ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂದೆಯ ಹಾದಿಯಲ್ಲೇ ಸಾಗಿದ ದ್ರಾವಿಡ್ ಪುತ್ರ ಸಮಿತ್; ದ್ವಿಶತಕ ಸಿಡಿಸಿದ 14ರ ಪೋರ

ತಂದೆಯ ಹಾದಿಯಲ್ಲೆ ನಡೆಯುತ್ತಿದ್ದಾರೆ ದ್ರಾವಿಡ್ ಪುತ್ರ | DRAVID | ONEINDIA KANNADA
Rahul Dravid’s son Samit scores double ton in U14 cricket

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ದಂತಕತೆ. ಟೀಮ್ ಇಂಡಿಯಾ ಪಾಲಿಗೆ ಅಕ್ಷರಶಃ ಗೋಡೆಯೇ ಆಗಿದ್ದ ರಾಹುಲ್ ಎರಡು ದಶಕ ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿದ್ದರು. ಇದೀಗ ರಾಹುಲ್ ದ್ರಾವಿಡ್ ಬಳಿಕ ಇದೀಗ ದ್ರಾವಿಡ್ ಪುತ್ರನೂ ಕೂಡ ತಂದೆಯ ಹಾದಿಯಲ್ಲೇ ಸಾಗುವ ಮುನ್ಸೂಚನೆ ನೀಡಿದ್ದಾರೆ.

ಇದಕ್ಕೆ ಕಾರಣ ದ್ರಾವಿಡ್ ಪುತ್ರನ ಬ್ಯಾಟಿಂಗ್ ಪರಾಕ್ರಮ. ರಾಜ್ಯ ಮಟ್ಟದ ಅಂತರ್‌ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಸಿಡಿಸಿದ್ದು ಬರೊಬ್ಬರಿ 201 ರನ್‌ಗಳನ್ನು.256 ಎಸೆತಗಳಲ್ಲಿ ಸಮಿತ್ ಈ ಸಾಧನೆಯನ್ನು ಮಾಡಿದ್ದಾರೆ. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 22 ಬೌಂಡರಿಗಳು ಇದ್ದವು.

22 ವರ್ಷ ಹಿಂದಿನ ಜಯಸೂರ್ಯ ದಾಖಲೆ ಮುರಿಯಲು ರೋಹಿತ್ ಶರ್ಮಾ 9 ರನ್ನಷ್ಟೇ ಹಿಂದೆ!22 ವರ್ಷ ಹಿಂದಿನ ಜಯಸೂರ್ಯ ದಾಖಲೆ ಮುರಿಯಲು ರೋಹಿತ್ ಶರ್ಮಾ 9 ರನ್ನಷ್ಟೇ ಹಿಂದೆ!

ದ್ರಾವಿಡ್ ಪುತ್ರ ಸಮಿತ್ ಈ ಸಾಧನೆಯನ್ನು ಮಾಡಿದ್ದು ಕೆಎಸ್‌ಸಿಎ ಯ ಅಂಡರ್14 ಅಂತರ್ ವಲಯ ಕ್ರೀಡಾಕೂಟದಲ್ಲಿ. ವೈಸ್‌ ಪ್ರೆಸಿಡೆಂಟ್ XI ಮತ್ತು ಧಾರವಾಡ ವಲಯ ತಂಡಗಳು ಹಣಾಹಣಿಯನ್ನು ನಡೆಸಿತ್ತು. ಸಮಿತ್ ವೈಸ್‌ ಪ್ರೆಸಿಡೆಂಟ್ XI ತಂಡವನ್ನು ಪ್ರತಿನಿಧಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಸಮಿತ್ 94ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಜೊತೆಗೆ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲೂ ಮಿಂಚಿದ ಸಮಿತ್ 26 ರನ್ ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ.

ಸಮಿತ್ ಈ ಹಿಂದೆಯೂ ಇದೇ ರೀತಿ ಭರ್ಜರಿ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ. 2018ರಲ್ಲಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ ಪರವಾಗಿ ಆಡಿದ್ದ ಸಮಿತ್ 125 ರನ್ ಸಿಡಿಸಿದ್ದರು.

ಐಪಿಎಲ್ ಸುತ್ತಿಕೊಂಡ 6 ಪ್ರಮುಖ ವಿವಾದಗಳು, ನಿಷೇಧಗಳುಐಪಿಎಲ್ ಸುತ್ತಿಕೊಂಡ 6 ಪ್ರಮುಖ ವಿವಾದಗಳು, ನಿಷೇಧಗಳು

ಟೀಮ್ ಇಂಡಿಯಾದ ಅಂಡರ್ 19 ತಂಡಕ್ಕೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ. ಟೀಮ್ ಇಂಡಿಯಾ ಪರವಾಗಿ 164 ಟೆಸ್ಟ್ ಪಂದ್ಯವನ್ನಾಡಿರುವ ದ್ರಾವಿಡ್ ಟೆಸ್ಟ್‌ನಲ್ಲಿ 13288 ರನ್ ಗಳಿಸಿದ್ದಾರೆ. 2012ರಲ್ಲಿ ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ.

Story first published: Friday, December 20, 2019, 20:37 [IST]
Other articles published on Dec 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X