ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎನ್‌ಸಿಎ ಕ್ರಿಕೆಟ್ ಮುಖ್ಯಸ್ಥರ ಹುದ್ದೆಗೆ ರಾಹುಲ್ ದ್ರಾವಿಡ್ ಒಬ್ಬರೇ ಅಭ್ಯರ್ಥಿ!

Rahul Dravid only candidate to apply for NCAs Head of Cricket post

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಕ್ರಿಕೆಟ್ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರಾಗಿದ್ದವರು. ಆದರೆ ಸ್ಥಾನಕ್ಕೆ ಮತ್ತೆ ಅರ್ಜಿ ಕರೆಯಲಾಗಿದ್ದರಿಂದ ದ್ರಾವಿಡ್ ಮರು ಅರ್ಜಿ ಸಲ್ಲಿಸಿದ್ದರು.

ಎಎಫ್‌ಸಿ ಕಪ್‌: ಬೆಂಗಳೂರು ಮಣಿಸಿದ ಎಟಿಕೆ ಮೋಹನ್ ಬಗಾನ್ಎಎಫ್‌ಸಿ ಕಪ್‌: ಬೆಂಗಳೂರು ಮಣಿಸಿದ ಎಟಿಕೆ ಮೋಹನ್ ಬಗಾನ್

ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ ಎಂದು ಈ ಮೊದಲು ಹೇಳಲಾಗಿತ್ತು. ಟಿ20 ವಿಶ್ವಕಪ್‌ ಬಳಿಕ ಈಗ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಒಪ್ಪಂದ ಕೊನೆಗೊಳ್ಳುವುದರಿಂದ ಅವರ ಜಾಗಕ್ಕೆ ದ್ರಾವಿಡ್ ಬರುತ್ತಾರೆ ಎಂದು ಭಾವಿಸಲಾಗಿತ್ತು.

ಆದರೆ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸಿರುವುದರಿಂದ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲಿದ್ದಾರೆ ಎಂಬ ಗಾಳಿ ಸುದ್ದಿಗೆ ತೆರೆ ಬಿದ್ದಿದೆ. ವಿಶೇಷವೆಂದರೆ ಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಏಕಮಾತ್ರ ವ್ಯಕ್ತಿ ದ್ರಾವಿಡ್. ಹೀಗಾಗಿ ದ್ರಾವಿಡ್ ಮತ್ತೆ ಎನ್‌ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ.

U-20 World Athletics Championships: 4x400 ಮೀ. ಮಿಕ್ಸ್ಡ್ ರಿಲೇಯಲ್ಲಿ ಭಾರತಕ್ಕೆ ಕಂಚುU-20 World Athletics Championships: 4x400 ಮೀ. ಮಿಕ್ಸ್ಡ್ ರಿಲೇಯಲ್ಲಿ ಭಾರತಕ್ಕೆ ಕಂಚು

IPL ನಲ್ಲಿ ಕಪ್ ನಮ್ದೇ ಅಂದ್ರು T20 ವರ್ಲ್ಡ್ ಕಪ್ ನಮ್ಮದಾಗಲ್ಲ!! | Oneindia kannada

"ಹೌದು ಕ್ರಿಕೆಟ್‌ನ ಹೆಡ್‌ ಆಗಿ ದ್ರಾವಿಡ್ ಮರು ಅರ್ಜಿ ಸಲ್ಲಿದ್ದಾರೆ. ಹೀಗಾಗಿ ಮತ್ತೆ ಅವರೇ ಎನ್‌ಸಿಯೆ ಮುಖ್ಯಸ್ಥರಾಗಿ ಮುಂದುವರೆಯಲಿದ್ದಾರೆ ಅನ್ನೋದಕ್ಕೆ ನೀವೇನೂ ದೊಡ್ಡ ಬುಧ್ಧಿವಂತರಾಗಿರಬೇಕಿಲ್ಲ. ಎನ್‌ಸಿಎಯಲ್ಲಿ ಅದ್ಭುತ ಬದಲಾವಣೆಗಳಿಗೆ ಕಾರಣರಾಗಿರುವುದರಿಂದ ದ್ರಾವಿಡ್ ಮತ್ತೆ ಮುಂದುವರೆಯಲಿದ್ದಾರೆ," ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

Story first published: Thursday, August 19, 2021, 10:07 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X