ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪೂರ್ಣಕಾಲಿಕ ವಿಕೆಟ್ ಕೀಪರ್ ಆಗಲು ಸಿದ್ದ, ಆದರೆ..' : ಕೀಪಿಂಗ್ ಬಗ್ಗೆ ರಾಹುಲ್ ಪ್ರತಿಕ್ರಿಯೆ

Rahul said that he is willing to take up the role of wicket-keeper

ಟೀಮ್ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಭಾರತೀಯ ಕ್ರಿಕೆಟ್‌ನ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಾಹುಲ್ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಜವಾಬ್ಧಾರಿ ನೀಡಿದರೂ ನಾನು ಸಿದ್ಧ ಎಂಬಂತೆ ರಾಹುಲ್ ಪ್ರದರ್ಶನವನ್ನು ನೀಡಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಕೆಎಲ್ ಸೈ ಎನಿಸಿಕೊಂಡಿದ್ದಾರೆ.

ಮಾಜಿ ನಾಯಕ ಧೊನಿ ಕ್ರಿಕೆಟ್‌ನಿಂದ ದೂರವಾದಾಗಿನಿಂದ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಸಮಸ್ಯೆ ದೊಡ್ಡದಾಗಿದೆ. ಯುವ ಕ್ರಿಕೆಟಿಗ ರಿಷಭ್ ಪಂತ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದ ನಂತರ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಮಿಂಚಿದ್ದಾರೆ. ಹೀಗಾಗಿ ಸೀಮಿತ ಓವರ್‌ಗಳಲ್ಲಿ ರಾಹುಲ್ ಪೂರ್ಣಕಾಲಿಕ ಕೀಪರ್ ಆಗಿರಲಿ ಎಂಬ ಮಾತುಗಳು ಕೇಳಿಬರುತ್ತಿದೆ.

ಇದೀಗ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಕನ್ನಡಿಗ ಕೆಎಲ್ ರಾಹುಲ್ ತಾನು ಪೂರ್ಣಕಾಲಿಕ ವಿಕೆಟ್ ಕೀಪರ್ ಆಗಿ ಮುಂದುವರಿಯಲು ಸಿದ್ದವಿರುವುದಾಗಿ ಹೇಳಿಕೊಂಡಿದ್ದಾರೆ. ತಂಡಕ್ಕೆ ಅವಶ್ಯಕವಿದ್ದರೆ ನಾನು ಪೂರ್ಣಕಾಲಿಕ ವಿಕೆಟ್ ಕೀಪರ್ ಆಗಿ ಮುಂದುವರಿಯಲು ಸಿದ್ದನಿದ್ದೇನೆ, ಆದರೆ ಧೋನಿಯ ಸ್ಥಾನವನ್ನು ತುಂಬುವುದು ಕಷ್ಟ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.

ಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯಮೊದಲ ಟೆಸ್ಟ್‌ನ ಭಯಾನಕ ಅನುಭವ ಬಿಚ್ಚಿಟ್ಟ ತೆಂಡೂಲ್ಕರ್: ಕಣ್ಣೀರಿಟ್ಟ ಸಚಿನ್‌ಗೆ ರವಿ ಶಾಸ್ತ್ರಿ ಅಭಯ

ನನಗೆ ವಿಕೆಟ್ ಕೀಪಿಂಗ್ ಮಾಡುವುದು ಹೊಸತಲ್ಲ, ಐಪಿಎಲ್‌ನಲ್ಲೂ ನಾನು ವಿಕೆಟ್ ಕೀಪಿಂಗ್ ಮಾಡುತ್ತೇನೆ, ಕರ್ನಾಟಕ ತಂಡದ ಪರವಾಗಿ ಆಡಿದಾಗಲೂ ನಾನು ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ನಿರ್ವಹಿಸಿದ್ದೇನೆ, ಹೀಗಾಗಿ ತಂಡಕ್ಕೆ ಅಗತ್ಯವಿದ್ದರೆ ನಾನು ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

ಮುಂದುವರಿದು ಮಾತನಾಡಿದ ರಾಹುಲ್ ಟೀಮ್ ಇಂಡಿಯಾ ಪರವಾಗಿ ವಿಕೆಟ್ ಕೀಪಿಂಗ್ ಮಾಡುವಾಗ ಸಾಕಷ್ಟು ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ. 'ಪ್ರೇಕ್ಷಕರ ಒತ್ತಡದಿಂದಾಗಿ ನಾನು ನರ್ವಸ್ ಆಗಿದ್ದೆ, ಸ್ವಲ್ಪವೇ ಎಡವಿದರೂ ಪ್ರೇಕ್ಷಕರು ಧೋನಿಯ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಿರ್ಧರಿಸುತ್ತಾರೆ. ಎಂಎಸ್ ಧೋನಿಯಂತಾ ಅನುಭವಿ ವಿಕೆಟ್ ಕೀಪರ್‌ನ ಸ್ಥಾನವನ್ನು ತುಂಬುವುದರ ಜೊತೆಗೆ ಪ್ರೇಕ್ಷಕರು ಆ ಸ್ಥಾನದಲ್ಲಿ ಬೇರೊಬ್ಬರನ್ನು ಸ್ವೀಕರಿಸುವುದು ಕೂಡ ಇಲ್ಲಿ ಪ್ರಮುಖ ವಿಚಾರವಾಗುತ್ತದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

Story first published: Monday, April 27, 2020, 18:02 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X