ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಬಗ್ಗೆ ದ್ರಾವಿಡ್, ಕುಂಬ್ಳೆ ಮಾತುಗಳು

ಬೆಂಗಳೂರು, ಡಿಸೆಂಬರ್ 24: ಮಾಜಿ ಭಾರತೀಯ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರ ಕ್ರಿಕೆಟ್ ನ ಕುತೂಹಲಕರ ಪ್ರಯಾಣದ ಬಗ್ಗೆ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, "ಲಕ್ಷ್ಮಣ್ 19 ವರ್ಷ ವಯಸ್ಸಿನ ಒಳಗಿನ ತಂಡದಲ್ಲಿ ಅಡಲು ಬಂದಿದ್ದಾಗಲೇ ಖ್ಯಾತಿ ಪಡೆದಿದ್ದರು.

ನನಗೆ ಅವರ ಆಟವನ್ನು ವೀಕ್ಷಿಸಲು ಅವಕಾಶ ದೊರೆಯುತ್ತಿದ್ದುದು ಅದ್ಭುತ ಅನುಭವವಾಗಿದೆ. ಅವರ ಬ್ಯಾಂಟಿಗ್ ವೀಕ್ಷಿಸಿದ ನಾನು ಧನ್ಯ ಹಾಗೂ ಅದೃಷ್ಟಶಾಲಿ. ಅಜರುದ್ದೀನ್ ನಂತರ ಹೈದರಾಬಾದ್ ನ ಅತಿ ದೊಡ್ಡ ಕೊಡುಗೆಯೆಂದರೆ ಅದು ವಿವಿಎಸ್ ಲಕ್ಷ್ಮಣರ ಶಿಸ್ತಿನ ಆಟ ನನಗೆ ಸ್ಪೂರ್ತಿಯಾಗಿತ್ತು" ಎಂದಿದ್ದಾರೆ.

ಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣಕನ್ನಡ ನೆಲ, ಕನ್ನಡ ಪ್ರತಿಭೆಗಳ ಸಮ್ಮುಖದಲ್ಲಿ ಲಕ್ಷ್ಮಣ್ ಕೃತಿ ಅನಾವರಣ

ದ್ರಾವಿಡ್ ಜೊತೆ ಈಡನ್ ಗಾರ್ಡನ್ ನಲ್ಲಿ ಆಡಿದ ದಿನವನ್ನು ನೆನಪಿಸಿಕೊಂಡ ವಿವಿಎಸ್ ಲಕ್ಷ್ಮಣ್ ಹೀಗೆಂದರು, "ನಾವು 274 ರನ್ ಗಳಿಂದ ಹಿಂದಿದ್ದೆವು ಮತ್ತು ಏನಾಗಲಿದೆ ಎಂಬುದರ ಕುರಿತು ಯೋಚಿಸುವ ಅವಕಾಶವೇ ಇರಲಿಲ್ಲ. ವಾಸ್ತವವಾಗಿ ಭೀಕರ ಎನಿಸುವಂತಹ ಪರಿಸ್ಥಿತಿಯಲ್ಲಿ ನಾವಿದ್ದೆವು. ನಾವು ಅದನ್ನು ಸಣ್ಣ ಗುರಿಗಳಾಗಿ ಬದಲಾಯಿಸಿಕೊಂಡೆವು. ಪ್ರತಿಯೊಬ್ಬರೂ ಪ್ರತಿಯೊಂದು ಬಾಲ್ ಅನ್ನೂ ಯೋಚಿಸಿ ಆಡಿದೆವು ಮತ್ತು ಸಾಧ್ಯವಾದಷ್ಟು ಮುಂದಿನ ಓವರ್ ಆಡುವ ವ್ಯಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದೆವು" ಎಂದರು.

ಗೆಲ್ಲುವ ಭರವಸೆ ಹುಟ್ಟಿಸಿದ ದ್ರಾವಿಡ್- ಲಕ್ಷ್ಮಣ್

ಗೆಲ್ಲುವ ಭರವಸೆ ಹುಟ್ಟಿಸಿದ ದ್ರಾವಿಡ್- ಲಕ್ಷ್ಮಣ್

ವಿವಿಎಸ್ ಲಕ್ಷ್ಮಣ್ ಮತ್ತು ದ್ರಾವಿಡ್ ಅವರ ಅತ್ಯುತ್ತಮ ಪಾಲುದಾರಿಕೆಯನ್ನು ಎತ್ತಿ ತೋರಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, "ನಾನು ಕೊಲ್ಕತ್ತಾ 281 ಪಂದ್ಯವನ್ನು ನಾನು ವೀಕ್ಷಿಸಲಿಲ್ಲ. ಆದರೆ ಅಡಿಲೇಡ್ ನಲ್ಲಿ ನನ್ನ ತಲೆಯಲ್ಲಿ ಮತ್ತೆ ಬರುತ್ತಿದ್ದ ಒಂದು ವಿಷಯವೆಂದರೆ ಕೊಲ್ಕತ್ತಾದಲ್ಲಿ ದ್ರಾವಿಡ್ ಮತ್ತು ಲಕ್ಷ್ಮಣ್ ರ ಪಾಲುದಾರಿಕೆಯ ಆಟದ ಭರವಸೆ. ಅವರು 300 ರನ್ ಗಳಿಸಿದ ಅಡಿಲೇಡ್ ಪರೀಕ್ಷೆಯನ್ನು ವೀಕ್ಷಿಸಲು ನಾನು ಅದೃಷ್ಟಶಾಲಿಯಾಗಿದ್ದೆ ಮತ್ತು ಆ ಸಮಯದಲ್ಲಿ ನಾವು ಟೆಸ್ಟ್ ಪಂದ್ಯವನ್ನು ಗೆಲ್ಲುವುದಾಗಿ ಭರವಸೆ ಪಡೆದೆ" ಎಂದರು.

ಲಕ್ಷ್ಮಣ್ ಕಲಾತ್ಮಕ ಆಟಕ್ಕೆ ಮನಸೋಲದವರಿಲ್ಲ

ಲಕ್ಷ್ಮಣ್ ಕಲಾತ್ಮಕ ಆಟಕ್ಕೆ ಮನಸೋಲದವರಿಲ್ಲ

ಯಾವುದೇ ಶೈಲಿಯ ಬೌಲಿಂಗ್ ವಿರುದ್ಧ ರನ್ ಮಾಡುತ್ತಿದ್ದ ಸೊಗಸಾದ ಆಟಗಾರ, ವಿವಿಎಸ್ ಲಕ್ಷ್ಮಣ್ ಅವರು ನೂರು ಟೆಸ್ಟ್ ಗಳಲ್ಲಿ ಆಡಿ 8000 ರನ್ ಗಳಿಸಿದರು. ಅವರ ಆತ್ಮಚರಿತ್ರೆಯಲ್ಲಿ, ಹೈದರಾಬಾದ್ ಪರ ಆಡಿದ ತಮ್ಮ ಕ್ರಿಕೆಟ್ ಜೀವನದ ಆರಂಭದ ದಿನಗಳ ಬಗ್ಗೆ ಬರೆಯುತ್ತಾರೆ. ತಂಡದ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಮೊಹಮ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರೊಂದಿಗೆ ಅವರ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ ಮತ್ತು ಈಡನ್ ಗಾರ್ಡನ್ ಮೈದಾನದೊಂದಿಗೆ ವಿಶೇಷ ಸಂಬಂಧವನ್ನೂ ಹೊಂದಿದ್ದಾರೆ.

ಲಕ್ಷ್ಮಣ್ ಬಗ್ಗೆ ಜಾವಗಲ್ ಶ್ರೀನಾಥ್

ಲಕ್ಷ್ಮಣ್ ಬಗ್ಗೆ ಜಾವಗಲ್ ಶ್ರೀನಾಥ್

ವಿವಿಎಸ್ ಲಕ್ಷ್ಮಣ್ ಅವರ ಕ್ರೀಡಾಸ್ಪೂರ್ತಿಯ ಬಗ್ಗೆ ಪ್ರಶಂಶಿಸಿದ, ಮಾಜಿ ಕ್ರಿಕೆಟಿಗ ಮತ್ತು ಪ್ರಸಕ್ತ ಐಸಿಸಿ ಮ್ಯಾಚ್ ರೆಫ್ರಿ, ಜಾವಗಲ್ ಶ್ರೀನಾಥ್, "ಲಕ್ಷ್ಮಣ್ ರೊಂದಿಗೆ ನನ್ನ ಮೊದಲ ಟೆಸ್ಟ್ ಪಂದ್ಯವು ಅದ್ಭುತವಾಗಿತ್ತು. ಪಂದ್ಯದ ಉದ್ದಕ್ಕೂ ಅವರ ವಿಶ್ವಾಸವನ್ನು ನಾನು ನೋಡುತ್ತಿದೆ. ಮತ್ತು ಅವರು ನಮಗೆ ಕೆಲವು ಪ್ರಮುಖ ರನ್ ಗಳನ್ನು ಗಳಿಸಿ ಕೊಟ್ಟರು. ಲಕ್ಷ್ಮಣ್ ಅವರಿಗೆ ಕ್ರಿಕೆಟ್ ಮೇಲಿದ್ದ ಭರವಸೆಯನ್ನು ನಾವೆಲ್ಲರೂ ನೋಡಿದ್ದೇವೆ" ಎಂದರು.

ದಿಟ್ಟತನದಿಂದ ಕೂಡಿರುವ ಲಕ್ಷ್ಮಣ್ ಆತ್ಮ ಚರಿತ್ರೆ

ದಿಟ್ಟತನದಿಂದ ಕೂಡಿರುವ ಲಕ್ಷ್ಮಣ್ ಆತ್ಮ ಚರಿತ್ರೆ

ಆತ್ಮಚರಿತ್ರೆ ದಿಟ್ಟತನದಿಂದ ಕೂಡಿದ್ದು ಆಳವಾದ ಒಳನೋಟಗಳನ್ನು ಹೊಂದಿದೆ. ಲಕ್ಷ್ಮಣ್ ಡ್ರೆಸ್ಸಿಂಗ್-ರೂಮ್ ಹಾಸ್ಯಗಳನ್ನು ಹಾಗು ಷಾಂಪೇನ್ ಸಂಜೆಗಳ ರೋಮಾಂಚನಗಳನ್ನು ರಸವತ್ತಾಗಿ ಬರೆದಿದ್ದಾರೆ. ವಿಶ್ವದ ಅತ್ಯುತ್ತಮ ತಂಡಗಳೆದುರು ಆಟವಾಡುತ್ತಿರುವ ಇದ್ದ ಸಂತೋಷ, ವೈವಿಧ್ಯಮಯ ಬ್ಯಾಟಿಂಗ್ ಶೈಲಿ, ಬದಲಾವಣೆಗಳು, ವಿವಿಧ ಪಿಚ್ ಗಳ ಸ್ವರೂಪ, ಜಾನ್ ರೈಟ್ ಮತ್ತು ಗ್ರೆಗ್ ಚಾಪೆಲ್ ರ ಜೊತೆ ಕಲಿತ ವಿಷಯಗಳ ಬಗ್ಗೆ ಬರೆದಿದ್ದಾರೆ.

ಭಾರತದೆಲ್ಲೆಡೆ ಲಕ್ಷ್ಮಣ್ ಪುಸ್ತಕ ಲಭ್ಯ

ಭಾರತದೆಲ್ಲೆಡೆ ಲಕ್ಷ್ಮಣ್ ಪುಸ್ತಕ ಲಭ್ಯ

ಮಾಜಿ ಭಾರತೀಯ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಅವರ ಬಹುನಿರೀಕ್ಷಿತ ‘281 ಆಂಡ್ ಬಿಯಾಂಡ್ ' ಕೃತಿ ಬೆಂಗಳೂರಿನ ಮೈನ್ ಲಾನ್ಸ್, ತಾಜ್ ವೆಸ್ಟ್ ಎಂಡ್ ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಪಾಲ್ಗೊಂಡಿದ್ದರು.

ವೆಸ್ಟ್ಲ್ಯಾಂಡ್ ಪಬ್ಲಿಕೇಶನ್ಸ್ ಪ್ರೈವೇಟ್ ಲಿ. ಪುಸ್ತಕವನ್ನು ಪ್ರಕಟಿಸಿದ್ದು ತಮ್ಮ ಹೊಸ ಇಂಪ್ರಿಂಟ್ ಮುದ್ರೆ ವೆಸ್ಟ್ಲ್ಯಾಂಡ್ ಸ್ಪೋರ್ಟ್ ಅಡಿಯಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಿದೆ. '281 ಆಂಡ್ ಬಿಯಾಂಡ್' ಕೃತಿ ಈಗ ಅಮೆಜಾನ್ ಇಂಡಿಯಾದಲ್ಲಿ ಮತ್ತು ಭಾರತದಾದ್ಯಂತ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

Story first published: Monday, December 24, 2018, 16:04 [IST]
Other articles published on Dec 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X