ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವ ಕ್ರಿಕೆಟಿಗರ ಮಾನಸಿಕ ಸಮಸ್ಯೆಗೆ ವೃತ್ತಿಪರರಿಂದ ಪರಿಹಾರ: ದ್ರಾವಿಡ್

Rahul Dravid Puts Focus On Mental Health In Uncertain Times

ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರ ಮಾನಸಿಕ ಸಮಸ್ಯೆಗಳ ಬಗ್ಗೆ ಗಮನಹರಿಸಿರುವುದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ. ವೃತ್ತಿಪರರ ಸಹಾಯದ ಅಂತಾ ಸಮಸ್ಯೆಗಳಿದ್ದ ಆಟಗಾರರಿಗೆ ಪರಿಹಾರವನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.

'ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗರು ಎದುರಿಸುತ್ತಿರುವ ಮಾನಸಿಕ ತೊಂದರೆಗಳನ್ನು ನಿಭಾಯಿಸುವ ಪರಿಣತಿ ನಮಗಿಲ್ಲವೆಂದು ಒಬ್ಬ ಮಾಜಿ ಕ್ರಿಕೆಟಿಗ ಹಾಗೂ ತರಬೇತುದಾರನಾಗಿ ಒಪ್ಪಿಕೊಳ್ಳುತ್ತೇನೆ. ಆ ಕಾರಣ, ವೃತ್ತಿಪರರನ್ನು ಸಂಪರ್ಕಿಸಲು ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟ್‌ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಇದೇ ವರ್ಷ ಐಪಿಎಲ್ ನಡೆಯುತ್ತೆ ಅಂತಿದ್ದಾರೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆಇದೇ ವರ್ಷ ಐಪಿಎಲ್ ನಡೆಯುತ್ತೆ ಅಂತಿದ್ದಾರೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ

ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವುದು ಈ ಹಿಂದೆ ಕಳಂಕವೆಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಇಂದು ಒತ್ತಡದ ವಾತಾವರಣವಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಲಾಕ್‌ಡೌನ್‌ ಸಮಯವು ಕ್ರಿಕೆಟಿಗರಿಗೆ ಅನಿಶ್ಚಿತತೆಯ ಅವಧಿಯಾಗಿದ್ದು, ಅವರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಗುತ್ತಿಗೆ ರಹಿತ ಮತ್ತು 19 ವರ್ಷದೊಳಗಿನ ಕ್ರಿಕೆಟಿಗರಿಗೆ ಮಾನಸಿಕ ಆರೋಗ್ಯ ತರಬೇತಿ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದರು.

ರಣಜಿ ಟೂರ್ನಿ ಮಾದರಿ ಬದಲಾವಣೆ ಸುದ್ದಿಯನ್ನು ತಳ್ಳಿಹಾಕಿದ ಬಿಸಿಸಿಐರಣಜಿ ಟೂರ್ನಿ ಮಾದರಿ ಬದಲಾವಣೆ ಸುದ್ದಿಯನ್ನು ತಳ್ಳಿಹಾಕಿದ ಬಿಸಿಸಿಐ

ಇದೇ ವೇಳೆ ಕ್ರಿಕೆಟ್ ಮತ್ತು ಯುವ ಕ್ರಿಕೆಟಿಗರ ಮನಃಸ್ಥಿತಿ ಕುರಿತು ದ್ರಾವಿಡ್ ಮಾತನಾಡಿದರು. ಈಗಿನ ಯುವ ಕ್ರಿಕೆಟಿಗರು ಭಾರತ ತಂಡಕ್ಕೆ ಆಯ್ಕೆಯಾಗಲೇಬೇಕು ಎಂದು ತಮಗೆ ತಾವೇ ಒತ್ತಡವನ್ನು ಹಾಕಿಕೊಳ್ಳುತ್ತಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಕಾಯುವಿಕೆಯ ಒತ್ತಡವನ್ನು ನಿಭಾಯಿಸಲು ಅವರು ವಿಫಲರಾಗುತ್ತಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.

Story first published: Thursday, May 28, 2020, 16:06 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X