ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ದ್ರಾವಿಡ್ ಸರ್ ಯಾವತ್ತಿಗೂ ನನ್ನ ಸ್ವಾಭಾವಿಕ ಆಟ ನಿಗ್ರಹಿಸಲು ಹೇಳಿಲ್ಲ'

Rahul Dravid sir never asked me to curb my natural game, says Prithvi Shaw

ನವದೆಹಲಿ: ನಿನ್ನ ನೈಸರ್ಗಿಕ ಶೈಲಿಯ, ಆಕ್ರಮಣಕಾರಿ ಬ್ಯಾಟಿಂಗ್‌ ಅನ್ನು ಮುಂದುವರೆಸು. ನನ್ನ ಶೈಲಿಯನ್ನು ಕಾಪಿ ಮಾಡಬೇಕಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾಗೆ ಹೇಳಿದ್ದರಂತೆ. ಹೀಗೆಂದು ಸ್ವತಃ ಪೃಥ್ವಿ ಹೇಳಿಕೊಂಡಿದ್ದಾರೆ.

ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!ವಾಸಿಮ್ ಜಾಫರ್ ಈ ತಮಾಷೆಯ ಮೀಮ್‌ ಹಿಂದೆ ಗಂಭೀರ ಕತೆಯಿದೆ!

'ಆ ಕ್ಷಣಗಳು ಅದ್ಭುತವಾಗಿತ್ತು. ನಾವು 2018ರ ಅಂಡರ್ 19 ವಿಶ್ವಕಪ್‌ಗೂ ಮುನ್ನ ರಾಹುಲ್ ದ್ರಾವಿಡ್ ಸರ್ ಜೊತೆ 2 ವರ್ಷ ಪ್ರವಾಸ ಹೋಗಿದ್ದೆವು. ಅವರಿಗೆ ಗೊತ್ತಿತ್ತು, ನಾವೆಲ್ಲಾ ಅವರಿಗಿಂತ ಭಿನ್ನವಾಗಿದ್ದೆವು ಎಂದು. ಆದರೆ ಅವರು ಯಾವತ್ತಿಗೂ ನಾವು ಅವರಂತಿರಬೇಕು ಎಂದು ಒತ್ತಾಯಿಸಿದವರಲ್ಲ,' ಎಂದು ಕ್ರಿಕ್‌ಬಝ್‌ನಲ್ಲಿ ದ್ರಾವಿಡ್ ಬಗ್ಗೆ ಮಾತನಾಡಿದ ಶಾ ಹೇಳಿದ್ದಾರೆ.

'ಆಟದಲ್ಲಿ ಮನೋಧರ್ಮ ತುಂಬಾ ಮುಖ್ಯವಾಗಿರುತ್ತದೆ. ಆದರೆ ದ್ರಾವಿಡ್ ಯಾವತ್ತಿಗೂ ನನ್ನಲ್ಲಿ ಯಾವುದನ್ನೂ ಬದಲಾಯಿಸಲು ಹೇಳಲಿಲ್ಲ. ಅವರು ಯಾವಾಗಲೂ ನನ್ನಲ್ಲಿ ನನ್ನ ಸ್ವಾಭಾವಿಕ ಆಟ ಆಡಲು ಹೇಳುತ್ತಿದ್ದರು. ಯಾಕೆಂದರೆ ಅವರಿಗೆ ಗೊತ್ತಿತ್ತು ನಾನೊಂದು ವೇಳೆ ಪವರ್‌ಪ್ಲೇ ಓವರ್‌ಗಳನ್ನು ಆಡಿದರೆ ಮತ್ತೆ ನನ್ನನ್ನು ಔಟ್ ಮಾಡೋದು ಕಷ್ಟ ಎಂದು,'ಎಂದು ಪೃಥ್ವಿ ತಿಳಿಸಿದ್ದಾರೆ.

ಐಪಿಎಲ್ 2021ರ ಪಂದ್ಯಗಳು ಯುಎಇಗೆ ಸ್ಥಳಾಂತರ, ಆರಂಭದ ದಿನಾಂಕ ಪ್ರಕಟ!ಐಪಿಎಲ್ 2021ರ ಪಂದ್ಯಗಳು ಯುಎಇಗೆ ಸ್ಥಳಾಂತರ, ಆರಂಭದ ದಿನಾಂಕ ಪ್ರಕಟ!

2018ರಲ್ಲಿ ಭಾರತ ಅಂಡರ್-19 ತಂಡಕ್ಕೆ ರಾಹುಲ್ ಮುಖ್ಯ ಕೋಚ್ ಆಗಿದ್ದರು. ಈ ತಂಡ ವಿಶ್ವಕಪ್‌ ಜಯಿಸಿತ್ತು. ಆವತ್ತು ಪೃಥ್ವಿ ತಂಡ ಮುನ್ನಡೆಸಿದ್ದರು. ಭಾರತೀಯ ಯುವ ಆಟಗಾರರು ಈಗ ಟೀಮ್ ಇಂಡಿಯಾದಲ್ಲಿ ಮಿನುಗಲು ದ್ರಾವಿಡ್ ಕಾರಣ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಪೃಥ್ವಿ ಪ್ರತಿಕ್ರಿಯಿಸಿದ್ದಾರೆ.

Story first published: Wednesday, May 26, 2021, 0:28 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X