ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಹಾಲ್ ಆಫ್ ಫೇಮ್‌ಗೆ ರಾಹುಲ್ ದ್ರಾವಿಡ್

ಐಸಿಸಿ ಹಾಲ್ ಆಫ್ ಫೇಮ್‌ಗೆ ರಾಹುಲ್ ದ್ರಾವಿಡ್ | Oneindia Kannada

ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಅರ್ಹರಾದ ಕ್ರಿಕೆಟಿಗರ ಪಟ್ಟಿ ಪ್ರಕಟಿಸಲಾಗಿದ್ದು, ರಾಹುಲ್ ದ್ರಾವಿಡ್ ಅವರ ಜತೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು 2009ರ ಐಸಿಸಿ ಮಹಿಳಾ ಕ್ರಿಕೆಟರ್ ಪುರಸ್ಕಾರಕ್ಕೆ ಪಾತ್ರರಾಗಿದ್ದ ಇಂಗ್ಲೆಂಡ್‌ನ ಕ್ಲೇರ್ ಟೇಲರ್ ಅವರೂ ಈ ಗೌರವ ಪಡೆದುಕೊಂಡಿದ್ದಾರೆ.

ಡಬ್ಲಿನ್‌ನಲ್ಲಿ ಭಾನುವಾರ ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಈ ಮೂವರೂ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಹಾಲ್ ಆಫ್ ಫೇಮ್ ಗೌರವ ಪಡೆದುಕೊಳ್ಳಲಿದ್ದಾರೆ.

'ಐಸಿಸಿ ಹಾಲ್ ಆಫ್ ಫೇಮ್ ನಮ್ಮ ಆಟದ ಶ್ರೇಷ್ಠರನ್ನು ಗೌರವಿಸುವ ಪರಿಪಾಠವಾಗಿದೆ' ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.

ಕ್ರಿಕೆಟ್ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಿದ ಅತ್ಯಂತ ಶ್ರೇಷ್ಠ ಆಟಗಾರರನ್ನು ಮಾತ್ರ ಈ ಗೌರವಕ್ಕೆ ಪರಿಗಣಿಸಲಾಗುತ್ತದೆ. ಹಾಲ್ ಆಫ್ ಫೇಮ್‌ನ ಕ್ರಿಕೆಟ್ ಸುಪ್ರಸಿದ್ಧರ ಪಟ್ಟಿಯಲ್ಲಿ ಸೇರ್ಪಡೆಯಾದ ಅದ್ಭುತ ಆಟಗಾರರಾದ ರಾಹುಲ್, ರಿಕ್ಕಿ ಮತ್ತು ಕ್ಲೇರ್ ಅವರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ದಿ ವಾಲ್ ಈಸ್ ಇನ್ ದಿ ಹಾಲ್

ಟೆಸ್ಟ್ ಹಾಗೂ ಏಕದಿನ ಎರಡರಲ್ಲಿಯೂ 10,000ಕ್ಕೂ ಅಧಿಕ ರನ್ ಗಳಿಸಿದ ಏಳು ಮಂದಿ ಆಟಗಾರರಲ್ಲಿ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಸಚಿನ್ ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರ ಕೂಡ.

ಐಸಿಸಿ 2004ರಲ್ಲಿ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ನೀಡಲು ಆರಂಭಿಸಿದಾಗ ಮೊದಲ ಗೌರವ ಒಲಿದಿದ್ದು ರಾಹುಲ್ ದ್ರಾವಿಡ್‌ಗೆ. ಆ ವರ್ಷ ಅದ್ಭುತ ಪ್ರದರ್ಶನ ನೀಡಿದ್ದ ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್, ಮುತ್ತಯ್ಯ ಮುರಳೀಧರನ್ ಮತ್ತು ಆಂಡ್ರೂ ಫ್ಲಿಂಟಾಫ್ ಅವರನ್ನು ಹಿಂದಿಕ್ಕಿ ದ್ರಾವಿಡ್ ಈ ಪ್ರಶಸ್ತಿ ಪಡೆದುಕೊಂಡಿದ್ದರು.

164 ಪಂದ್ಯಗಳಲ್ಲಿ 210 ಕ್ಯಾಚ್ ಹಿಡಿದಿರುವ ರಾಹುಲ್ ದ್ರಾವಿಡ್, ಟೆಸ್ಟ್‌ನಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು- 31,258 ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ದ್ರಾವಿಡ್, ಹಾಲ್ ಆಫ್ ಫೇಮ್‌ನಲ್ಲಿ ಹೆಸರು ಅಚ್ಚೊತ್ತಿಸಿಕೊಳ್ಳುತ್ತಿರುವ ಭಾರತ ಐದನೇ ಆಟಗಾರ ಆಗಿದ್ದಾರೆ.

ರಾಹುಲ್ ದ್ರಾವಿಡ್ ಅವರ ಹಾಲ್ ಆಫ್ ಫೇಮ್ ಸೇರ್ಪಡೆಯನ್ನು ಐಸಿಸಿ, 'ದಿ ವಾಲ್ ಈಸ್ ಇನ್ ದಿ ಹಾಲ್' ಎಂದು ಕರೆದಿದೆ.

ಶ್ರೇಷ್ಠ ನಾಯಕ ಪಾಂಟಿಂಗ್

ಶ್ರೇಷ್ಠ ನಾಯಕ ಪಾಂಟಿಂಗ್

ಸಚಿನ್ ತೆಂಡೂಲ್ಕರ್ ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿರುವ ಎರಡನೆಯ ಆಟಗಾರ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್.

ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಅವರ ನಂತರದ ಮೂರನೇ ಅಧಿಕ ಸ್ಕೋರರ್ ಎನಿಸಿಕೊಂಡಿದ್ದಾರೆ.

1999ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಪಾಂಟಿಂಗ್ 2003 ಮತ್ತು 2017ರಲ್ಲಿ ನಾಯಕರಾಗಿ ವಿಶ್ವಕಪ್‌ ಎತ್ತಿ ಹಿಡಿದಿದ್ದರು. 2006, 2007ರಲ್ಲಿ ಸತತ ಎರಡು ವರ್ಷ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದರು. ಪಾಂಟಿಂಗ್, ಹಾಲ್ ಆಫ್ ಫೇಮ್‌ಗೆ ಸೇರಿಕೊಳ್ಳುತ್ತಿರುವ ಆಸ್ಟ್ರೇಲಿಯಾದ 25ನೇ ಆಟಗಾರನಾಗಿದ್ದಾರೆ.

ಏಳನೇ ಆಟಗಾರ್ತಿ

ಏಳನೇ ಆಟಗಾರ್ತಿ

ಕ್ಲೇರ್ ಟೇಲರ್ ಹಾಲ್ ಆಫ್ ಫೇಮ್ ಕೀರ್ತಿಗೆ ಭಾಜನರಾಗುತ್ತಿರುವ ವಿಶ್ವದ ಏಳನೇ ಮಹಿಳಾ ಕ್ರಿಕೆಟ್‌ಪಟು. ಇಂಗ್ಲೆಂಡ್‌ನ ಮೂರನೇ ಆಟಗಾರ್ತಿ.

ಮಹಿಳಾ ಕ್ರಿಕೆಟ್ ಟೆಸ್ಟ್‌ನಲ್ಲಿ 1,000 ರನ್ ಮತ್ತು ಏಕದಿನದಲ್ಲಿ 4,000ಕ್ಕೂ ಅಧಿಕ ರನ್ ಗಳಿಸಿ ಕೇವಲ ನಾಲ್ವರು ಆಟಗಾರ್ತಿಯರಲ್ಲಿ ಕ್ಲೇರ್ ಟೇಲರ್ ಒಬ್ಬರು.

2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ವಿಶ್ವಕಪ್ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವ ಟಿ20 ಟೂರ್ನಿಗಳಲ್ಲಿ ಚಾಂಪಿಯನ್ ಆದ ಇಂಗ್ಲೆಂಡ್ ತಂಡದಲ್ಲಿ ಶ್ರೇಷ್ಠ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಅದೇ ವರ್ಷ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಮಹಾನ್ ಗೌರವ- ದ್ರಾವಿಡ್

ಮಹಾನ್ ಗೌರವ- ದ್ರಾವಿಡ್

ಐಸಿಸಿಯು ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಆಯ್ಕೆ ಮಾಡಿರುವುದು ಮಹಾನ್ ಗೌರವ. ಹಲವು ಪೀಳಿಗೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಜತೆ ಹೆಸರು ಕಾಣಿಸುವುದು ಕೆಲವರು ಕನಸು ಮಾತ್ರ ಆಗಿರುತ್ತದೆ. ಕ್ರಿಕೆಟ್ ವೃತ್ತಿ ಬದುಕನ್ನು ಕಟ್ಟಿಕೊಂಡು ಈ ರೀತಿಯ ಪರಿಗಣನೆ ದೊರಕುವುದು ಯಾವ ಆಟಗಾರನಿಗಾದರೂ ಖುಷಿ ನೀಡುತ್ತದೆ ಎಂದು ದ್ರಾವಿಡ್ ಹೇಳಿದ್ದಾರೆ.

ಬಹುದೊಡ್ಡ ಗೌರವ

ಐಸಿಸಿ ಈ ರೀತಿ ಗುರುತಿಸುತ್ತಿರುವುದು ಬಹುದೊಡ್ಡ ಗೌರವವನ್ನು ನೀಡಿದಂತೆ ಅನಿಸುತ್ತಿದೆ. ಆಟಗಾರನಾಗಿ ನನ್ನ ಪಯಣದ ಪ್ರತಿ ಕ್ಷಣವನ್ನೂ ಪ್ರೀತಿಸಿದ್ದೆ. ನನಗೆ ನನ್ನ ತಂಡದ ಬಗ್ಗೆ ಅಪಾರ ಹೆಮ್ಮೆಯಿದೆ. ಜತೆಗೆ ವೈಯಕ್ತಿಕ ಸಾಧನೆಗಳು ಕುರಿತೂ ಸಹ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಸರ್ವಶ್ರೇಷ್ಠರ ಜತೆಯಲ್ಲಿ...

ನನ್ನ ಕ್ರೀಡಾ ಬದುಕಿನಲ್ಲಿ ಬೆಳೆಯುವಾಗ ನೋಡಿದ ಆಟಗಾರರು, ವಿವಿಧ ತಲೆಮಾರುಗಳ ಪುರುಷ ಮತ್ತು ಮಹಿಳಾ ಶ್ರೇಷ್ಠ ಆಟಗಾರರ ಹೆಸರಿನ ನಡುವೆ ನನ್ನ ಹೆಸರನ್ನೂ ಇರಿಸುತ್ತಿರುವುದು ಮಹಾನ್ ಗೌರವವಾಗಿದೆ ಎಂದು ಕ್ಲೇರ್ ಟೇಲರ್ ತಿಳಿಸಿದ್ದಾರೆ.

ಎರಡನೆಯ ಕನ್ನಡಿಗ

ಎರಡನೆಯ ಕನ್ನಡಿಗ

ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಹೆಮ್ಮೆಗೆ ರಾಹುಲ್ ದ್ರಾವಿಡ್ ಭಾಜನರಾಗಿದ್ದಾರೆ. ಜತೆಗೆ ಕರ್ನಾಟಕದ ಎರಡನೆಯ ಆಟಗಾರನೂ ಹೌದು.

ಹಾಲ್ ಆಫ್ ಫೇಮ್ ಯೋಜನೆ ಆರಂಭಿಸಿದ 2009ರಲ್ಲಿ ಮುನ್ನ ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು. 2015ರಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆ ಮಾಡಲಾಗಿತ್ತು. ವಿಶೇಷವೆಂದರೆ ಟೆಸ್ಟ್ ಹಾಗೂ ಏಕದಿನ ಎರಡರಲ್ಲಿಯೂ ಅತ್ಯಧಿಕ ರನ್ ಗಳಿಸಿರುವ ಹಾಗೂ ಅತಿ ಹೆಚ್ಚು ಶತಕದ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಇನ್ನೂ ಇದರಲ್ಲಿ ಸ್ಥಾನ ಪಡೆದಿಲ್ಲ.

Story first published: Monday, July 2, 2018, 12:16 [IST]
Other articles published on Jul 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X