ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್: ವರದಿ

Rahul Dravid to Coach India limited over series against Sri Lanka in July: Report
Rahul Dravid ಈಗ ಟೀಮ್ ಇಂಡಿಯಾ ಕೋಚ್ ಆಗುವ ಸಾಧ್ಯತೆ | Oneindia Kannada

ಜುಲೈ ತಿಂಗಳಿನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾಗೆ ಪ್ರವಾಸ ತೆರಳಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ. ಪ್ರಮುಖ ಆಟಗಾರರಿಲ್ಲದ ಏಕದಿನ ಸ್ಪೆಶಲಿಸ್ಟ್ ಆಟಗಾರರನ್ನು ಮಾತ್ರ ಹೊಂದಿರುವ ಈ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆಗಳು ಕಂಡು ಬರುತ್ತಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗಲೇ ಮತ್ತೊಂದು ತಂಡ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳುವ ತೀರ್ಮಾನವನ್ನು ಬಿಸಿಸಿಐ ತೆಗೆದುಕೊಂಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜಸ್‌ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ಅವರಂತಾ ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ಆದರೆ ಈ ಟೆಸ್ಟ್ ಸರಣಿಗೆ ಆಯ್ಕೆಯಾಗದ ಪ್ರಮುಖ ಸೀಮಿತ ಓವರ್‌ಗಳ ಸ್ಪೆಶಲಿಸ್ಟ್‌ಗಳಾದ ಶಿಖರ್ ಧವನ್, ಪೃಥ್ವಿ ಶಾ, ಭುವನೇಶ್ವರ್ ಕುಮಾರ್ ಅವರನ್ನು ಒಳಗೊಂಡ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.

ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!

ಹೊಸ ಕೋಚ್ ಅನಿವಾರ್ಯ

ಹೊಸ ಕೋಚ್ ಅನಿವಾರ್ಯ

ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಶ್ರೀಲಂಕಾ ಪ್ರವಾಸಕ್ಕೆ ಲಭ್ಯವಾಗುವುದಿಲ್ಲ. ಹೀಗಾಗಿ ಕೋಚಿಂಗ್ ವಿಭಾಗವೂ ಕೂಡ ಹೊಸಬರಿಂದಲೇ ಕೂಡಿರಲಿದೆ.

ರಾಹುಲ್ ದ್ರಾವಿಡ್‌ಗೆ ಇದೆ ಅನುಭವ

ರಾಹುಲ್ ದ್ರಾವಿಡ್‌ಗೆ ಇದೆ ಅನುಭವ

ಈ ಜವಾಬ್ಧಾರಿ ರಾಹುಲ್ ದ್ರಾವಿಡ್ ಅವರಿಗೆ ಲಭಿಸುವ ಸಾಧ್ಯತೆಯಿದೆ. ಅಂಡರ್-19 ತಂಡ ಹಾಗೂ ಭಾರತ ಎ ತಂಡಕ್ಕೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ರಾಹುಲ್ ದ್ರಾವಿಡ್ ಈ ಜವಾಬ್ಧಾರಿಗೆ ಹೊಸಬರಲ್ಲ. ಜೊತೆಗೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಬಹುದಾದ ಬಹುತೇಕ ಆಟಗಾರರು ಅಂಡರ್-19 ಅಥವಾ ಭಾರತ ಎ ತಂಡದಲ್ಲಿ ದ್ರಾವಿಡ್ ಅಡಿಯಲ್ಲಿ ಪಳಗಿದವರಾಗಿದ್ದಾರೆ. ಹೀಗಾಗಿ ಈ ಆಟಗಾರರೊಂದಿಗೆ ಹೊಂದಾಣಿಕೆ ಹಾಗೂ ಅವರ ಸಾಮರ್ಥ್ಯದ ಅರಿವು ದ್ರಾವಿಡ್‌ಗೆ ಉತ್ತಮವಾಗಿರಲಿದೆ.

ಶ್ರೀಲಂಕಾ ಪ್ರವಾಸ

ಶ್ರೀಲಂಕಾ ಪ್ರವಾಸ

ಈಗಿನ ವರದಿಯ ಪ್ರಕಾರ ವಿರಾಟ್ ಕೊಹ್ಲಿ ಹೊರತಾದ ಭಾರತ ತಂಡ ಜುಲೈ 5 ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಜುಲೈ 13, 16 ಮತ್ತು 19ರಂದು ಏಕದಿನ ಪಂದ್ಯಗಳನ್ನು ಆಡಿ ನಂತರ ಮೂರು ಪಂದ್ಯಗಳ ಟಿ20 ಸರಣಿ ಜುಲೈ 22, 24 ಹಾಗೂ 27ರಂದು ನಡೆಯುವ ಸಂಭವವಿದೆ.

Story first published: Tuesday, May 11, 2021, 10:22 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X