ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್

Rahul Dravid supports for T20 cricket in Olympics

ಬೆಂಗಳೂರು: ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಟಿ20 ಕ್ರಿಕೆಟ್ ಸೇರಿಸಬೇಕು ಎನ್ನುವ ಯೋಚನೆಗೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬೆಂಬಲ ಸೂಚಿಸಿದ್ದಾರೆ. ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆಯಾದರೆ ಅದು ಬಹಳಷ್ಟು ದೇಶಗಳ ಪಾಲಿಗೆ ಮತ್ತು ಕ್ರಿಕೆಟ್ ಪಾಲಿಗೆ ಹೆಮ್ಮೆಯ ವಿಚಾರ ಅನ್ನಿಸಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ತಮಾಷೆಯ ಪೋಸ್ಟ್‌ನಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡ ಶ್ರೇಯಸ್ತಮಾಷೆಯ ಪೋಸ್ಟ್‌ನಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡ ಶ್ರೇಯಸ್

ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್‌ ಅನ್ನು ಸೇರಿಸುವ ಬಗ್ಗೆ 2018ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸಮೀಕ್ಷೆ ನಡೆಸಿತ್ತು. ಆಗ ಸುಮಾರು 87 ಶೇ. ಜನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸಬೇಕು ಎಂದು ಹೇಳಿದ್ದರು. ಆದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ.

ವಿಶ್ವದ ಅತೀ ದೊಡ್ಡ ಮತ್ತು ಅತೀ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಬಿಸಿಸಿಐ ಒಲಿಂಪಿಕ್ಸ್‌ಗೆ ತಂಡವನ್ನು ಕಳುಹಿಸಿರಲಿಲ್ಲ. 2010 ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲೂ ಕ್ರಿಕೆಟ್‌ ಭಾಗವಾಗಿತ್ತು. ಅಂದೂ ಕೂಡ ಬಿಸಿಸಿಐ ಗೇಮ್ಸ್‌ಗೆ ತಂಡ ಕಳುಹಿಸಲು ನಿರಾಸಕ್ತಿ ತೋರಿತ್ತು.

ಐಪಿಎಲ್: ಪ್ರಮುಖ 5 ಫ್ಲಾಫ್ ಶೋವರ್‌ಗಳ ಹೆಸರಿಸಿ ಟೀಕಿಸಿದ ಸೆಹ್ವಾಗ್!ಐಪಿಎಲ್: ಪ್ರಮುಖ 5 ಫ್ಲಾಫ್ ಶೋವರ್‌ಗಳ ಹೆಸರಿಸಿ ಟೀಕಿಸಿದ ಸೆಹ್ವಾಗ್!

'ಟಿ20 ಕ್ರಿಕೆಟ್ ಮಾದರಿ ಒಲಿಂಪಿಕ್ಸ್‌ನ ಭಾಗವಾದರೆ ಕ್ರಿಕೆಟ್‌ಗೆ ಅದೊಂದು ದೊಡ್ಡ ಹೆಮ್ಮೆ ಅನ್ನಿಸಲಿದೆ ಎಂದು ನನಗನ್ನಿಸುತ್ತದೆ. ಯಾಕೆಂದರೆ ಸುಮಾರು 75 ಟಿ20 ರಾಷ್ಟ್ರಗಳಿವೆ. ಹೀಗಾಗಿ ಬಹಳಷ್ಟು ದೇಶಗಳಲ್ಲಿ ಕ್ರಿಕೆಟ್ ನಡೆಯಲಿದೆ,' ಎಂದು ದ್ರಾವಿಡ್ ಹೇಳಿದ್ದಾರೆ. 164 ಟೆಸ್ಟ್ ಪಂದ್ಯಗಳನ್ನಾಡಿರುವ ದ್ರಾವಿಡ್ 13,288 ರನ್ ಗಳಿಸಿದ್ದಾರೆ.

Story first published: Saturday, November 14, 2020, 19:12 [IST]
Other articles published on Nov 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X