ರಾಹುಲ್ ದ್ರಾವಿಡ್ 'ಟೀಂ ಮ್ಯಾನ್': ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ಒತ್ತು ನೀಡಲಿದ್ದಾರೆ ಎಂದ KL

ಟೀಮ್ ಇಂಡಿಯಾದ ಮುಖ್ಯ ತರಬೇತುರರಾಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ತಮ್ಮ ವೈಯಕ್ತಿಕ ಗುರಿ ಸಾಧನೆಗಿಂತ ತಂಡದ ಸಾಂಘಿಕ ಪ್ರದರ್ಶನಕ್ಕೆ ಹೆಚ್ಚು ಗಮನಹರಿಸುವಂತಹ ಸಂಸ್ಕೃತಿಯಿಂದ ಬಂದಿದ್ದು, ಅದನ್ನೇ ಇಲ್ಲಿ ತರಲಿದ್ದಾರೆ ಎಂದು ಭಾರತ ಟಿ20 ತಂಡದ ಉಪನಾಯಕ ಕೆ.ಎಲ್ ರಾಹುಲ್ ಹೇಳಿದ್ದಾರೆ.

ಟೀಂ ಇಂಡಿಯಾ ಟಿ20 ಫಾರ್ಮೆಟ್ ಹೊಸ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಡಿಯಲ್ಲಿ ಭಾರತವು ಬುಧವಾರ (ನ. 17) ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯ ಆಡಲಿದ್ದು, ಹೊಸ ಶಕೆ ಆರಂಭಗೊಂಡಿದೆ.

ನಾವು ಫಾರ್ಮೆಟ್‌ಗಳಿಗೆ ಆದ್ಯತೆ ನೀಡುವುದಿಲ್ಲ, ಮೂರು ಮುಖ್ಯವಾಗಿದೆ: ರಾಹುಲ್ ದ್ರಾವಿಡ್ನಾವು ಫಾರ್ಮೆಟ್‌ಗಳಿಗೆ ಆದ್ಯತೆ ನೀಡುವುದಿಲ್ಲ, ಮೂರು ಮುಖ್ಯವಾಗಿದೆ: ರಾಹುಲ್ ದ್ರಾವಿಡ್

ಇನ್ನು ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ್ರು. ಇದಕ್ಕೂ ಮೊದಲು ಕೆ.ಎಲ್‌ ರಾಹುಲ್‌ಗೆ ಅಂಡರ್-19, ಇಂಡಿಯಾ ಎ ತಂಡಕ್ಕೆ ಮಾಡಿರುವ ಕೋಚಿಂಗ್ ಅನುಭವವು ದ್ರಾವಿಡ್‌ಗೆ ಈಗ ಹೇಗೆ ನೆರವಾಗಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ರು.

''ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಕೆಲ ಪಂದ್ಯಗಳು ಇಂಡಿಯಾ-ಎ ಪರ ಆಡಿದ್ದೇನೆ. ಇಲ್ಲಿಗೆ ಅಭ್ಯಾಸಕ್ಕೆ ಬರುವ ಮುನ್ನವೇ ಅವರ ಜೊತೆಗೆ ಒಂದು ಸಣ್ಣ ಮಾತುಕತೆ ನಡೆಸಿದ್ದೇನೆ. ಒಂದು ಉತ್ತಮ ತಂಡದ ವಾತಾವರಣ ನಿರ್ಮಿಸುವುದು ಮತ್ತು ಒಬ್ಬ ವ್ಯಕ್ತಿ ಕ್ರಿಕೆಟ್ ಆಟಗಾರರಿಗೆ ಅತ್ಯುತ್ತಮ ಪ್ರದರ್ಶನ ನೀಡುವುದು ಅವರ ಉದ್ದೇಶವಾಗಿದೆ'' ಎಂದು ರಾಹುಲ್ ಹೇಳಿದ್ದಾರೆ.

'' ರಾಹುಲ್ ದ್ರಾವಿಡ್‌ರನ್ನು ತುಂಬಾ ವರ್ಷದಿಂದ ನಾನು ಬಲ್ಲೆ ಅವರು ಟೀಂ ಇಂಡಿಯಾದಲ್ಲಿ ಇದ್ದಾಗಲೂ ಯಾವಾಗಲೂ ತಂಡದ ಒಬ್ಬ ಸದಸ್ಯರಾಗಿದ್ದುರ. ವೈಯಕ್ತಿ ಗುರಿಸಾಧನೆಗಿಂತ ತಂಡದ ಸಾಂಘಿಕ ಹೋರಾ ಮುಖ್ಯವೆಂಬ ವಾತಾವರಣವನ್ನು ತರಲು ಪ್ರಯತ್ನಿಸುತ್ತಿದ್ದರು. ಇಲ್ಲಿ ಅವರು ಪ್ರಯತ್ನಿಸುತ್ತಿದ್ದಾರೆ'' ಎಂದು ಕೆ.ಎಲ್ ರಾಹುಲ್ ಹೇಳಿದ್ದಾರೆ.

ನಾನು ಚಿಕ್ಕವನಿದ್ದಾಗಲೇ ಅವರ ಆಟವನ್ನು ಕಲಿಯಲು ಪ್ರಯತ್ನಿಸಿದ್ದೆ. ಹಾಗಾಗಿ ಅವರ ಆಟವನ್ನು ಉತ್ತಮವಾಗಿ ಅರ್ಥಮಡಿಕೊಳ್ಳಲು ಸಾಧ್ಯವಾಯಿತು. ಅವರ ಜೊತೆ ಮಾತನಾಡಿದಾಗ ಬ್ಯಾಟಿಂಗ್ ಕೌಶಲ್ಯ ಮತ್ತಷ್ಟು ಸುಧಾರಿಸಿತು. ಅವರು ತುಂಬಾ ಒಳ್ಳೆಯ ಸೌಜನ್ಯದ ವ್ಯಕ್ತಿಯಾಗಿದ್ದ, ಕರ್ನಾಟಕ ತಂಡದಲ್ಲಿದ್ದಾಗಲು ನಮ್ಮೆಲ್ಲರಿಗೆ ನೆರವಾಗಿದ್ರು ಎಂದು ರಾಹುಲ್ ಮಾತನಾಡಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20 ಪಂದ್ಯದ ಸಮಸ್ಯೆ ಕುರಿತ ಪ್ರಶ್ನೆಗೆ ಕಿಡಿಕಾರಿದ ಕೆಎಲ್ ರಾಹುಲ್ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20 ಪಂದ್ಯದ ಸಮಸ್ಯೆ ಕುರಿತ ಪ್ರಶ್ನೆಗೆ ಕಿಡಿಕಾರಿದ ಕೆಎಲ್ ರಾಹುಲ್

ಜೊತೆಗೆ ರಾಹುಲ್ ದ್ರಾವಿಡ್ ಕೋಚ್ ಆಗಿರುವುದು ಯುವ ಆಟಗಾರರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 16, 2021, 23:28 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X