ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್ ಇನ್ನು ಪಂದ್ಯ ಆಡಲ್ಲ!

Rajasthan Royals pacer Jofra Archer will not play in IPL 2021, confirms ECB

ಚೆನ್ನೈ: ರಾಜಸ್ಥಾನ್ ರಾಯಲ್ಸ್‌ಗೆ ಹಿನ್ನಡೆಯ ಸಂಗತಿ ಕೇಳಿ ಬಂದಿದೆ. ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 14ನೇ ಆವೃತ್ತಿಯಲ್ಲಿ ಇನ್ನು ಆರ್ಆರ್ ಪರ ಯಾವುದೇ ಪಂದ್ಯಗಳನ್ನಾಡಲ್ಲ, ಇದನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಖಾತರಿಪಡಿಸಿದೆ.

ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!

ಭಾರತ-ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಜೋಫ್ರಾ ಆರ್ಚರ್ ಕೈಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಈ ಬಾರಿ ಐಪಿಎಲ್ ಆರಂಭದಿಂದಲೂ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರಲಿಲ್ಲ. ಟೂರ್ನಿಯ ಅರ್ಧದಿಂದಾದರೂ ಆರ್ಚರ್ ಆಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ.

ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ಆಡುತ್ತಿಲ್ಲ ಎಂಬ ವಿಚಾರವನ್ನು ಶುಕ್ರವಾರ (ಏಪ್ರಿಲ್ 23) ಇಂಗ್ಲೆಂಡ್ ಕ್ರಿಕೆಟ್‌ ಬೋಡ್ ಖಾತರಿಪಡಿಸಿದೆ. ಆರ್ಚರ್ ಮೈದಾನದಲ್ಲಿ ಗಾಯ ಮಾಡಿಕೊಂಡಿದ್ದಲ್ಲ. ತನ್ನ ಮನೆಯ ಫಿಶ್‌ ಟ್ಯಾಂಕ್‌ ಸ್ವಚ್ಛ ಮಾಡುವಾಗ ಗಾಜು ಕುಯ್ದು ಗಾಯ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.

ಪಡಿಕ್ಕಲ್ ಶತಕಕ್ಕೆ ಪ್ರಶಂಸೆಯ ಸುರಿಮಳೆಗೈದ ಸಂಗಕ್ಕಾರಪಡಿಕ್ಕಲ್ ಶತಕಕ್ಕೆ ಪ್ರಶಂಸೆಯ ಸುರಿಮಳೆಗೈದ ಸಂಗಕ್ಕಾರ

Punjab ವಿರುದ್ಧ ಸೋತರು ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ | Oneindia Kannada

'ಸಸೆಕ್ಸ್ ಬೌಲರ್ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್‌ 2021ರಲ್ಲಿ ಆಡುತ್ತಿಲ್ಲ ಎಂಬುದನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಖತರಿಪಡಿಸಲು ಬಯಸುತ್ತದೆ,' ಎಂದು ಇಸಿಬಿ ಹೇಳಿದೆ.

Story first published: Saturday, April 24, 2021, 9:53 [IST]
Other articles published on Apr 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X