ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್?

Rahul Dravid Likely to be Interim Coach of Indian Team against New Zealand

ನವದೆಹಲಿ: ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಮಧ್ಯಂತರ ಕೋಚ್ ಆಗಿ ತಂಡದ ಜೊತೆಗಿರುವ ನಿರೀಕ್ಷೆಯಿದೆ. ಭಾರತದಲ್ಲಿ ನಡೆಯಲಿರುವ ಸರಣಿಗಾಗಿ ನ್ಯೂಜಿಲೆಂಡ್‌ ಕ್ರಿಕೆಟ್ ತಂಡ ಪ್ರವಾಸ ಬರಲಿದೆ. ಈ ವೇಳೆ ದ್ರಾವಿಡ್ ತಂಡದ ಕೋಚ್ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ.

 ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ 2021: ಕೆಟ್ಟ ದಾಖಲೆ ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್

ಈ ವರ್ಷ ಶ್ರೀಲಂಕಾಕ್ಕೆ ಟೀಮ್ ಇಂಡಿಯಾ ಪ್ರವಾಸ ಹೋಗಿದ್ದಾಗ ತಂಡದ ಕೋಚ್ ಜವಾಬ್ದಾರಿ ರಾಹುಲ್ ದ್ರಾವಿಡ್ ಹೆಗಲ ಮೇಲಿತ್ತು. ಆಗ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಮತ್ತೊಂದು ಭಾರತ ತಂಡದ ಜೊತೆ ತೆರಳಿದ್ದರಿಂದ ಅದೇ ಸಮಯಕ್ಕೆ ಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡವನ್ನು ದ್ರಾವಿಡ್ ಮುನ್ನಡೆಸಿದ್ದರು.

ಮುಂಬರಲಿರುವ ಟಿ20 ವಿಶ್ವಕಪ್‌ ಬಳಿಕ ಈಗ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಒಪ್ಪಂದದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಹೊಸ ಕೋಚ್ ಆಯ್ಕೆ ನಡೆಯುವ ಮುನ್ನ ಭಾರತಕ್ಕೆ ನ್ಯೂಜಿಲೆಂಡ್ ತಂಡ ಪ್ರವಾಸ ಬರುವುದರಿಂದ ಆಗ ಭಾರತ ತಂಡದ ಕೋಚ್ ಜವಾಬ್ದಾರಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿರುವ ದ್ರಾವಿಡ್ ಹೊರಲಿದ್ದಾರೆ ಎನ್ನಲಾಗುತ್ತಿದೆ.

ಈತನಂತಾ ಆಟಗಾರನನ್ನು ನನ್ನ ತಂಡದಲ್ಲಿ ಇಟ್ಟುಕೊಳ್ಳಲ್ಲ: ಭಾರತದ ಸ್ಟಾರ್ ಕ್ರಿಕೆಟಿಗನ ಬಗ್ಗೆ ಮಂಜ್ರೇಜರ್ ಹೇಳಿಕೆಈತನಂತಾ ಆಟಗಾರನನ್ನು ನನ್ನ ತಂಡದಲ್ಲಿ ಇಟ್ಟುಕೊಳ್ಳಲ್ಲ: ಭಾರತದ ಸ್ಟಾರ್ ಕ್ರಿಕೆಟಿಗನ ಬಗ್ಗೆ ಮಂಜ್ರೇಜರ್ ಹೇಳಿಕೆ

ಅಕ್ಟೋಬರ್‌ 17ರಿಂದ ನವೆಂಬರ್ 14ರ ವರೆಗೆ ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ನಡೆಯಲಿದೆ. ಆ ಬಳಿಕ ಅಂದರೆ ನವೆಂಬರ್ 17ರಿಂದ ಭಾರತ-ನ್ಯೂಜಿಲೆಂಡ್ ಸರಣಿ ಆರಂಭವಾಗಲಿದೆ. ಭಾರತಕ್ಕೆ ಪ್ರವಾಸ ಬರುವ ಕಿವೀಸ್ ಇಲ್ಲಿ 3 ಟಿ20ಐ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ.

Story first published: Thursday, October 14, 2021, 20:38 [IST]
Other articles published on Oct 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X