ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್ ಅವರಷ್ಟೇ ರಾಹುಲ್ ದ್ರಾವಿಡ್ ಕೂಡ ಪ್ರಾಮುಖ್ಯರು: ಸ್ಟೀವ್ ವಾ

Rahul Dravid was as important as Sachin Tendulkar says Steve Waugh

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಸ್ಟೀವ್ ವಾ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ತಾನು ಆಡುತ್ತಿರುವ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಸಚಿನ್ ತೆಂಡೂಲ್ಕರ್ ಎಷ್ಟು ಮುಖ್ಯರಾಗಿದ್ದರೋ ರಾಹುಲ್ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರು ಎಂದಿದ್ದಾರೆ.

ಸ್ಟೀವ್ ವಾ ತಮ್ಮ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧವೇ ಆಡಿದ್ದರು. ಭಾರತೀಯ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡಿದ ವಾ "ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಭಾರತೀಯ ಬ್ಯಾಟಿಂಗ್‌ನ ಹೃದಯವನ್ನು ರಚಿಸಿದರು. ಅದು ಈವರೆಗೂ ಬಲಿಷ್ಠವಾಗಿದೆ" ಎಂದು ಸ್ಟೀವ್ ವಾ ಬಣ್ಣಿಸಿದ್ದಾರೆ.

ಟೀಮ್ ಇಂಡಿಯಾ ಪಾಳಯಕ್ಕೆ ನಿರಾಳತೆ: ಎಲ್ಲಾ ಆಟಗಾರರ ಕೊವಿಡ್ ವರದಿ ನೆಗೆಟಿವ್ಟೀಮ್ ಇಂಡಿಯಾ ಪಾಳಯಕ್ಕೆ ನಿರಾಳತೆ: ಎಲ್ಲಾ ಆಟಗಾರರ ಕೊವಿಡ್ ವರದಿ ನೆಗೆಟಿವ್

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ರಾಹುಲ್ ದ್ರಾವಿಡ್ ಅವರ ಏಕಾಗ್ರಥೆ ಮತ್ತು ಅವರ ರಕ್ಷಣಾ ತಂತ್ರ ಬಹಳ ಶ್ರೇಷ್ಠವಾಗಿದೆ. ಹಾಗಾಗಿ ಅವರನ್ನು ಸ್ಲಡ್ಜ್ ಮಾಡುವುದರಲ್ಲಿ ಅರ್ಥವೇ ಇಲ್ಲ ಎಂದು ಆಸ್ಟ್ರೇಲಿಯಾದ ಯಶಸ್ವೀ ನಾಯಕ ಸ್ಟೀವ್ ವಾ ಹೇಳಿದ್ದಾರೆ.

ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನು ಆಡಿದ್ದು 13288 ರನ್ ಬಾರಿಸಿದ್ದಾರೆ. 52.31ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಅವರು 36 ಶತಕ ಹಾಗೂ 63 ಅರ್ಧ ಶತಕವನ್ನು ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ಟೀಮ್ ಇಂಡಿಯಾದ ಅತಿ ಹೆಚ್ಚಿನ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ ದ್ರಾವಿಡ್.

ಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್‌ಗೆ ಭಾರತ ಒಪ್ಪಿಕೊಂಡಿದೆ: ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್‌ಗೆ ಭಾರತ ಒಪ್ಪಿಕೊಂಡಿದೆ: ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ

ರಾಹುಲ್ ದ್ರಾವಿಡ್ ಸದ್ಯ ಎನ್‌ಸಿಎ ಮುಖ್ಯಸ್ಥನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಟೀಮ್ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಸಾಕಷ್ಟು ಯುವ ಆಟಗಾರರನ್ನು ಬೆಳಕಿಗೆ ತಂದ ಹೆಗ್ಗಳಿಕೆಯೂ ರಾಹುಲ್ ದ್ರಾವಿಡ್ ಅವರಿಗೆ ಇದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 36 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಬಳಿಕ ಬೃಹತ್ ಅಂತರದ ಸೋಲು ಕಂಡ ನಂತರ ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾಗೆ ತೆರಳಿ ಟೀಮ್ ಇಂಡಿಯಾಗೆ ಸಲಹೆಗಳನ್ನು ನೀಡಬೇಕು ಎಂಬ ಮಾತನ್ನು ಕೆಲ ಮಾಜಿ ಕ್ರಿಕೆಟಿಗರು ಹೇಳಿದ್ದರು.

Story first published: Monday, January 4, 2021, 16:53 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X