ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019ರಲ್ಲಿ ಪಿಂಕ್ ಜರ್ಸಿ ತೊಟ್ಟು ರಾಜಸ್ಥಾನ ಕಣಕ್ಕೆ

Rajasthan Royals Go Pink for IPL 2019

ಜೈಪುರ, ಫೆಬ್ರವರಿ 11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 12ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹೊಸ ವಿನ್ಯಾಸದ ಹೊಸ ಬಣ್ಣದ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಪಂದ್ಯದ ವೇಳೆ ವೇಗಿ ಅಶೋಕ್ ದಿಂಡಾ ತಲೆಗೆ ಬಡಿದ ಚೆಂಡು ಪಂದ್ಯದ ವೇಳೆ ವೇಗಿ ಅಶೋಕ್ ದಿಂಡಾ ತಲೆಗೆ ಬಡಿದ ಚೆಂಡು

ರಾಜಸ್ಥಾನ ತಂಡವು ಪಿಂಕ್ ಜರ್ಸಿ ಧರಿಸಿ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ನೀಲಿ ಬಣ್ಣದ ಜರ್ಸಿ ತೊಟ್ಟು ಆಟವಾಡಿತ್ತು. ಜೈಪುರವನ್ನು ಪಿಂಕ್ ಸಿಟಿ ಎಂದೇ ಕರೆಯಲಾಗುತ್ತೆ, ಜೋಧ್ ಪುರ್ ನಲ್ಲಿ ಪಿಂಕ್ ಜಲ್ಲಿಕಲ್ಲು ಜನಪ್ರಿಯ, ಉದಯ್ ಪುರ್ ನಲ್ಲಿ ಪಿಂಕ್ ಮಾರ್ಬಲ್ ಹೆಚ್ಚಾಗಿ ಸಿಗುತ್ತದೆ. ಹೀಗಾಗಿ, ತಂಡವು ಪಿಂಕ್ ಜರ್ಸಿ ತೊಡಲಿದೆ ಎಂದು ರಾಜಸ್ಥಾನ್ ರಾಯಲ್ಸ್ ವಕ್ತಾರರು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಆಯೋಜನೆಯ ಕಾರ್ಯಕ್ರಮವೊಂದರಲ್ಲಿ ತಂಡದ ನಾಯಕ ನಾಯಕ ಅಜಿಂಕ್ಯ ರಹಾನೆ ಅವರು ತಂಡದ ಹೊಸ ಪಿಂಕ್ ಜರ್ಸಿಯನ್ನು ಅನಾವರಣಗೊಳಿಸಿದರು. ಅಧಿಕೃತ ಟ್ವೀಟ್ ಖಾತೆಯಲ್ಲೂ ಹೊಸ ಜರ್ಸಿಗಳನ್ನು ಪರಿಚಯಿಸಲಾಯಿತು.



ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಒಂದು ಪಂದ್ಯದಲ್ಲಿ ಪಿಂಕ್ ಜರ್ಸಿ ತೊಟ್ಟಿತ್ತು. ಹೊಸ ಜರ್ಸಿ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರ್ನ್ ಅವರು ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ರಾಯಭಾರಿಯಾಗಿದ್ದಾರೆ. ಐಪಿಎಲ್ ನ ಚೊಚ್ಚಲ ಆವೃತ್ತಿಯಲ್ಲಿ ನಾಯಕನಾಗಿದ್ದ ವಾರ್ನ್ ಅವರು ರಾಜಸ್ಥಾನಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು.

Story first published: Monday, February 11, 2019, 20:32 [IST]
Other articles published on Feb 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X