ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್‌

 Rajasthan Royals Won Against KXIP

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 186ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ ಪರ ಓಪನರ್ ಬೆನ್‌ ಸ್ಟೋಕ್ಸ್‌ ಭರ್ಜರಿ ಆರಂಭ ಒದಗಿಸಿದರು. 23 ಎಸೆತಗಳಲ್ಲಿ 50 ರನ್ ಸಿಡಿಸಿದ ಸ್ಟೋಕ್ಸ್ ಆರಂಭದಲ್ಲೇ ತಂಡಕ್ಕೆ ಗೆಲುವಿನ ಮುನ್ಸೂಚನೆ ಕೊಟ್ಟರು. ಇವರ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ಇನ್ನು ಸ್ಟೋಕ್ಸ್‌ಗೆ ಸಾಥ್ ಕೊಟ್ಟ ರಾಬಿನ್ ಉತ್ತಪ್ಪ 30 ರನ್‌ಗಳಿಸಿ ನಂತರ ವಿಕೆಟ್ ಒಪ್ಪಿಸಿದ್ರೆ, ಸಂಜು ಸ್ಯಾಮ್ಸನ್ 48, ಸ್ಟೀವ್ ಸ್ಮಿತ್ ಅಜೇಯ 31, ಜಾಸ್‌ ಬಟ್ಲರ್ 21ರನ್‌ ದಾಖಲಿಸಿ ತಂಡಕ್ಕೆ ಏಳು ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ ನಾಯಕ ಕೆ.ಎಲ್ ರಾಹುಲ್ ಹಾಗೂ ಕ್ರಿಸ್‌ಗೇಲ್ ಭರ್ಜರಿ ಆಟವಾಡಿದ್ರು. ಮೊದಲ ಓವರ್‌ನಲ್ಲೇ ಮಂದೀಪ್ ಸಿಂಗ್ ಔಟಾದ ಬಳಿಕ ಕೆ.ಎಲ್ ರಾಹುಲ್ 46ರನ್‌ಗಳಿಸಿ ಔಟಾದ್ರು. ವಿಶ್ವದಾಖಲೆಯ 1000ನೇ ಟಿ20 ಸಿಕ್ಸರ್‌ ಸಿಡಿಸಿದ್ದ ಕ್ರಿಸ್‌ಗೇಲ್‌ 99ರನ್‌ಗೆ ಔಟಾದ್ರು. ನಿಕೋಲಸ್ ಪೂರನ್ 22 ರನ್‌ಗಳಿಸಿದರ ಪರಿಣಾಮ ಅಂತಿಮವಾಗಿ ನಾಲ್ಕು ವಿಕೆಟ್ ಕಳೆದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ 185ರನ್ ಕಲೆಹಾಕಿತು.

ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಬಡ್ತಿ ಪಡೆದಿದ್ದು, 12 ಪಾಯಿಂಟ್ಸ್‌ಗಳೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Story first published: Saturday, October 31, 2020, 9:41 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X