ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೆಕೆಆರ್ ವಿರುದ್ಧ ರಾಜಸ್ಥಾನ್ ಸೋಲಿಗೆ ಕಾರಣ ತಿಳಿಸಿದ ರಾಬಿನ್ ಉತ್ತಪ್ಪ

Rajasthan Royals Failed To Adapt To A Slow Pitch: Robin Uthappa

ಮೊದಲ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ಮುನ್ನಗ್ಗುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೂರನೇ ಕಾದಾಟದಲ್ಲಿ ಎಡವಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ 37 ರನ್‌ಗಳ ಸೋಲನ್ನು ಅನುಭವಿಸಿತು. ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ. ಕೆಕೆಆರ್ ವಿರುದ್ಧದ ಸೋಲಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕಾರಣವನ್ನು ಹೇಳಿದ್ದಾರೆ.

ನಿಧಾನಗತಿಯ ಪಿಚ್‌ಗೆ ತಂಡ ಹೊಂದಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದೇ ನಮ್ಮ ತಂಡದ ಸೋಲಿಗೆ ಕಾರಣ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೊದಲ ಎರಡು ಪಂದ್ಯಗಳನ್ನು ಶಾರ್ಜಾ ಕ್ರೀಡಾಂಗಣದಲ್ಲಿ ಆಡಿದ್ದರೆ ನಿನ್ನೆಯ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಡಾಂಗಣದಲ್ಲಿ ನಡೆದಿತ್ತು.

ಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜ

175 ರನ್‌ಗಳ ಗುರಿಯನ್ನು ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ರಾಜಸ್ಥಾನ್ ತಂಡದ ಬ್ಯಾಟಿಂಗ್ ಸಂದರ್ಭದಲ್ಲಿ 15 ಓವರ್‌ಗಳಲ್ಲಿ 88 ರನ್‌ಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ ಬಳಿಕ ಟಾಮ್ ಕರ್ರಮ್ ಅವರ 54 ರನ್‌ಗಳ ಪ್ರದರ್ಶನ ಆರ್‌ಆರ್ ತಂಡದ ಸೋಲಿಕ ಅಂತರವನ್ನು ಕಡಿಮೆ ಮಾಡಲು ಕಾರಣವಾಯಿತು.

ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಉತ್ತಪ್ಪ "ಪಿಚ್ ತುಂಬಾ ನಿಧಾನಗತಿಯದ್ದಾಗಿತ್ತು. ಹಾಗಾಗಿ ನಾವು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗಿತ್ತು. ಸ್ವಲ್ಪ ಕಾಲ ಪಿಚ್‌ನಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಸಮಯವನ್ನು ಪಡೆದುಕೊಂಡು ಬಳಿಕ ಬೌಲರ್‌ಗಳ ಮೇಲೆ ದಾಳಿಯನ್ನು ನಡೆದಬೇಕಾಗಿತ್ತು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಐಪಿಎಲ್ 2020: ಇಂದು ಮುಂಬೈ ಇಂಡಿಯನ್ಸ್‌ಗೆ ಪಂಜಾಬ್ ಹುಡುಗರ ಸವಾಲ್ಐಪಿಎಲ್ 2020: ಇಂದು ಮುಂಬೈ ಇಂಡಿಯನ್ಸ್‌ಗೆ ಪಂಜಾಬ್ ಹುಡುಗರ ಸವಾಲ್

ನಾವು ಹಿಂದಿನ ಪಂದ್ಯದಲ್ಲಿ ದೊಡ್ಡ ಸ್ಕೋರ್‌ಅನ್ನು ಬೆನ್ನಟ್ಟಿದ್ದೇವೆ. ಖಂಡಿತವಾಗಿಯೂ ಆ ಆಟದಿಂದಾಗಿ ನಾವು ವಿಶ್ವಾಸವನ್ನು ಹೊಂದಿದ್ದೆವು. ಪಿಚ್ ಚೆನ್ನಾಗಿ ಹೊಂದುತ್ತದ ಎಂದು ಭಾವಿಸಿದ್ದೆವು. ಆದರೆ ವಿಕೆಟ್‌ನ ವೇಗಕ್ಕೆ ಹೊಂದೊಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದಿತ್ತು. ನಂತರ ಎದುರಾಳಿಗಳ ಮೇಲೆ ದಾಳಿ ನಡೆಸಬಹುದಾಗಿತ್ತು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

Story first published: Thursday, October 1, 2020, 15:01 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X