ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಡಾಗೆ ವಿವರ ಸಲ್ಲಿಸಲು ವಿಫಲ: ಕೆಎಲ್ ರಾಹುಲ್ ಸೇರಿ ಐವರು ಕ್ರಿಕೆಟಿಗರಿಗೆ ನೋಟಿಸ್

Rahul, Jadeja Get Nada Notice, Bcci Cites Password Glitch

ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಐವರು ಕ್ರಿಕೆಟಿಗರಿಗೆ ನಾಡಾ ನೋಟೀಸ್ ಕಳುಹಿಸಿದೆ. ತಾವು ಎಲ್ಲಿದ್ದೇವೆ ಎಂಬ ಕುರಿತಾಗಿ ಸಮರ್ಪಕ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ) ಶನಿವಾರ ನೋಟೀಸ್ ಜಾರಿ ಮಾಡಿದೆ.

ನೋಟೀಸ್ ಪಡೆದ ಐವರು ಕ್ರಿಕೆಟಿಗರಲ್ಲಿ ಇಬ್ಬರು ಟೀಮ್ ಇಂಡಿಯಾ ಮಹಿಳಾ ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಕೂಡ ಸೇರಿಕೊಂಡಿದ್ದಾರೆ. ಈ ನೋಟಿಸ್ ವಿಚಾರವಾಗಿ ಬಿಸಿಸಿಐ ಆಟಗಾರರ ಪರ ನಿಂತಿದ್ದು ಪಾಸ್‌ವರ್ಡ್ ಸಮಸ್ಯೆಯಿಂದಾಗಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.

'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್

ನಾಡಾ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್ ಆಟಗಾರರೆಲ್ಲರೂ ತಂತ್ರಜ್ಞಾನದಲ್ಲಿ ಪಳಗಿದವರೇ ಆಗಿದ್ದಾರೆ. ಆದರೂ ಅವರಿಗೆ ವಿವರಗಳನ್ನು ತುಂಬಲು ಆಗುತ್ತಿಲ್ಲ. ಕಾರಣ ಏನೇ ಇದ್ದರೂ ಇದಕ್ಕೆ ಅವರು ಪ್ರತಿನಿಧಿಸುವ ಸಂಸ್ಥೆ ಜವಾಬ್ಧಾರಿ. ಆಟಗಾರರ ಮಾಹಿತಿ ಒದಗಿಸುವುದಾಗಿ ಈ ಹಿಂದೆ ಬಿಸಿಸಿಐ ಒಪ್ಪಿಕೊಂಡಿದೆ. ಆದ್ದರಿಂದ ಅವರು ಅಪ್‌ಲೋಡ್ ಮಾಡಬೇಕಾಗಿತ್ತು ಎಂದು ವಿವರಿಸಿದ್ದಾರೆ.

ಸದ್ಯ ಈ ವಿಚಾರವಾಗಿ ಬಿಸಿಸಿಐ ವಿವರಗಳನ್ನು ನೀಡಿದ್ದು ಅದನ್ನು ನಾಡಾ ಪರಿಗಣಿಸಿದೆ. ಆದರೆ ಅಂತಿಮ ನಿರ್ಧಾರವನ್ನು ಈ ವಿಚಾರವಾಗಿ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕವಷ್ಟೇ ತೆಗೆದುಕೊಳ್ಳಲಾಗುತ್ತದೆ. ತಾಂತ್ರಿಕ ಅಂಶಗಳನ್ನು ಸಂಪೂರ್ಣವಾಗಿ ಪರಿಸೀಲನೆಗೆ ಒಳಪಡಿಸಲಾಗುತ್ತದೆ ಎಂದು ನವೀನ್ ಅಗರ್ವಾಲ್ ವಿವರಿಸಿದ್ದಾರೆ.

'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!

ನಾಡಾಗೆ ಮಾಹಿತಿ ನೀಡದಿರುವುದು ಗಂಭೀರ ವಿಚಾರ ಎಂದು ಪರಿಗಣಿಸಲಾಗುತ್ತದೆ. ಮಾಹಿತಿ ನೀಡಲು ಸತತ ಮೂರು ಬಾರಿ ವಿಫಲರಾದರೆ ಉದ್ದೀಪನ ಮದ್ದು ತಡೆ ಉಲ್ಲಂಘನೆ ನಿಯಮದಡಿ ಮೊದಲ ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದು ಸಾಭೀತಾದರೆ ವಿಚಾರಣೆಗಾಗಿ ಎರಡು ವರ್ಷದವರೆಗೆ ಅಮಾನತಿಗೆ ಒಳಗಾಗುವ ಸಾಧ್ಯತೆಯೂ ಇದೆ.

Story first published: Monday, June 15, 2020, 9:58 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X