ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2 ತಿಂಗಳೊಳಗೆ 2ನೇ ದ್ವಿಶತಕ ಬಾರಿಸಿದ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್

Rahul Dravid’s son Samit scores 2nd double century in less than two months

ಬೆಂಗಳೂರು, ಫೆಬ್ರವರಿ 18: ಭಾರತದ ಕ್ರಿಕೆಟ್‌ ದಿಗ್ಗಜ, ಕರ್ನಾಟಕದ ಹೆಮ್ಮೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕಡಿಮೆ ಅವಧಿಯಲ್ಲೇ ಎರಡನೇ ದ್ವಿಶತಕ ಬಾರಿಸಿದ್ದಾರೆ. ಅಂಡರ್ 19 ಬಿಟಿಆರ್ ಶೀಲ್ಡ್‌ ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್ ಪರ, ಶ್ರೀ ಕುಮಾರನ್ ವಿರುದ್ಧದ ಪಂದ್ಯದಲ್ಲಿ ಸಮಿತ್ ಡಬಲ್ ಸೆಂಚುರಿ ಬಾರಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಕೊನೆ ಸುತ್ತಿನಲ್ಲಿ ಉಳಿದ ಅಭ್ಯರ್ಥಿಗಳ್ಯಾರು?ಬಿಸಿಸಿಐ ಆಯ್ಕೆ ಸಮಿತಿ ಕೊನೆ ಸುತ್ತಿನಲ್ಲಿ ಉಳಿದ ಅಭ್ಯರ್ಥಿಗಳ್ಯಾರು?

ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿರು ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಇದು ಎರಡು ತಿಂಗಳೊಳಗೆ ಎರಡನೇ ದ್ವಿಶತಕ ಬಾರಿಸಿದಂತಾಗಿದೆ. ಪಂದ್ಯದಲ್ಲಿ ಸಮಿತ್ ಒಟ್ಟು 33 ಬೌಂಡರಿಗಳನ್ನು ಚಚ್ಚಿ ತಂಡಕ್ಕೆ 204 ರನ್‌ಗಳ ಕೊಡುಗೆಯಿತ್ತಿದ್ದರು.

ಸೇಂಟ್ ಲೂಸಿಯಾ ಫ್ರಾಂಚೈಸಿ ಸ್ವಾಧೀನಕ್ಕೆ ಮುಂದಾದ ಕಿಂಗ್ಸ್‌ XI ಪಂಜಾಬ್ಸೇಂಟ್ ಲೂಸಿಯಾ ಫ್ರಾಂಚೈಸಿ ಸ್ವಾಧೀನಕ್ಕೆ ಮುಂದಾದ ಕಿಂಗ್ಸ್‌ XI ಪಂಜಾಬ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್‌ ತಂಡ, ಸಮಿತ್ ದ್ರಾವಿಡ್ ದ್ವಿಶತಕದೊಂದಿಗೆ 50 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ ಭರ್ಜರಿ 377 ರನ್ ಕಲೆ ಹಾಕಿದರೆ, ಶ್ರೀ ಕುಮಾರನ್ ಚಿಲ್ಡ್ರನ್ಸ್ ಅಕಾಡೆಮಿ ತಂಡ, 32.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 110 ಬಾರಿಸಿ 267 ರನ್‌ನಿಂದ ಹಿನ್ನಡೆ ಅನುಭವಿಸಿತು.

ICC T20I ranking: ನಂ.1 ಸ್ಥಾನಿ ಅಝಮ್ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್!ICC T20I ranking: ನಂ.1 ಸ್ಥಾನಿ ಅಝಮ್ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್!

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಅಂಡರ್ 14 ರಾಜ್ಯಮಟ್ಟದ ಪಂದ್ಯದ ವೇಳೆಯೂ ಸಮಿತ್ ದ್ವಿಶತಕ ಬಾರಿಸಿದ್ದರು. 14ರ ಹರೆಯದ ಸಮಿತ್, ಕೋಲ್ಕತ್ತಾದಲ್ಲಿ ನಡೆದಿದ್ದ ಅಂಡರ್ 14 ಇಂಟರ್ ಝೋನಲ್ ಟೂರ್ನಿಯಲ್ಲಿ ವೈಸ್ ಪ್ರೆಸಿಡೆಂಟ್ಸ್‌ XI ಪರ ಧಾರವಾಡ್‌ ಝೋನ್‌ವಿರುದ್ಧ ಕೂಡ 201 ರನ್ ಗಳಿಸಿದ್ದರು.

Story first published: Tuesday, February 18, 2020, 16:47 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X