ಚೆನ್ನೈ: ರಾಜಸ್ಥಾನ್ ರಾಯಲ್ಸ್ಗೆ ಹಿನ್ನಡೆಯ ಸಂಗತಿ ಕೇಳಿ ಬಂದಿದೆ. ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲಿ ಇನ್ನು ಆರ್ಆರ್ ಪರ ಯಾವುದೇ ಪಂದ್ಯಗಳನ್ನಾಡಲ್ಲ, ಇದನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಖಾತರಿಪಡಿಸಿದೆ.
ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್ಸಿಬಿ ಹೆಸರಿನಲ್ಲಿ ಮಾತ್ರ!
ಭಾರತ-ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಜೋಫ್ರಾ ಆರ್ಚರ್ ಕೈಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಈ ಬಾರಿ ಐಪಿಎಲ್ ಆರಂಭದಿಂದಲೂ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರಲಿಲ್ಲ. ಟೂರ್ನಿಯ ಅರ್ಧದಿಂದಾದರೂ ಆರ್ಚರ್ ಆಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ.
ಐಪಿಎಲ್ನಲ್ಲಿ ಜೋಫ್ರಾ ಆರ್ಚರ್ ಆಡುತ್ತಿಲ್ಲ ಎಂಬ ವಿಚಾರವನ್ನು ಶುಕ್ರವಾರ (ಏಪ್ರಿಲ್ 23) ಇಂಗ್ಲೆಂಡ್ ಕ್ರಿಕೆಟ್ ಬೋಡ್ ಖಾತರಿಪಡಿಸಿದೆ. ಆರ್ಚರ್ ಮೈದಾನದಲ್ಲಿ ಗಾಯ ಮಾಡಿಕೊಂಡಿದ್ದಲ್ಲ. ತನ್ನ ಮನೆಯ ಫಿಶ್ ಟ್ಯಾಂಕ್ ಸ್ವಚ್ಛ ಮಾಡುವಾಗ ಗಾಜು ಕುಯ್ದು ಗಾಯ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.
ಪಡಿಕ್ಕಲ್ ಶತಕಕ್ಕೆ ಪ್ರಶಂಸೆಯ ಸುರಿಮಳೆಗೈದ ಸಂಗಕ್ಕಾರ
'ಸಸೆಕ್ಸ್ ಬೌಲರ್ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್ 2021ರಲ್ಲಿ ಆಡುತ್ತಿಲ್ಲ ಎಂಬುದನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಖತರಿಪಡಿಸಲು ಬಯಸುತ್ತದೆ,' ಎಂದು ಇಸಿಬಿ ಹೇಳಿದೆ.