ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!

Rahul dravid to coach team india on sri lanka tour
Rahul Dravid ಅವರು ಈಗ ಅಧಿಕೃತವಾಗಿ ನಮ್ಮ ಕೋಚ್ | Oneindia Kannada

ಜೂನ್ 18ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದ್ದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೆಣಸಾಡಲಿದೆ ಹಾಗೂ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದೆ. ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಈಗಾಗಲೇ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ.

'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ

ಇದೇ ಸಮಯದಲ್ಲಿ ಜುಲೈ ತಿಂಗಳಿನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 3 ಏಕದಿನ ಮತ್ತು 3 ಟಿ ಟ್ವೆಂಟಿ ಪಂದ್ಯಗಳನ್ನು ಆಯೋಜಿಸಲಾಗಿದ್ದು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಆಟಗಾರರನ್ನು ಬಿಟ್ಟು ಉಳಿದ ಸ್ಟಾರ್ ಆಟಗಾರರ ತಂಡವೊಂದನ್ನು ಕಟ್ಟಿ ಲಂಕಾ ಪ್ರವಾಸಕ್ಕೆ ಕಳುಹಿಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಈ ಪ್ರವಾಸದ ವಿಶೇಷತೆ ಏನೆಂದರೆ ರಾಹುಲ್ ದ್ರಾವಿಡ್ ಮಾರ್ಗದರ್ಶನ. ಹೌದು ರಾಹುಲ್ ದ್ರಾವಿಡ್ ಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡದ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ.

ಭಾರತ - ನ್ಯೂಜಿಲೆಂಡ್‌ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶಭಾರತ - ನ್ಯೂಜಿಲೆಂಡ್‌ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ

ಟೀಮ್ ಇಂಡಿಯಾದ ಕೋಚ್‌ಗಳಾದ ರವಿಶಾಸ್ತ್ರಿ, ಭರತ್ ಅರುಣ್ ಹಾಗೂ ವಿಕ್ರಂ ರಾಥೋರ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಕಾರಣ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಕೋಚ್ ಆಗಿ ತೆರಳಲಿದ್ದಾರೆ. ಈಗಾಗಲೇ ಟೀಮ್ ಇಂಡಿಯಾ ಎ ತಂಡಕ್ಕೆ ಮಾರ್ಗದರ್ಶನವನ್ನು ನೀಡಿರುವ ಅನುಭವವಿರುವ ರಾಹುಲ್ ದ್ರಾವಿಡ್ ಅಂಡರ್- 19 ತಂಡಕ್ಕೂ ಸಹ ಕೋಚಿಂಗ್ ನೀಡಿದ್ದಾರೆ. ಹೀಗಾಗಿ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಯುವ ಆಟಗಾರರಿಗೆ ದ್ರಾವಿಡ್ ಮಾರ್ಗದರ್ಶನದ ಅನುಭವ ಮೊದಲೇ ಇರುವುದರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು. ಅಂಡರ್-19 ತಂಡದಲ್ಲಿ ಈಗಾಗಲೇ ಹಲವಾರು ಯುವಪ್ರತಿಭೆಗಳನ್ನು ತಯಾರಿಸಿರುವ ದ್ರಾವಿಡ್ ಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ತಂಡವನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ.

1. ಜುಲೈ ತಿಂಗಳಿನಲ್ಲಿ ನಡೆಯಲಿವೆ ಸರಣಿಗಳು

1. ಜುಲೈ ತಿಂಗಳಿನಲ್ಲಿ ನಡೆಯಲಿವೆ ಸರಣಿಗಳು

ಭಾರತ ಮತ್ತು ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳು ಜುಲೈ 13, 16 ಹಾಗೂ 19ರಂದು ನಡೆಯಲಿವೆ ಮತ್ತು 3 ಟಿ ಟ್ವೆಂಟಿ ಪಂದ್ಯಗಳು ಜುಲೈ 22, 24 ಹಾಗೂ 27ರಂದು ನಡೆಯಲಿವೆ.

 2. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ಕೋಚ್ ಆಗಿರುವ ದ್ರಾವಿಡ್

2. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯಾಟಿಂಗ್ ಕೋಚ್ ಆಗಿರುವ ದ್ರಾವಿಡ್

ಟೀಮ್ ಇಂಡಿಯಾ ಕೋಚ್ ಆಗಿ ದ್ರಾವಿಡ್ ಕೆಲಸ ನಿರ್ವಹಿಸಲಿರುವುದು ಇದೇ ಮೊದಲೇನಲ್ಲ. 2014ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ರಾಹುಲ್ ದ್ರಾವಿಡ್ ಭಾರತದ ಬ್ಯಾಟಿಂಗ್ ಕೋಚ್ ಆಗಿ ಮಾರ್ಗದರ್ಶನವನ್ನು ನೀಡಿದ್ದರು.

3. ಟೀಮ್ ಇಂಡಿಯಾ ಎ ಮತ್ತು ಅಂಡರ್-19 ತಂಡಗಳ ಕೋಚಿಂಗ್‍ನಲ್ಲಿ ದೊಡ್ಡ ಸಾಧನೆ

3. ಟೀಮ್ ಇಂಡಿಯಾ ಎ ಮತ್ತು ಅಂಡರ್-19 ತಂಡಗಳ ಕೋಚಿಂಗ್‍ನಲ್ಲಿ ದೊಡ್ಡ ಸಾಧನೆ

ಮೊದಲೇ ಹೇಳಿದ ಹಾಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಎ ಮತ್ತು ಅಂಡರ್-19 ತಂಡಗಳನ್ನು 2015ರಿಂದ ಕೋಚ್ ಆಗಿ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. ದ್ರಾವಿಡ್ ನೇತೃತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆ ತಂಡಗಳ ರೀತಿಯೇ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪ್ರದರ್ಶನ ನೀಡುವುದು ಖಚಿತ.

4. ವಿರಾಟ್ ಕೊಹ್ಲಿ,ಅಜಿಂಕ್ಯ ರಹಾನೆಗೂ ಮಾರ್ಗದರ್ಶನ

4. ವಿರಾಟ್ ಕೊಹ್ಲಿ,ಅಜಿಂಕ್ಯ ರಹಾನೆಗೂ ಮಾರ್ಗದರ್ಶನ

ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಮಾರ್ಗದರ್ಶನವನ್ನು ನೀಡಿದರು.

Story first published: Thursday, May 20, 2021, 16:10 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X