರ ದಾಖಲೆಗಳೂ ಸಹ, ಅವರು ಬಹುಶಃ ಹೆಚ್ಚು ಅಂಡರ್ರೇಟೆಡ್ ಕ್ರಿಕೆಟಿಗ ಮತ್ತು ಬಹುಶಃ ಹೆಚ್ಚು ಅಂಡರ್ರೇಟೆಡ್ ನಾಯಕ. ನಾವು ಇಂಗ್ಲೆಂಡ್‌ ವಿರುದ್ಧ ಅವರದ್ದೇ ನೆಲದಲ್ಲಿ ಗೆದ್ದಿದ್ದೇವೆ, ವೆಸ್ಟ್ ಇಂಡೀಸ್‌ ತಂಡವನ್ನೂ ಮಣಿಸಿದ್ದೇವೆ. ನಾವು 14 ಅಥವಾ 15 ಪಂದ್ಯಗಳನ್ನು ಗೆದ್ದಿದ್ದೇವೆ ಎಂದು ದ್ರಾವಿಡ್ ನಾಯಕತ್ವದ ಬಗ್ಗೆ ಗಂಭೀರ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಕ್ರಿಕೆಟ್ ಪುನರಾರಂಭದ ಪರಿಸ್ಥಿತಿಯಲ್ಲಿ ನಾವಿನ್ನೂ ಇಲ್ಲ: ರಾಹುಲ್ ದ್ರಾವಿಡ್ಕ್ರಿಕೆಟ್ ಪುನರಾರಂಭದ ಪರಿಸ್ಥಿತಿಯಲ್ಲಿ ನಾವಿನ್ನೂ ಇಲ್ಲ: ರಾಹುಲ್ ದ್ರಾವಿಡ್

ಓರ್ವ ಆಟಗಾರನಾಗಿ ದ್ರಾವಿಡ್ ಆಟವನ್ನು ನೋಡಿದರೆ, ಅವರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸುವಂತೆ ಕೇಳಿದಾಗ ಅದನ್ನು ಮಾಡಿದರು, ವಿಕೆಟ್‌ ಕೀಪಿಂಗ್ ಮಾಡಿದರು, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಫಿನಷರ್‌ ಆಗಿಯೂ ಕರ್ತವ್ಯ ನಿರ್ವಹಸಿದರು. ಟೀಮ್ ಇಂಡಿಯಾಗೆ ಎಲ್ಲಾ ರೀತಿಯ ಕೊಡುಗೆಯ್ನೂ ಸಲ್ಲಿಸಿದ್ದಾರೆ. ನಾಯಕ ಆದೇಶವನ್ನು ಪಾಲಿಸುವ ಆಟಗಾರರ ಅಗತ್ಯ ಇಂದಿನ ಕ್ರಿಕೆಟ್‌ಗೆ ಬೇಕಿರುವುದು ಎಂದು ಗಂಭೀರ್ ಹೇಳಿದ್ದಾರೆ.

Story first published: Monday, June 22, 2020, 17:19 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X