ಐಪಿಎಲ್ 2020: ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಕೋಚ್‌ಗೆ ಕೊರೊನಾ ಸೋಂಕು ದೃಢ

ಐಪಿಎಲ್ 2020ಗೂ ಮುನ್ನ ನಡೆದ ಕೋವಿಡ್ 19 ಪರೀಕ್ಷೆಯಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್‌ಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಈ ಬಗ್ಗೆ ಕ್ರಿಕ್ ಬಜ್ ವರದಿ ಮಾಡಿದೆ.

ಮುಂಬೈನಲ್ಲಿ ಯುಎಇಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಒಟ್ಟು ಸೇರುವುದಕ್ಕೂ ಮುನ್ನ ಸುರಕ್ಷತಾ ದೃಷ್ಠಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ದಿಶಾಂತ್ ಯಾಗ್ನಿಕ್ ಕೊರೊನಾ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿ

ಬಿಸಿಸಿಐ ನಿಯಮದ ಪ್ರಕಾರ ಯುಎಇಗೆ ಪ್ರಯಾಣಿಸುವುದಕ್ಕೂ ಮುನ್ನ ಎರಡು ಕೋವಿಡ್ ಪರೀಕ್ಷೆಗಳನ್ನು 24 ಗಂಟೆಗಳ ಅಂತರದಲ್ಲಿ ನಡೆಸಬೇಕಿದೆ. ಆದರೆ ಫ್ರಾಂಚೈಸಿಗಳು ಈ ಬಗ್ಗೆ ಮತ್ತಷ್ಟು ಮುಂಜಾಗ್ರತೆಯನ್ನು ಕೈಗೊಂಡಿದ್ದು ಇದಕ್ಕೂ ಮುನ್ನವೇ ಪರೀಕ್ಷೆಯನ್ನು ನಡೆಸಿತ್ತು.

ದಿಶಾಂತ್ ಸದ್ಯ ತಮ್ಮ ಉದಯಪುರದ ನಿವಾಸದಲ್ಲಿದ್ದಾರೆ. ಹೀಗಾಗಿ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿದೆ. 14 ದಿನಗಳ ಕ್ವಾರಂಟೈನ್‌ಗಾಗಿ ಪೂರೈಸಿ ಬಳಿಕ ನೆಗೆಟಿವ್ ವರದಿಯೊಂದಿಗೆ ತಂಡವನ್ನು ಸೇರಿಕೊಳ್ಳುವ ಅವಕಾಶವಿದೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಇದೇ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ದಿಶಾಂತ್ ತಮ್ಮ ಊರಿನಲ್ಲೇ ಈ ಸಂದರ್ಭದಲ್ಲಿ ಇದ್ದು, ತಂಡದ ಯಾವುದೇ ಇತರ ಆಟಗಾರರು ದಿಶಾಂತ್ ಜೊತೆಗೆ ಸಾಮಿಪ್ಯವನ್ನು ಕಾಯ್ದುಕೊಂಡಿರಲಿಲ್ಲ ಎಂದು ಖಚಿತಪಡಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, August 12, 2020, 12:39 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X