ಟಿ20 ವಿಶ್ವಕಪ್‌ಗೂ ಮುನ್ನ ರಾಹುಲ್ ದ್ರಾವಿಡ್ ಮುಂದಿದೆ ಬೃಹತ್ ಸವಾಲು

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ದೊಡ್ಡ ಸವಾಲು ಕಾದಿದೆ. ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 2-2ರಿಂದ ಸಮಬಲ ಸಾಧಿಸಿ ಪೂರ್ಣಗೊಳಿಸಿದ್ದು, ಮುಂದಿನ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದೆ. ಒಂದು ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಮತ್ತೊಂದು ತಂಡ ಐರ್ಲೆಂಡ್ ಪ್ರವಾಸದಲ್ಲಿದೆ.

ಆದ್ರೆ ಇದೇ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸರಣಿ ನಡೆಯಲಿದೆ. ಆದರೆ ರಾಹುಲ್ ದ್ರಾವಿಡ್ ಅವರ ತರಬೇತಿಯಲ್ಲಿ ದೊಡ್ಡ ನ್ಯೂನತೆ ಉಳಿದಿದೆ. ಅದೇನಂದ್ರೆ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ತಂಡ ವಿದೇಶಿ ನೆಲದಲ್ಲಿ ಒಂದೇ ಒಂದು ಸರಣಿಯನ್ನು ಗೆದ್ದಿಲ್ಲ.

ಐಲೆಂಡ್ ಪ್ರವಾಸ: ಸಂಜು ಸ್ಯಾಮ್ಸನ್‌ಗೆ ಇದೇ ಕೊನೆಯ ಅವಕಾಶ? ಮಿಂಚಲೇಬೇಕಾದ ಅನಿವಾರ್ಯತೆಐಲೆಂಡ್ ಪ್ರವಾಸ: ಸಂಜು ಸ್ಯಾಮ್ಸನ್‌ಗೆ ಇದೇ ಕೊನೆಯ ಅವಕಾಶ? ಮಿಂಚಲೇಬೇಕಾದ ಅನಿವಾರ್ಯತೆ

ತವರು ನೆಲದಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾವನ್ನು ಟೀಂ ಇಂಡಿಯಾ ವೈಟ್ ವಾಶ್ ಮಾಡಿದೆ. ಆದರೆ SENA ದೇಶಗಳ ಸರಣಿಯನ್ನು ಸಹ ಇನ್ನೂ ಗೆದ್ದಿಲ್ಲ. ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾಗ ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು. ರಾಹುಲ್ ದ್ರಾವಿಡ್ ಕಳೆದ 8 ತಿಂಗಳಲ್ಲಿ 6 ನಾಯಕರ ಜೊತೆ ಕೆಲಸ ಮಾಡಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಈ ಸ್ಥಾನದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು, ದ್ರಾವಿಡ್ ಮುಂದೆ ದೊಡ್ಡ ಸವಾಲುಗಳಿವೆ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳ ಜೊತೆಗೆ ಏಷ್ಯಾ ಕಪ್ ಸರಣಿ ಮುಂದಿದೆ. ಅದು ಯಶಸ್ವಿಯಾದರೆ, ರಾಹುಲ್ ದ್ರಾವಿಡ್ ಹಿರಿಯರ ತಂಡದಲ್ಲೂ ಯಶಸ್ವಿ ಕೋಚ್ ಆಗಿ ಮಿಂಚಬಹುದು. ಜೊತೆಗೆ ವಿದೇಶದಲ್ಲಿ ಗೆದ್ದಿಲ್ಲ ಎಂಬ ಟೀಕೆಗೆ ಉತ್ತರ ಕೊಡಬಹುದು.

ಟೆಸ್ಟ್ ಸರಣಿ ರೋಹಿತ್ ಪಾಲಿಗೆ ದೊಡ್ಡ ಸವಾಲು | *Cricket | OneIndia Kannada

ರಾಹುಲ್ ದ್ರಾವಿಡ್ ಪದಗ್ರಹಣದ ನಂತರ ಭಾರತ ತಂಡ ಆಡಿದ ಪಂದ್ಯಗಳ ಫಲಿತಾಂಶವನ್ನು ನೋಡುವುದಾದ್ರೆ, ಇದುವರೆಗೆ 7 ಟೆಸ್ಟ್‌ ಪಂದ್ಯಗಳಲ್ಲಿ ಗಳಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತಿದೆ.
ಏಕದಿನ ಕ್ರಿಕೆಟ್‌ನಲ್ಲಿ 9 ಪಂದ್ಯಗಳನ್ನು ಆಡಿದ್ದು, 8 ಗೆಲುವು ಮತ್ತು 1 ಸೋಲು ಕಂಡಿದೆ. ಟಿ20 ಕ್ರಿಕೆಟ್‌ನಲ್ಲಿ 14 ಪಂದ್ಯಗಳಲ್ಲಿ 11 ಗೆಲುವು ಮತ್ತು 2 ಸೋಲು ಕಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Monday, June 20, 2022, 23:41 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X