ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜಸ್ಥಾನ್ ಫ್ರಾಂಚೈಸಿಯಿಂದ 7.5 ಕೋಟಿ ರೂಪಾಯಿ ದೇಣಿಗೆ

Rajasthan Royals franchise donate ₹7.5 crore to fight against Covid-19

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಹಂತ ಭಯಾನಕ ರೀತಿಯಲ್ಲಿ ಪಸರಿಸುತ್ತಿದೆ. ಇದರ ವಿರುದ್ಧದ ಹೋರಾಟಕ್ಕೆ ಈಗ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ಕೈ ಜೋಡಿಸಿದೆ. 7.5 ಕೋಟಿ ರೂಪಾಯಿ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ ತಂಡ ದೇಣಿಗೆಯಾಗಿ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿದೆ.

"ಕೊರೊನಾ ವೈರಸ್‌ನ ತೀವ್ರ ಏರಿಕೆಯಿಂದಾಗಿ ಭಾರತದ ಜನರಿಗೆ ತಕ್ಷಣವೇ ಸಹಾಯವಾಗುವ ನಿಟ್ಟಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ 7.5 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಲು ಸಂತಸಪಡುತ್ತದೆ" ಎಂದು ತನ್ನ ವೆಬ್‌ಸೈಟ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಘೋಷಿಸಿದೆ.

ಐಪಿಎಲ್ 2021: ಚೆನ್ನೈ ಪರ ದಾಖಲೆ ಬರೆದ ಡು ಪ್ಲೆಸಿಸ್, ಋತುರಾಜ್

"ತಂಡದ ಮಾಲೀಕರು, ಮ್ಯಾನೇಜ್‌ಮೆಂಟ್ ಹಾಗೂ ಆಟಗಾರರೊಂದಿಗೆ ದೇಣಿಗೆ ನೀಡಲು ಮುಂದೆ ಬಂದಿದೆ. ಬ್ರಿಟೀಷ್ ಏಷ್ಯನ್ ಟ್ರಸ್ಟ್ ಸಹಭಾಗಿತ್ವದಲ್ಲಿ ರಾಯಲ್ ರಾಜಸ್ಥಾನ್ ಫೌಂಡೇಶನ್ ಇದಕ್ಕಾಗಿ ಕಾರ್ಯನಿರತವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮೂಲಕ ಎರಡನೇ ಅಲೆಯ ಕೊರೊನಾ ವೈರಸ್‌ನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಐಪಿಎಲ್‌ನ ಮೊದಲ ಫ್ರಾಂಚೈಸಿ ಎನಿಸಿಕೊಂಡಿದೆ ರಾಜಸ್ಥಾನ್ ರಾಯಲ್ಸ್. ಇದಲ್ಲೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರ ಪ್ಯಾಟ್ ಕಮ್ಮಿನ್ಸ್ 50,000 ಡಾಲರ್ ಮೊತ್ತವನ್ನು ನೀಡಿದ್ದರೆ ಮಾಜಿ ಕ್ರಿಕೆಟಿಗ ಬ್ರೆಟ್ ಲೀ 1 ಬಿಟ್ ಕಾಯಿನ್‌ಅನ್ನು ದೇಣಿಗೆಯಾಗಿ ನೀಡಿದ್ದರು.

Story first published: Thursday, April 29, 2021, 15:54 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X