ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು

Rahul Dravid talked about working with different captains after appointed as head of Team India

ಕಳೆದ ವರ್ಷ ಯುಎಇ ನೆಲದಲ್ಲಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಆಗಿನ ಕೋಚ್ ಆಗಿದ್ದ ರವಿ ಶಾಸ್ತ್ರಿ ತಮ್ಮ ಅವಧಿ ಮುಗಿದ ಕಾರಣ ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದರು.

ಭಾರತ ಟಿ20 ತಂಡದಲ್ಲಿ ಈ ಸ್ಟಾರ್ ಆಟಗಾರನ ಭವಿಷ್ಯ ಅಂತ್ಯವಾಯಿತು ಎಂದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ಭಾರತ ಟಿ20 ತಂಡದಲ್ಲಿ ಈ ಸ್ಟಾರ್ ಆಟಗಾರನ ಭವಿಷ್ಯ ಅಂತ್ಯವಾಯಿತು ಎಂದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್

ನಂತರ ಬಿಸಿಸಿಐ ಭಾರತದ ಮಾಜಿ ಕ್ರಿಕೆಟಿಗ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆಗಿ ಆಯ್ಕೆ ಮಾಡಿತು. ರಾಹುಲ್ ದ್ರಾವಿಡ್ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡ ನಂತರದ ಕೆಲ ಸಮಯದಲ್ಲಿಯೇ ಟೀಮ್ ಇಂಡಿಯಾದ ನಾಯಕತ್ವದ ಬದಲಾವಣೆ ಕೂಡಾ ಜರುಗಿತು. ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿದು ರೋಹಿತ್ ಶರ್ಮಾ ನೂತನ ನಾಯಕನಾಗಿ ಆಯ್ಕೆಗೊಂಡರು. ಮೊದಲಿಗೆ ಸೀಮಿತ ಓವರ್‌ಗಳ ತಂಡಗಳಿಗೆ ನಾಯಕನಾಗಿದ್ದ ರೋಹಿತ್ ನಂತರ ಎಲ್ಲಾ ಮಾದರಿಯ ತಂಡಗಳಿಗೂ ನಾಯಕನಾಗಿ ನೇಮಕಗೊಂಡರು.

ಚೆಂಡು ಸ್ಟೇಡಿಯಂ ದಾಟಬೇಕಿಲ್ಲ, ಬೌಂಡರಿ ಗೆರೆ ದಾಟಿದರೆ ಸಾಕು: ಭಾರತೀಯ ಆಟಗಾರನ ಆಟಕ್ಕೆ ಪಾರ್ಥಿವ್ ಕಿಡಿಚೆಂಡು ಸ್ಟೇಡಿಯಂ ದಾಟಬೇಕಿಲ್ಲ, ಬೌಂಡರಿ ಗೆರೆ ದಾಟಿದರೆ ಸಾಕು: ಭಾರತೀಯ ಆಟಗಾರನ ಆಟಕ್ಕೆ ಪಾರ್ಥಿವ್ ಕಿಡಿ

ಹೀಗೆ ರಾಹುಲ್ ದ್ರಾವಿಡ್ ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕರಾಗಿದ್ದ ತಂಡಗಳಿಗೆ ಕೋಚ್ ಆಗಿ ಕೆಲಸ ನಿರ್ವಹಿಸಿದರು ಹಾಗೂ ತದನಂತರ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ನಾಯಕರಾದರು, ಶ್ರೀಲಂಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ನಾಯಕರಾದರು, ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕೆಎಲ್ ರಾಹುಲ್ ಅಲಭ್ಯರಾಗಿದ್ದ ಕಾರಣ ರಿಷಭ್ ಪಂತ್ ನಾಯಕನಾಗಿ ತಂಡವನ್ನು ಮುನ್ನಡೆಸಿದರು ಹಾಗೂ ಮುಂಬರುವ ಐರ್ಲೆಂಡ್ ಸರಣಿಗೆ ಇದೀಗ ಹಾರ್ದಿಕ್ ಪಾಂಡ್ಯ ನಾಯಕನಾಗಿ ನೇಮಕಗೊಂಡಿದ್ದಾರೆ. ಹೀಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕಗೊಂಡ ನಂತರ ಟೀಮ್ ಇಂಡಿಯಾವನ್ನು ವಿವಿಧ ಸರಣಿಗಳಲ್ಲಿ ಒಟ್ಟು 6 ನಾಯಕರು ಮುನ್ನಡೆಸಿದ್ದು, ಈ ಕುರಿತಾಗಿ ರಾಹುಲ್ ದ್ರಾವಿಡ್ ಕೆಳಕಂಡಂತೆ ಮಾತನಾಡಿದ್ದಾರೆ..

ಕೋಚ್ ಆದಾಗ ಇದು ಯೋಜನೆಯಲ್ಲಿರಲಿಲ್ಲ

ಕೋಚ್ ಆದಾಗ ಇದು ಯೋಜನೆಯಲ್ಲಿರಲಿಲ್ಲ

ಕಳೆದ 8 ತಿಂಗಳುಗಳಲ್ಲಿ ಒಟ್ಟು 6 ವಿವಿಧ ನಾಯಕರ ಜತೆ ಕೆಲಸ ಮಾಡಿರುವುದರ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ ಆ ಅನುಭವ ರೋಮಾಂಚಕಾರಿಯಾಗಿತ್ತು ಹಾಗೂ ಅದರ ಜತೆಗೆ ಸವಾಲಿನಿಂದಲೂ ಕೂಡಿತ್ತು ಎಂದಿದ್ದಾರೆ. ತಾನು ಹೆಡ್ ಕೋಚ್ ಆಗಿ ನೇಮಕಗೊಂಡಾಗ ವಿವಿಧ ನಾಯಕರನ್ನು ಹೊಂದುವುದು ನಮ್ಮ ಯೋಜನೆಯಲ್ಲಿರಲಿಲ್ಲ ಆದರೆ ಕೊರೊನಾ ಪರಿಸ್ಥಿತಿ ಮತ್ತು ಇನ್ನಿತರೆ ಸನ್ನಿವೇಶಗಳಲ್ಲಿ ವಿವಿಧ ನಾಯಕರನ್ನು ಹೊಂದಬೇಕಾಯಿತು ಎಂದು ಹೇಳಿಕೆ ನೀಡಿದ್ದಾರೆ.

ಹೊಸ ನಾಯಕರನ್ನು ಸೃಷ್ಟಿಸಲು ಒಳ್ಳೆಯ ಅವಕಾಶ

ಹೊಸ ನಾಯಕರನ್ನು ಸೃಷ್ಟಿಸಲು ಒಳ್ಳೆಯ ಅವಕಾಶ

ಹಲವು ನಾಯಕರ ಜತೆ ಕೆಲಸ ಮಾಡಿದ್ದು ಸವಾಲಾಗಿತ್ತು ಹಾಗೂ ಸಂತಸವನ್ನೂ ನೀಡಿತು ಎಂದಿರುವ ರಾಹುಲ್ ದ್ರಾವಿಡ್ ಇದರಿಂದ ಹೆಚ್ಚು ನೂತನ ನಾಯಕರನ್ನು ಹುಟ್ಟಿಹಾಕಲು ಅನುಕೂಲವಾಯಿತು ಎಂದೂ ಸಹ ಹೇಳಿಕೆಯನ್ನು ನೀಡಿದ್ದಾರೆ. ಗುಂಪಾಗಿ ನಾವು ಹೊಸ ವಿಷಯಗಳನ್ನು ಅರಿಯುತ್ತಿದ್ದು, ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟು ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

Dineah Karthik ವಯಸ್ಸಿನ ಬಗ್ಗೆ Comment ಮಾಡಿದ Goutam Gambhir ಗೆ ಮುಖಭಂಗ | *Cricket | OneIndia Kannada
ಈ ತಿಂಗಳೇ ಇಬ್ಬರು ನೂತನ ನಾಯಕರ ಸೃಷ್ಟಿ

ಈ ತಿಂಗಳೇ ಇಬ್ಬರು ನೂತನ ನಾಯಕರ ಸೃಷ್ಟಿ

ಈ ಜೂನ್ ತಿಂಗಳಲ್ಲಿಯೇ ಇಬ್ಬರು ನೂತನ ನಾಯಕರ ಸೃಷ್ಟಿ ಟೀಮ್ ಇಂಡಿಯಾದಲ್ಲಿ ಆಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನೂತನ ನಾಯಕನಾಗಿ ರಿಷಭ್ ಪಂತ್ ನೇಮಕಗೊಂಡರೆ, ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ.

Story first published: Tuesday, June 21, 2022, 8:40 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X